»   » ಚಿತ್ರಗಳು: ಪಂಚತಾರಾ ಹೋಟೆಲ್ ನಲ್ಲಿ 'ಅಮೂಲ್ಯ-ಜಗದೀಶ್' ವೆಡ್ಡಿಂಗ್ ಪಾರ್ಟಿ

ಚಿತ್ರಗಳು: ಪಂಚತಾರಾ ಹೋಟೆಲ್ ನಲ್ಲಿ 'ಅಮೂಲ್ಯ-ಜಗದೀಶ್' ವೆಡ್ಡಿಂಗ್ ಪಾರ್ಟಿ

Posted By:
Subscribe to Filmibeat Kannada

ದಾಂಪತ್ಯ ಜೀವನಕ್ಕೆ ನಟಿ ಅಮೂಲ್ಯ ಹಾಗೂ ಜಗದೀಶ್ ಕಾಲಿಟ್ಟಿದ್ದು ಆಯ್ತು. ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಕೂಡ ಮುಗಿಯಿತು. ಮದುವೆ ನಂತರದ ಶಾಸ್ತ್ರಗಳೆಲ್ಲಾ ಪೂರ್ಣಗೊಂಡ ಬಳಿಕ ನಿನ್ನೆ ಸಂಜೆ (ಮೇ 14) ನವದಂಪತಿಗಳಾದ ಅಮೂಲ್ಯ ಮತ್ತು ಜಗದೀಶ್ 'ವೆಡ್ಡಿಂಗ್ ಪಾರ್ಟಿ' ಆಯೋಜಿಸಿದ್ದರು.

ಬೆಂಗಳೂರಿನ ಪ್ರತಿಷ್ಟಿತ ಪಂಚತಾರಾ ಹೋಟೆಲ್ ಗಳಲ್ಲಿ ಒಂದಾದ ಐಟಿಸಿ ಗಾರ್ಡೇನಿಯಾದಲ್ಲಿ ಅಮೂಲ್ಯ-ಜಗದೀಶ್ (ಎ.ಜೆ) ಮದುವೆ ಪಾರ್ಟಿ ಧೂಂ ಧಾಂ ಆಗಿ ನಡೆಯಿತು.[ಅಭಿಜಿತ್ ಶುಭ ಲಗ್ನದಲ್ಲಿ ಅಮೂಲ್ಯಗೆ ಜಗದೀಶ್ 'ಮಾಂಗಲ್ಯ ಧಾರಣೆ']

ಅಮೂಲ್ಯ ಜಗದೀಶ್ ಮದುವೆ ಪಾರ್ಟಿಯ ಫೋಟೋ ಆಲ್ಬಂ ಇಲ್ಲಿದೆ. ಕಣ್ತುಂಬಿಕೊಳ್ಳಿ....

ಆಪ್ತರಿಗಷ್ಟೇ 'ವೆಡ್ಡಿಂಗ್ ಪಾರ್ಟಿ'ಗೆ ಆಹ್ವಾನ

ಅಮೂಲ್ಯ-ಜಗದೀಶ್ ರವರ ವೆಡ್ಡಿಂಗ್ ಪಾರ್ಟಿಯಲ್ಲಿ ಭಾಗವಹಿಸಲು ಕುಟುಂಬಸ್ಥರು, ಚಿತ್ರರಂಗ ಹಾಗೂ ರಾಜಕೀಯ ರಂಗದ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.

ಕಂಗೊಳಿಸಿದ ಹೆಣ್ಣು-ಗಂಡು

ನೀಲಿ ಬಣ್ಣದ ಗೌನ್ ನಲ್ಲಿ ನಟಿ ಅಮೂಲ್ಯ ಮಿಂಚಿದ್ರೆ, ಸೂಟು ಬೂಟು ಧರಿಸಿ ವರ ಜಗದೀಶ್ ಕಂಗೊಳಿಸುತ್ತಿದ್ದರು.

ವೆಡ್ಡಿಂಗ್ ಪಾರ್ಟಿಯಲ್ಲಿ ಸ್ಟಾರ್ ನಟರು

ಅಮೂಲ್ಯ-ಜಗದೀಶ್ ವೆಡ್ಡಿಂಗ್ ಪಾರ್ಟಿಯಲ್ಲಿ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಗಣೇಶ್ ಹಾಗೂ ನವರಸ ನಾಯಕ ಜಗ್ಗೇಶ್ ಭಾಗಿಯಾಗಿದ್ದರು.

ರಾಕಿಂಗ್ ಸ್ಟಾರ್ ಯಶ್ ದಂಪತಿ

ಪಂಚತಾರಾ ಹೋಟೆಲ್ ನಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಕೂಡ ಪಾಲ್ಗೊಂಡಿದ್ದರು.

ಲೇಡೀಸ್ ಕ್ಲಬ್

ಐಟಿಸಿ ಗಾರ್ಡೇನಿಯಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಎ.ಜೆ (ಅಮೂಲ್ಯ ಜಗದೀಶ್) ವೆಡ್ಡಿಂಗ್ ಪಾರ್ಟಿಯಲ್ಲಿ ನಟಿ ಮಾಳವಿಕಾ ಅವಿನಾಶ್ ಹಾಗೂ ನಟಿ ಸುಧಾರಾಣಿ ಮಿರಿ ಮಿರಿ ಮಿಂಚುತ್ತಿರುವುದು ಹೀಗೆ....

ಸೆಲ್ಫಿ ಸಂಭ್ರಮ

ಚಿತ್ರರಂಗದ ಕ್ಲೋಸ್ ಫ್ರೆಂಡ್ಸ್ ಜೊತೆ ನಟಿ ಸುಧಾರಾಣಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಆರ್.ಅಶೋಕ್ ಕೂಡ ಬಂದಿದ್ದರು

'ಅಮೂಲ್ಯ-ಜಗದೀಶ್' ವೆಡ್ಡಿಂಗ್ ಪಾರ್ಟಿಗೆ ಬಿಜೆಪಿ ನಾಯಕ ಆರ್.ಅಶೋಕ್ ಕೂಡ ಭಾಗವಹಿಸಿ, ನವದಂಪತಿಗೆ ಆಶೀರ್ವಾದ ಮಾಡಿದರು.

ಕೆ.ಜೆ.ಜಾರ್ಜ್ ಭಾಗಿ

ಅಮೂಲ್ಯ-ಜಗದೀಶ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ ಕೆ.ಜೆ.ಜಾರ್ಜ್ ರವರನ್ನ ನೀವು ಚಿತ್ರದಲ್ಲಿ ಕಾಣಬಹುದು.

ಪ್ರಿಯಾಂಕಾ ಉಪೇಂದ್ರ

'ವೆಡ್ಡಿಂಗ್ ಪಾರ್ಟಿ'ಗೆ ಆಗಮಿಸಿ ನವ ಜೋಡಿಗಳಾದ ಅಮೂಲ್ಯ-ಜಗದೀಶ್ ರವರಿಗೆ ಪ್ರಿಯಾಂಕಾ ಉಪೇಂದ್ರ ಶುಭ ಕೋರಿದರು.

ಶಿಲ್ಪಾ ಗಣೇಶ್

ಅಮೂಲ್ಯ-ಜಗದೀಶ್ ವೆಡ್ಡಿಂಗ್ ಪಾರ್ಟಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಕೂಡ ಮಿರಿ ಮಿರಿ ಮಿಂಚುತ್ತಿದ್ದರು.

ಗೃಹ ಸಚಿವ ಜಿ.ಪರಮೇಶ್ವರ್

ಗೃಹ ಸಚಿವ ಜಿ.ಪರಮೇಶ್ವರ್ ಕೂಡ ಅಮೂಲ್ಯ-ಜಗದೀಶ್ ಮದುವೆ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ಚಿತ್ರರಂಗದ ಗಣ್ಯರು ಭಾಗಿ

ನಟಿ ಹರ್ಷಿಕಾ ಪೂಣಚ್ಚ, ನಟಿ ಕಾರುಣ್ಯ ರಾಮ್, ಸೌಂದರ್ಯ ಜಗದೀಶ್, ಅಕುಲ್ ಬಾಲಾಜಿ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ತಾರೆಯರು ಕ್ಲಿಕ್ಕಿಸಿಕೊಂಡಿರುವ ಗ್ರೂಪ್ ಫೋಟೋ ಇದು.

ಮದುಮಗಳ ಜೊತೆ ಸೆಲ್ಫಿ

ನಟಿ ರಾಧಿಕಾ ಪಂಡಿತ್ ಹಾಗೂ ಮಾಳವಿಕಾ ಅವಿನಾಶ್ ಜೊತೆ ಮದುಮಗಳು ಅಮೂಲ್ಯ ಕ್ಲಿಕ್ ಮಾಡಿರುವ ಸೆಲ್ಫಿ ಇದು.

ಸ್ಟಾರ್ಸ್ ಸೆಲ್ಫಿ

ನಟಿ ಹರ್ಷಿಕಾ ಪೂಣಚ್ಚ ತೆಗೆದಿರುವ ಸೆಲ್ಫಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಜಗ್ಗೇಶ್, ಶಿಲ್ಪಾ ಗಣೇಶ್, ಕಾರುಣ್ಯ ರಾಮ್, ಮಾಳವಿಕಾ ಅವಿನಾಶ್ ರವರನ್ನ ನೀವು ಕಾಣ್ಬಹುದು.

ರಾಕಿಂಗ್ ಜೋಡಿ ಜೊತೆ ಸೆಲ್ಫಿ

'ರಾಕಿಂಗ್ ಜೋಡಿ' ಯಶ್, ರಾಧಿಕಾ ಪಂಡಿತ್ ಹಾಗೂ ಶಿಲ್ಪಾ ಗಣೇಶ್, ಪುತ್ರಿ ಚಾರಿತ್ರ್ಯ ಜೊತೆ ಹರ್ಷಿಕಾ ಕ್ಲಿಕ್ ಮಾಡಿರುವ ಸೆಲ್ಫಿ ಇದು.

ತಾರಾ ಕುಟುಂಬ

'ಮೇಡ್ ಫಾರ್ ಈಚ್ ಅದರ್' ಅಮೂಲ್ಯ-ಜಗದೀಶ್ ದಂಪತಿಗೆ ನಟಿ ತಾರಾ ದಂಪತಿ ಶುಭಾಶಯ ತಿಳಿಸಿದರು.

ನವ ದಂಪತಿ ಜೊತೆ ಪಾರುಲ್ ಯಾದವ್

ನವ ದಂಪತಿ ಅಮೂಲ್ಯ-ಜಗದೀಶ್ ಜೊತೆ ಪಾರುಲ್ ಯಾದವ್ ಕ್ಲಿಕ್ ಮಾಡಿರುವ ಸೆಲ್ಫಿ ಇದು.

ಗೆಳತಿಯರ ಜೊತೆ ಅಮೂಲ್ಯ

ಕ್ಲೋಸ್ ಫ್ರೆಂಡ್ಸ್ ಜೊತೆ ಸೆಲ್ಫಿ ಸಂಭ್ರಮದಲ್ಲಿ ನಟಿ ಅಮೂಲ್ಯ.

ಉಭಯ ಕುಟುಂಬದವರು

ಎಜೆ (ಅಮೂಲ್ಯ-ಜಗದೀಶ್) ವೆಡ್ಡಿಂಗ್ ಪಾರ್ಟಿಯಲ್ಲಿ ಉಭಯ ಕುಟುಂಬದವರನ್ನು ನೀವು ಚಿತ್ರದಲ್ಲಿ ಕಾಣಬಹುದು.

ಶಿವಣ್ಣ ಜೊತೆ ಫೋಟೋ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ನಟಿ ಕಾರುಣ್ಯ ರಾಮ್ ಹಾಗೂ ಮಾಳವಿಕಾ ಅವಿನಾಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

English summary
Post Marriage, Kannada Actress Amulya and Jagadish hosted Wedding Party at ITC Gardenia, Bengaluru on May 14th. Check out the pics

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada