»   » ಸೈಲೆಂಟ್ ಆಗಿ ನಡೆದಿದೆ ಉಪೇಂದ್ರ ರವರ 50ನೇ ಚಿತ್ರದ ಸ್ಕ್ರಿಪ್ಟ್ ಪೂಜೆ

ಸೈಲೆಂಟ್ ಆಗಿ ನಡೆದಿದೆ ಉಪೇಂದ್ರ ರವರ 50ನೇ ಚಿತ್ರದ ಸ್ಕ್ರಿಪ್ಟ್ ಪೂಜೆ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಅಭಿಮಾನಿಗಳಿಗೆ ಗೊತ್ತಿರುವ ಹಾಗೆ, ಉಪೇಂದ್ರ ಸದ್ಯ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆ ನಟಿ ರಚಿತಾ ರಾಮ್ ಜೊತೆ ಹೊಸ ಚಿತ್ರದ ಮುಹೂರ್ತ ನೆರವೇರಿಸಿಕೊಟ್ಟಿದ್ದಾರೆ.

ಹೀಗಿರುವಾಗಲೇ, ಉಪೇಂದ್ರ ರವರ 50ನೇ ಚಿತ್ರದ ಸ್ಕ್ರಿಪ್ಟ್ ಪೂಜೆ ಸದ್ದು-ಗದ್ದಲ ಇಲ್ಲದೇ, ಸುದ್ದಿ ಮಾಡದೇ ಸೈಲೆಂಟ್ ಆಗಿ ನಡೆದಿದೆ.

ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ ನಿರ್ದೇಶಕ

ರಿಯಲ್ ಸ್ಟಾರ್ ಉಪೇಂದ್ರ ರವರ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಹೊರಟಿರುವ ನಿರ್ದೇಶಕ ಮಂಜು ಮಾಂಡವ್ಯ ಶಾಸ್ತ್ರೋಕ್ತವಾಗಿ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ. [ಉಪೇಂದ್ರ ಅವರ 50ನೇ ಚಿತ್ರಕ್ಕೆ 'ಆಕ್ಷನ್-ಕಟ್' ಯಾರದ್ದು?]

ಮೊದಲು ಯಶ್, ಈಗ ಉಪೇಂದ್ರ

ತಮ್ಮ ಚೊಚ್ಚಲ ನಿರ್ದೇಶನದಲ್ಲೇ ರಾಕಿಂಗ್ ಸ್ಟಾರ್ ಯಶ್ ಅವರನ್ನ 'ಮಾಸ್ಟರ್ ಪೀಸ್' ಮಾಡಿ ಬಾಕ್ಸ್ ಆಫೀಸ್ ಪೀಸ್ ಪೀಸ್ ಮಾಡಿದ್ದ ಮಂಜು ಮಾಂಡವ್ಯ, ಇದೀಗ ಉಪ್ಪಿ 50ನೇ ಚಿತ್ರಕ್ಕೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. [ಉಪೇಂದ್ರ ಮತ್ತು ನಟಿ ಪ್ರೇಮ ಕುರಿತ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ.!]

ಉಪೇಂದ್ರ ಶೈಲಿಯ ಸಿನಿಮಾ

''ಎಲ್ಲೆಡೆ 'ಉಪ್ಪಿ-2' ಸಂಚಲನ ಮೂಡಿಸಿದಂತೆ, ಈ ಸಿನಿಮಾ ಕೂಡ ಉಪೇಂದ್ರ ಅವರ ಹೊಸ ಸ್ಟೈಲ್ ನಲ್ಲಿ ಅಲೆ ಎಬ್ಬಿಸಲಿದೆ'' ಎನ್ನುತ್ತಾರೆ ನಿರ್ದೇಶಕ ಮಂಜು ಮಾಂಡವ್ಯ.

ಹೆಸರು ಇನ್ನೂ ಫೈನಲ್ ಆಗಿಲ್ಲ

ಸದ್ಯಕ್ಕೆ ಸ್ಕ್ರಿಪ್ಟ್ ಪೂಜೆ ಮುಗಿಸಿ, ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಮಂಜು ಮಾಂಡವ್ಯ ಬಿಜಿಯಾಗಿದ್ದಾರೆ. ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಮಾಡಿಲ್ಲ.

English summary
Director Manju Mandavya is all set to direct Upendra's 50th movie. Here is the picture of Manju Mandavya performing script pooja.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X