For Quick Alerts
  ALLOW NOTIFICATIONS  
  For Daily Alerts

  ಅಜಯ್ ರಾವ್ ಗೆ 'ಅಮೂಲ್ಯ-ಜಗದೀಶ್' ಮದುವೆ ಕರೆಯೋಲೆ

  By Suneel
  |

  'ಚೆಲುವಿನ ಚಿತ್ತಾರ' ಬೆಡಗಿ ಅಮೂಲ್ಯ ಕೆಲವೇ ದಿನಗಳಲ್ಲಿ ಜಗದೀಶ್ ಅವರೊಂದಿಗೆ ಹೊಸ ಬಾಳಿಗೆ ಕಾಲಿಡಲಿದ್ದಾರೆ. ಬ್ಯಾಚುಲರ್ ಲೈಫ್ ಗೆ ಬಾಯ್ ಹೇಳುವುದಕ್ಕೂ ಮುನ್ನ ಅಮೂಲ್ಯ ಮೊನ್ನೆಯಷ್ಟೇ ತಮ್ಮ ಗೆಳತಿಯರೊಂದಿಗೆ ಪಾರ್ಟಿ ಮಾಡಿ ಎಂಜಾಯ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದರು.[ಮದುವೆಗೂ ಮುನ್ನ 'ಕೊನೆ' ಪಾರ್ಟಿ ಮಾಡಿ ಖುಷಿ ಪಟ್ಟ ಅಮೂಲ್ಯ.!]

  ಮೊನ್ನೆಯಷ್ಟೇ ಪಾರ್ಟಿ ಮುಗಿಸಿದ ಅಮೂಲ್ಯ ಈಗ ತಮ್ಮ ಮದುವೆ ತಯಾರಿಯಲ್ಲಿ ತೊಡಗಿದ್ದಾರೆ. ಸ್ಯಾಂಡಲ್ ವುಡ್ ನಟರ ಮನೆಗೆ ಮತ್ತು ಪರಮ ಆಪ್ತರ ಮನೆಗೆ ತೆರಳಿ ತಮ್ಮ ಜೀವನದ ಅಮೂಲ್ಯ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಎಲ್ಲರನ್ನೂ ಆಹ್ವಾನಿಸುತ್ತಿದ್ದಾರೆ.

  ಅಜಯ್ ರಾವ್ ಗೆ ಆಮಂತ್ರಣ

  ಅಜಯ್ ರಾವ್ ಗೆ ಆಮಂತ್ರಣ

  'ಕೃಷ್ಣ-ರುಕ್ಕು' ಚಿತ್ರದಲ್ಲಿ ಅಮೂಲ್ಯ ರೊಂದಿಗೆ ನಟಿಸಿರುವ ಪ್ರಸಿದ್ಧ ಕನ್ನಡ ನಟ ಅಜಯ್ ರಾವ್ ಮನೆಗೆ ತೆರೆಳಿ ಅವರ ಕುಟುಂಬದವರನ್ನು ತಪ್ಪದೇ ಬಂದು ಹರಸುವಂತೆ ಅಮೂಲ್ಯ, ಸಹೋದರ ದೀಪಕ್ ಮತ್ತು ಅವರ ತಾಯಿ ಮದುವೆಗೆ ಪ್ರೀತಿಯ ಆಮಂತ್ರಣ ನೀಡಿದ್ದಾರೆ.

  ಅಜಯ್ ಮತ್ತು ಸಪ್ನ ರಾವ್ ಜೊತೆ ಅಮೂಲ್ಯ ಘಳಿಗೆ

  ಅಜಯ್ ಮತ್ತು ಸಪ್ನ ರಾವ್ ಜೊತೆ ಅಮೂಲ್ಯ ಘಳಿಗೆ

  ಅಂದಹಾಗೆ ತಮ್ಮ ಮದುವೆಯ ಕರೆಯೋಲೆ ನೀಡಿದ ನಟಿ ಅಮೂಲ್ಯ, ದಂಪತಿಗಳಾದ ಅಜಯ್ ರಾವ್ ಮತ್ತು ಸಪ್ನ ಅಜಯ್ ರಾವ್ ಅವರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟರು. ಮದುವೆ ಆಮಂತ್ರಣ ಸ್ವೀಕರಿಸಿದ ಅಜಯ್ ರಾವ್ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ಅಮೂಲ್ಯ ರವರಿಗೆ ಶುಭ ಕೋರಿದ್ದಾರೆ.

  ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗೆ ಮದುವೆ ಆಮಂತ್ರಣ

  ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗೆ ಮದುವೆ ಆಮಂತ್ರಣ

  ಗೋಲ್ಡನ್ ಜೋಡಿ ಅಮೂಲ್ಯ ಮತ್ತು ಜಗದೀಶ್ ರವರು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ 'ಮದುವೆಯ ಮಮತೆಯ ಕರೆಯೋಲೆ' ನೀಡಿದರು. ಇದೇ ವೇಳೆ ಸ್ವಾಮೀಜಿಗಳಿಂದ ತಮ್ಮ ದಾಂಪತ್ಯ ಜೀವನಕ್ಕೆ ಆಶೀರ್ವಾದವನ್ನು ಪಡೆದರು.

  ಸಿನಿಮಾ ರಂಗದ ಬಹುತೇಕರಿಗೆ ಆಹ್ವಾನ

  ಸಿನಿಮಾ ರಂಗದ ಬಹುತೇಕರಿಗೆ ಆಹ್ವಾನ

  ಅಜಯ್ ರಾವ್ ಮನೆಗೆ ತೆರಳಿ ಮದುವೆ ಆಹ್ವಾನ ನೀಡಿರುವ ಅಮೂಲ್ಯ ಈಗಾಗಲೇ ಹಲವು ಸೆಲೆಬ್ರಿಟಿಗಳಿಗೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಜೊತೆಗೆ ಈ ವಾರದೊಳಗೆ ಸಿನಿಮಾ ಕ್ಷೇತ್ರದ ಬಹುತೇಕರಿಗೆ ಮದುವೆ ಕರೆಯೋಲೆ ನೀಡಲಿದ್ದಾರೆ.

  ಮದುವೆ ಯಾವಾಗ?

  ಮದುವೆ ಯಾವಾಗ?

  ಅಮೂಲ್ಯ ಮತ್ತು ಜಗದೀಶ್ ರವರು ಮೇ ತಿಂಗಳ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  ಮದುವೆ ಸ್ಥಳ ಯಾವುದು ಗೊತ್ತಾ?

  ಮದುವೆ ಸ್ಥಳ ಯಾವುದು ಗೊತ್ತಾ?

  ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಮೂಲ್ಯ ಮತ್ತು ಜಗದೀಶ್ ರವರ ವಿವಾಹ ನೆರವೇರಲಿದೆ. ಅಲ್ಲದೇ ಮದುವೆ ನಂತರ ಚಿತ್ರರಂಗದ ಗಣ್ಯರಿಗಾಗಿ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಆತರಕ್ಷತೆ ಏರ್ಪಡಿಸಲಾಗಿದೆ.

  English summary
  Kannada Actress Amulya has started to invite celebrates for her Marriage with Jagadish. Amulya-Jagadeesh wedding is scheduled on May 12th, 2017.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X