»   » ಚಿತ್ರಗಳು; 9ನೇ ಬೆಂಗಳೂರು ಚಿತ್ರೋತ್ಸವದ ವರ್ಣರಂಜಿತ ಕ್ಷಣಗಳು

ಚಿತ್ರಗಳು; 9ನೇ ಬೆಂಗಳೂರು ಚಿತ್ರೋತ್ಸವದ ವರ್ಣರಂಜಿತ ಕ್ಷಣಗಳು

Posted By:
Subscribe to Filmibeat Kannada

9ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ಶುರುವಾಗಿದ್ದು, ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಕನ್ನಡ ಹಾಗೂ ವಿದೇಶಿ ಚಿತ್ರಗಳ ಕಲರವ ನಡೆಯಲಿದೆ.

ಸುಮಾರು 60 ದೇಶಗಳ 240 ಚಿತ್ರಗಳು ಚಿತ್ರೋತ್ಸವದಲ್ಲಿ ಭಾಗಿಯಾಗಲಿದ್ದು, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ.['ಬೆಂಗಳೂರು ಚಿತ್ರೋತ್ಸವ'ಕ್ಕೆ ಸಿ.ಎಂ ಚಾಲನೆ: ವಿಧಾನಸೌಧದ ಮೇಲೆ ಕನ್ನಡ ಸಂಸ್ಕ್ರತಿ ಅನಾವರಣ]

9ನೇ ಆವೃತ್ತಿಯ ಸಿನಿಮೋತ್ಸವ ನಿನ್ನೆ (ಫೆಬ್ರವರಿ 2) ಸಂಪ್ರದಾಯವಾಗಿ ಪ್ರಾರಂಭವಾಗಿದ್ದು, ಮೊದಲ ದಿನದ ಕಲರ್ ಫುಲ್ ಕ್ಷಣಗಳು ಇಲ್ಲಿದೆ.

ಚಿತ್ರೋತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ

9ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ (ಫೆಬ್ರವರಿ 2) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವರಾದ ಕೆ.ಜೆ ಜಾರ್ಜ್, ಊಮಾಶ್ರೀ, ಶಾಸಕ ಮುನಿರತ್ನಂ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು, ಅಕಾಡೆಮಿ ಅಧ್ಯಕ್ಷರಾದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಉಪಸ್ಥಿತರಿದ್ದರು.

'ಈಜಿಫ್ಟ್'ನ ಹಲ ಖಲೀಲ್ ಅತಿಥಿ

9ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಮುಖ್ಯ ಅತಿಥಿಗಳಾಗಿ ಈಜಿಫ್ಟ್ ನ ಖ್ಯಾತ ನಿರ್ದೇಶಕಿ ಹಲ ಖಲೀಲ್ ಆಗಮಿಸಿದ್ದರು.

ಪುನೀತ್ ರಾಜ್ ಕುಮಾರ್ ಭಾಗಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಈ ಬಾರಿಯ ಅಂತರರಾಷ್ಟ್ರೀಯ ಚಿತ್ರೋತ್ಸವದ ವಿಶೇಷ ಅತಿಥಿಗಳಾಗಿ ಭಾಗಿಯಾಗಿದ್ದರು.

3D ವಿಡಿಯೋ ಮ್ಯಾಪಿಂಗ್

ಇದೇ ಮೊದಲ ಭಾರಿಗೆ ವಿಧಾನಸೌಧದ ಮೇಲೆ 3D ವಿಡಿಯೋ ಮ್ಯಾಪಿಂಗ್ ತಂತ್ರಜ್ಞಾನವನ್ನ ಬಳಿಸಿ, ಕರ್ನಾಟಕ ರಾಜ್ಯದ ಸಂಸ್ಕ್ರತಿ, ಪರಂಪರೆ ಹಾಗೂ ಕನ್ನಡ ಸಿನಿಮಾದ ಬೆಳವಣಿಗೆಯನ್ನ ಲೇಸರ್ ಲೈಟ್ ಮೂಲಕ ವರ್ಣರಂಜಿತವಾಗಿ ಬಿತ್ತರಿಸಲಾಯಿತು.

ಭಾರತಿ-ಜಯಂತಿ ಭಾಗಿ

ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಜಯಂತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುಹಾಸಿನಿ-ರಮೇಶ್ ನಿರೂಪಣೆ

ಈ ವರ್ಣರಂಜಿತ ಕಾರ್ಯಕ್ರಮವನ್ನ ದಕ್ಷಿಣ ಭಾರತದ ಬಹುಭಾಷ ನಟಿ ಸುಹಾಸಿನಿ ಮಣಿರತ್ನಂ ಹಾಗೂ ಕನ್ನಡ ನಟ ರಮೇಶ್ ಅರವಿಂದ್ ಅವರು ನಿರ್ವಹಿಸಿದರು.

ಅದ್ಭುತ ಕ್ಷಣಗಳು

ಉಳಿದಂತೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ವೇದಿಕೆ ನಿರ್ಮಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಚಿತ್ರಪ್ರೇಮಿಗಳು ಭಾಗವಹಿಸಿದ್ದರು.

English summary
Karnataka karnataka chief minister siddaramaiah Inaugurate the 9th Edition of Bengaluru International Film Festival (BIFFES) on thursday (february 02) In front of vidhana soudha. check out in pics....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada