»   » ಧಾಂ ಧೂಂ ಆಗಿ ನಡೆದ ನಾಗಾರ್ಜುನ ಪುತ್ರ ಅಖಿಲ್ ನಿಶ್ಚಿತಾರ್ಥ

ಧಾಂ ಧೂಂ ಆಗಿ ನಡೆದ ನಾಗಾರ್ಜುನ ಪುತ್ರ ಅಖಿಲ್ ನಿಶ್ಚಿತಾರ್ಥ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ನಿನ್ನೆ (ಡಿಸೆಂಬರ್ 9) ರಾಕಿಂಗ್ ಸ್ಟಾರ್ ಯಶ್ - ರಾಧಿಕಾ ಪಂಡಿತ್ ನವ ಜೀವನಕ್ಕೆ ಕಾಲಿಟ್ಟರೆ, ಅತ್ತ ಟಾಲಿವುಡ್ ನಲ್ಲಿ ಅಖಿಲ್ ಅಕ್ಕಿನೇನಿ ಎಂಗೇಜ್ ಆದರು.

ಹೌದು, ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಹಾಗೂ ಅಮಲಾ ದಂಪತಿಯ ಪುತ್ರ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ ಶ್ರಿಯಾ ಭೂಪಾಲ್ ರವರ ಜೊತೆ ನಿನ್ನೆ ಹೈದರಾಬಾದ್ ನ ಜಿವಿಕೆ ಹೌಸ್ ನಲ್ಲಿ ಧಾಂ ಧೂಂ ಆಗಿ ನಡೆಯಿತು.

ಉಂಗುರ ತೊಡಿಸಿದ ಅಖಿಲ್ ಅಕ್ಕಿನೇನಿ

ಅಕ್ಕಿನೇನಿ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಆಪ್ತರು ಮಾತ್ರ ಹಾಜರಿದ್ದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಶ್ರಿಯಾ ಭೂಪಾಲ್ ಗೆ ಅಖಿಲ್ ಅಕ್ಕಿನೇನಿ ಉಂಗುರ ತೊಡಿಸಿದ ಕ್ಷಣ....

ಅಖಿಲ್-ಶ್ರಿಯಾ ಲವ್ ಸ್ಟೋರಿ...

ಫ್ಯಾಶನ್ ಡಿಸೈನರ್ ಆಗಿರುವ ಶ್ರಿಯಾ ಭೂಪಾಲ್ ರವರನ್ನ ಕಾರ್ಯಕ್ರಮವೊಂದರಲ್ಲಿ ಪರಿಚಯ ಮಾಡಿಕೊಂಡ ಬಳಿಕ ಅಖಿಲ್ ಅಕ್ಕಿನೇನಿ ಹೃದಯದಲ್ಲಿ ಪ್ರೀತಿಯ ಮೊಳಕೆಯೊಡೆದಿದೆ. ಮೀಟಿಂಗ್, ಡೇಟಿಂಗ್ ಆದ ಬಳಿಕ ಇಬ್ಬರ ಪ್ರೇಮ ಪುರಾಣ ಮನೆಯವರಿಗೆ ಗೊತ್ತಾಗಿದೆ. ಹಿರಿಯರ ಸಮ್ಮತಿ ಪಡೆದು ಮನದನ್ನೆ ಶ್ರಿಯಾ ಭೂಪಾಲ್ ಜೊತೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ ಮಾಡಿಕೊಂಡರು. [ನಾಗಾರ್ಜುನ ಕುಟುಂಬದಲ್ಲಿ ಬರುವ ವರ್ಷ ಮದುವೆ]

ಅಖಿಲ್ ನಿಶ್ಚಿತಾರ್ಥದಲ್ಲಿ ಸಮಂತಾ

ನಾಗ ಚೈತನ್ಯ ಹಾಗೂ ಸಮಂತಾ ಮದುವೆಯಾಗುತ್ತಾರೆ ಎಂಬ ಗುಸು ಗುಸು ಟಾಲಿವುಡ್ ನಲ್ಲಿ ಹೊಸದೇನಲ್ಲ. ಸಮಂತಾ-ನಾಗ ಚೈತನ್ಯ ಪ್ರೀತಿಗೂ ತಂದೆ ನಾಗಾರ್ಜುನ ಒಪ್ಪಿಗೆ ಸೂಚಿಸಿದ್ದಾಗಿದೆ. ಮುಂದಿನ ವರ್ಷ ಈ ಜೋಡಿ ಕೂಡ ಹಸೆಮಣೆ ಏರಲಿದೆ. ಹೀಗಾಗಿ ಬಿಂಕ ಇಲ್ಲದ ಅಖಿಲ್ ಎಂಗೇಜ್ಮೆಂಟ್ ನಲ್ಲಿ ಸಮಂತಾ ಕೂಡ ಭಾಗವಹಿಸಿದರು. [ನಾಗ್ ಚೈತನ್ಯ ಮದುವೆ ಆಗಲು ಮತಾಂತರಗೊಂಡರೇ ನಟಿ ಸಮಂತಾ?]

ಮಿಂಚಿದ ನಾಗ ಚೈತನ್ಯ-ಸಮಂತಾ

ಅಖಿಲ್-ಶ್ರಿಯಾ ನಿಶ್ಚಿತಾರ್ಥದಲ್ಲಿ ನಾಗ ಚೈತನ್ಯ-ಸಮಂತಾ ಜೋಡಿ ಒಟ್ಟಿಗೆ ನಿಂತು ಪೋಸ್ ಕೊಟ್ಟ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶುಭ ಹಾರೈಸಿದ ಶಿವಣ್ಣ

ಅಕ್ಕಿನೇನಿ ನಾಗಾರ್ಜುನ ಪುತ್ರನ ಎಂಗೇಜ್ಮೆಂಟ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಭಾಗವಹಿಸಿ ಶುಭ ಹಾರೈಸಿದರು.

ಸ್ಟಾರ್ ನಟರು ಭಾಗಿ

ಅಖಿಲ್ ನಿಶ್ಚಿತಾರ್ಥದಲ್ಲಿ ಪ್ರಭಾಸ್, ವಿಕ್ರಮ್ ಪ್ರಭು ಸೇರಿದಂತೆ ಅನೇಕ ತಾರೆಯರು ಪಾಲ್ಗೊಂಡಿದ್ದರು.

ಯಾರು ಈ ಶ್ರಿಯಾ ಭೂಪಾಲ್.?

ಹೈದರಾಬಾದ್ ಮೂಲದ ಶ್ರಿಯಾ ಭೂಪಾಲ್ ಫ್ಯಾಶನ್ ಡಿಸೈನರ್. ಖ್ಯಾತ ಉದ್ಯಮಿ ಜಿವಿಕೆ ರೆಡ್ಡಿ ಮೊಮ್ಮಗಳು. 'ಫಿಲ್ಮ್ ಫೇರ್ ಸೌತ್'ಗೆ ಅಫೀಶಿಯಲ್ ಕಾಸ್ಟ್ಯೂಮ್ ಡಿಸೈನರ್ ಆಗಿರುವ ಶ್ರಿಯಾ ಭೂಪಾಲ್, ಖ್ಯಾತ ನಟಿಯರಾದ ಶ್ರಿಯಾ ಶರಣ್, ಕಾಜರ್ ಅಗರ್ವಾಲ್, ರಾಕುಲ್ ಪ್ರೀತ್, ಶ್ರದ್ಧಾ ಕಪೂರ್ ಮತ್ತು ಆಲಿಯಾ ಭಟ್ ರವರಿಗೂ ಡಿಸೈನರ್. ಹೀಗಾಗಿ ಚಿತ್ರರಂಗ ಶ್ರಿಯಾಗೆ ಹೊಸದಲ್ಲ. ಈವೆಂಟ್ ಒಂದರಲ್ಲಿ ಶ್ರಿಯಾಗೆ ಅಖಿಲ್ ಪರಿಚಯ ಆಗಿ, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಈಗ ಹಸೆಮಣೆವರೆಗೂ ಬಂದಿದೆ.

ಮದುವೆ ಯಾವಾಗ.?

ಮೂಲಗಳ ಪ್ರಕಾರ, ಮುಂದಿನ ವರ್ಷ ಇಟಲಿಯಲ್ಲಿ ಅಖಿಲ್ ಅಕ್ಕಿನೇನಿ-ಶ್ರಿಯಾ ಭೂಪಾಲ್ ಮದುವೆ ನಡೆಯಲಿದೆ.

English summary
Tollywood Actor Nagarjuna's son Akhil Akkineni got engaged to Shriya Bhupal on Friday night (December 9th) in a private ceremony at GVK House, Hyderabad. Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada