»   » ಅಂಬಿ-ಸುಮಲತಾ 'ಸಿಲ್ವರ್ ಜ್ಯೂಬಿಲಿ' ಸಂಭ್ರಮದಲ್ಲಿ ದರ್ಶನ್, ಪುನೀತ್ ಭಾಗಿ

ಅಂಬಿ-ಸುಮಲತಾ 'ಸಿಲ್ವರ್ ಜ್ಯೂಬಿಲಿ' ಸಂಭ್ರಮದಲ್ಲಿ ದರ್ಶನ್, ಪುನೀತ್ ಭಾಗಿ

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ದಂಪತಿ, ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನ ಇತ್ತೀಚೆಗೆ ಮಲೇಶಿಯಾದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದರು.

ಈ ಸುದ್ದಿಯನ್ನ ಫಿಲ್ಮಿ ಬೀಟ್ ನಲ್ಲಿ ಫೋಟೋ ಸಮೇತ ನಾವೇ ತೋರಿಸಿದ್ವಿ. ಮಲೇಶಿಯಾದಲ್ಲಿ ಸೆಲೆಬ್ರೇಟ್ ಮಾಡಿಕೊಂಡ ಅಂಬಿ-ಸುಮಲತಾ ಜೋಡಿಯ ವಿವಾಹ ವಾರ್ಷಿಕೋತ್ಸವದಲ್ಲಿ ಅಂಬರೀಶ್ ಪುತ್ರ ಅಭಿಷೇಕ್ ಹಾಜರಿದ್ದರು. ಈಗ ಸ್ಯಾಂಡಲ್ ವುಡ್, ಟಾಲಿವುಡ್, ಬಾಲಿವುಡ್ ದಿಗ್ಗಜರ ಸಮ್ಮುಖದಲ್ಲಿ ಅಂಬಿ ದಂಪತಿಯ ಸಿಲ್ವರ್ ಜ್ಯೂಬಿಲಿ ಸಂಭ್ರಮದ ಎಕ್ಸ್ ಕ್ಲೂಸಿವ್ ಫೋಟೋಗಳನ್ನ ನಿಮ್ಮ ಮುಂದೆ ಇಡ್ತಿದ್ದೀವಿ ನೋಡಿ...[ಅಂಬರೀಶ್-ಸುಮಲತಾ ದಂಪತಿಗಿಂದು 25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ]

ಅಂಬಿ-ಸುಮಲತಾ 'ಸಿಲ್ವರ್ ಜ್ಯೂಬಿಲಿ' ಸಂಭ್ರಮದಲ್ಲಿ ತಾರೆಯರು

ಮಲೇಶಿಯಾದಲ್ಲಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ದಂಪತಿ, ಇತ್ತೀಚೆಗೆ ಚಿತ್ರತಾರೆಯರಿಗಾಗಿ ವಿಶೇಷ ಕಾರ್ಯಕ್ರಮವನ್ನ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ದರ್ಶನ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು.[ಚಿತ್ರಗಳು: ಮಲೇಶಿಯಾದಲ್ಲಿ ಅಂಬಿ-ಸುಮಲತಾ ಸಿಲ್ವರ್ ಜ್ಯುಬಿಲಿ ಸಂಭ್ರಮ ]

ರೆಬಲ್ ಸ್ಟಾರ್ ದಂಪತಿ ಜೊತೆ ದರ್ಶನ್

ಅಂಬರೀಶ್ ದಂಪತಿ ನೀಡಿದ ವಿಶೇಷ ಪಾರ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು.

ಪುನೀತ್ ರಾಜ್ ಕುಮಾರ್ ಭಾಗಿ

ಅಂಬರೀಶ್ ಅವರ ವಿವಾಹ ವಾರ್ಷಿಕೋತ್ಸವದ ಸಂಭ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪತ್ನಿ ಅಶ್ವಿನಿ ಕೂಡ ಬಂದಿದ್ದರು.

ತೆಲುಗು ನಟ ಮೋಹನ್ ಬಾಬು

ಅಂಬರೀಶ್ ದಂಪತಿಯ 'ಸಿಲ್ವರ್ ಜ್ಯೂಬಿಲಿ' ಕಾರ್ಯಕ್ರಮಕ್ಕೆ ಅಂಬರೀಶ್ ಅವರ ಸ್ನೇಹಿತ, ತೆಲುಗು ನಟ ಮೋಹನ್ ಬಾಬು ಆಗಮಿಸಿದ್ದರು.

ಬಾಲಿವುಡ್ ನಿಂದ ಶತ್ರುಘ್ನ ಸಿನ್ಹಾ

ಅಂಬರೀಶ್ ಅವರ ಆಪ್ತ ಗೆಳೆಯರಲ್ಲಿ ಒಬ್ಬರಾಗಿರುವ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಕೂಡ ಈ ಸಂತಸದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಿಯಾಂಕಾ ಉಪೇಂದ್ರ

ನಟಿ ಪ್ರಿಯಾಂಕಾ ಉಪೇಂದ್ರ ಅವರು ಅಂಬರೀಶ್ ಹಾಗೂ ಸುಮಲತಾ ಅವರ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು.

ರಾಕ್ ಲೈನ್ ವೆಂಕಟೇಶ್

ನಟ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಅಂಬರೀಶ್-ಸುಮಲತಾ ಅವರ 25ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

ಬಿ.ಸರೋಜಾದೇವಿ

ಹಿರಿಯ ನಟಿ ಬಿ.ಸರೋಜಾದೇವಿ ಕೂಡ ಸ್ಯಾಂಡಲ್ ವುಡ್ ಮಾದರಿ ದಂಪತಿಗಳ 'ಸಿಲ್ವರ್ ಜ್ಯೂಬಿಲಿ' ಸಂಭ್ರಮದಲ್ಲಿ ಭಾಗಿಯಾಗಿದ್ದರು.

English summary
Kannada Actor, Congress Politician Ambareesh and Wife Sumalatha celebrated their 25th Wedding Anniversary recently. Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada