For Quick Alerts
  ALLOW NOTIFICATIONS  
  For Daily Alerts

  ಚಿತ್ರಪಟ: ಶಾಸ್ತ್ರೋಕ್ತವಾಗಿ ನಡೆದ ಚಂದನ್-ನಿವೇದಿತಾ ಮದುವೆಯ ಅಪೂರ್ವ ಕ್ಷಣಗಳು

  |

  'ಬಿಗ್ ಬಾಸ್' ವಿನ್ನರ್, ಕನ್ನಡ ರಾಪರ್ ಚಂದನ್ ಶೆಟ್ಟಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ತಾವು ಇಷ್ಟ ಪಟ್ಟ ಹುಡುಗಿ ನಿವೇದಿತಾ ಗೌಡ ಜೊತೆಗೆ ಇಂದು ಚಂದನ್ ಶೆಟ್ಟಿ ಹೊಸ ಜೀವನ ಆರಂಭಿಸಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಪರಿಚಯವಾದ ಇವರಿಬ್ಬರು ಇಂದು ದಂಪತಿಗಳಾಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿದ್ದಾಗ ಆತ್ಮೀಯ ಸ್ನೇಹಿತರಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮಧ್ಯೆ ಪ್ರೀತಿ ಅದ್ಯಾವಾಗ ಚಿಗುರೊಡೆಯಿತೋ ಗೊತ್ತಿಲ್ಲ. ಕಳೆದ ವರ್ಷದ ಯುವ ದಸರಾ ಕಾರ್ಯಕ್ರಮದಲ್ಲಿ ಮೈಸೂರು ಜನತೆಯ ಮುಂದೆಯೇ ನಿವೇದಿತಾ ಕೈಬೆರಳಿಗೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು ಚಂದನ್ ಶೆಟ್ಟಿ.

  ಅದಾದ ಮೇಲೆ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ 'ಚಂದನ'ದ 'ಗೊಂಬೆ' ಇಂದು ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಕ್ಯಾಮರಾ ಕಂಗಳಲ್ಲಿ ಸೆರೆ ಆಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆಯ ಅಪೂರ್ಣ ಕ್ಷಣಗಳು ಇಲ್ಲಿವೆ ನೋಡಿ...

  ಹ್ಯಾಪಿ ಮ್ಯಾರೀಡ್ ಲೈಫ್ ಚಂದನ್ ಶೆಟ್ಟಿ-ನಿವೇದಿತಾ ಗೌಡ

  ಹ್ಯಾಪಿ ಮ್ಯಾರೀಡ್ ಲೈಫ್ ಚಂದನ್ ಶೆಟ್ಟಿ-ನಿವೇದಿತಾ ಗೌಡ

  ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರೀತಿಗೆ ಇಂದು ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿದೆ. ಇಂದು ಸತಿ-ಪತಿಗಳಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  'ಗೊಂಬೆ' ನಿವೇದಿತಾ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ ಚಂದನ್ ಶೆಟ್ಟಿ

  ಮಿಂಚಿದ ವರ ಚಂದನ್ ಶೆಟ್ಟಿ

  ಮಿಂಚಿದ ವರ ಚಂದನ್ ಶೆಟ್ಟಿ

  ಇಂದು ಬೆಳಗ್ಗೆ ನಡೆದ ಧಾರೆ-ಮುಹೂರ್ತಕ್ಕಾಗಿ ವರ ಚಂದನ್ ಶೆಟ್ಟಿ ಬಿಳಿ ಮತ್ತು ಗೋಲ್ಡನ್ ಬಣ್ಣಗಳ ಕಾಂಬಿನೇಶನ್ ಇರುವ ರೇಶ್ಮೆ ಪಂಚೆ, ಶಲ್ಯ, ಪೇಟ ತೊಟ್ಟು ಮಿರಿ ಮಿರಿ ಮಿಂಚಿದರು.

  ಫೋಟೋ ಆಲ್ಬಂ: ತಾರೆಗಳ ತೋಟದಲ್ಲಿ 'ಚಂದನ'ದ 'ಗೊಂಬೆ'ಯ ಕಲರ್ ಫುಲ್ ರಿಸೆಪ್ಷನ್

  ಕಂಗೊಳಿಸಿದ ನಿವೇದಿತಾ ಗೌಡ

  ಕಂಗೊಳಿಸಿದ ನಿವೇದಿತಾ ಗೌಡ

  ಧಾರೆ ಮುಹೂರ್ತಕ್ಕಾಗಿ ಕೆಂಪು ಮತ್ತು ಹಸಿರು ಬಣ್ಣಗಳ ಕಾಂಬಿನೇಶನ್ ಇರುವ ರೇಶ್ಮೆ ಸೀರೆಯುಟ್ಟು, ಚಿನ್ನಾಭರಣಗಳಿಂದ ಸಿಂಗರಿಸಿಕೊಂಡು ವಧು ನಿವೇದಿತಾ ಗೌಡ ಕಂಗೊಳಿಸಿದರು.

  ಮದುವೆ ಸಂಭ್ರಮದಲ್ಲಿ ರಾಪರ್ ಚಂದನ್ ಶೆಟ್ಟಿ, 'ಗೊಂಬೆ' ನಿವೇದಿತಾ ಗೌಡ.!

  ತಾಳಿ ಕಟ್ಟುವ ಶುಭ ವೇಳೆ

  ತಾಳಿ ಕಟ್ಟುವ ಶುಭ ವೇಳೆ

  ಇಂದು ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಇದ್ದ ಶುಭ ಮುಹೂರ್ತದಲ್ಲಿ ನಿವೇದಿತಾ ಗೌಡ ಕೊರಳಿಗೆ ಚಂದನ್ ಶೆಟ್ಟಿ ಮಾಂಗಲ್ಯಧಾರಣೆ ಮಾಡಿದರು. ನಿವೇದಿತಾ ಕೊರಳಿಗೆ ತಾಳಿ ಕಟ್ಟುವ ಶುಭ ವೇಳೆಯಲ್ಲಿ ಕ್ಲಿಕ್ ಆಗಿರುವ ಫೋಟೋ ಇದು..

  ಇನ್ಮೇಲೆ ಹೆಂಡತಿ ಜೊತೆಯಲ್ಲಿ ಇರ್ತಾಳೆ.!

  ಇನ್ಮೇಲೆ ಹೆಂಡತಿ ಜೊತೆಯಲ್ಲಿ ಇರ್ತಾಳೆ.!

  ''ಲೈಫ್ ನಲ್ಲಿ ಇವತ್ತು ಬೇರೆ ಘಟ್ಟ ತಲುಪಿದ್ದೇವೆ. ಇವತ್ತಿಂದ ಲೈಫ್ ಖಂಡಿತ ಬೇರೆ ತರಹ ಇರುತ್ತದೆ. ಇಷ್ಟು ದಿನ ಒಬ್ಬನೇ ಮನೆಯಲ್ಲಿ ಇರುತ್ತಿದ್ದೆ. ಇನ್ಮೇಲೆ ನನ್ನ ಜೊತೆ ಮನೆಯಲ್ಲಿ ಹೆಂಡತಿ ಕೂಡ ಇರುತ್ತಾಳೆ'' ಎಂದು ಮಾಧ್ಯಮಗಳ ಮುಂದೆ ಚಂದನ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.

  ಎಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ

  ಎಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ

  ''ಬಹಳ ಖುಷಿಯಾಗಿದ್ದೇನೆ. ನನ್ನ ಜೀವನದಲ್ಲೇ ಇವತ್ತೊಂದು ಮರೆಯಲಾಗದ ದಿನ. ಇವತ್ತಿನಿಂದ ನನ್ನ ಜೀವನ ತುಂಬಾ ಚೆನ್ನಾಗಿರುತ್ತದೆ ಅಂತ ಭಾವಿಸುತ್ತೇನೆ. ಕರ್ನಾಟಕ ಜನತೆಯ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ'' ಎಂದು ಹೇಳಿದ್ದಾರೆ ವರ ಚಂದನ್ ಶೆಟ್ಟಿ.

  ಇಷ್ಟ ಪಟ್ಟ ಹಾಗೆ ಮದುವೆ

  ಇಷ್ಟ ಪಟ್ಟ ಹಾಗೆ ಮದುವೆ

  ''ನನ್ನ ಲೈಫ್ ಟೈಮ್ ಮೆಮೊರಿಯಲ್ಲಿ ಉಳಿಯುವಂತಹ ದಿನ ಇವತ್ತು. ಹೀಗಾಗಿ, ಚೆನ್ನಾಗಿ ಮದುವೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ವಿ. ಅದೇ ರೀತಿ ಮದುವೆ ಆಗಿದ್ದೇವೆ'' ಅಂತ ಹೇಳುತ್ತ ಖುಷಿ ಪಟ್ಟರು ಚಂದನ್ ಶೆಟ್ಟಿ.

  ರಾಯಲ್ ಹುಡುಗಿಯನ್ನ ಮದುವೆ ಆದೆ ಎಂದ ಚಂದನ್

  ರಾಯಲ್ ಹುಡುಗಿಯನ್ನ ಮದುವೆ ಆದೆ ಎಂದ ಚಂದನ್

  ''ರಾಯಲ್ ಊರಿಗೆ ಬಂದು ರಾಯಲ್ ಹುಡುಗಿಯನ್ನ ಮದುವೆ ಆಗಿದ್ದೇನೆ. ಇದು ಗುಡ್ ಫೀಲ್. ನಿವೇದಿತಾಗೆ ಸಿಂಡ್ರೆಲಾ ಫೀಲ್ ತುಂಬಾ ಇಷ್ಟ. ಹೀಗಾಗಿ, ಅದೇ ಕಾನ್ಸೆಪ್ಟ್ ನಲ್ಲಿ ರಿಸೆಪ್ಷನ್ ಮಾಡಿಕೊಂಡ್ವಿ'' ಅಂತಾರೆ ಚಂದನ್ ಶೆಟ್ಟಿ

  ಕನಸಿನ ಮದುವೆ

  ಕನಸಿನ ಮದುವೆ

  ''ಮದುವೆ ಬಗ್ಗೆ ನಾನೇನು ಕನಸು ಕಂಡಿದ್ನೋ.. ಅದೇ ರೀತಿ ನನ್ನ ಮದುವೆ ನಡೆದಿದೆ. ಚಿಕ್ಕ-ಪುಟ್ಟ ವಿಷಯಗಳಾದರೂ, ಎಲ್ಲವೂ ನಾವಂದುಕೊಂಡಂತೆ ನೆರವೇರಿದೆ. ನನ್ನ ಆಸೆಯನ್ನ ಚಂದನ್ ಈಡೇರಿಸಿದ್ದಾರೆ. ಅದು ನನಗೆ ತುಂಬಾ ಸಂತಸ ನೀಡಿದೆ'' ಎಂದು ಮಾಧ್ಯಮಗಳ ಮುಂದೆ ಹರ್ಷ ವ್ಯಕ್ತಪಡಿಸಿದ್ದಾರೆ ವಧು ನಿವೇದಿತಾ ಗೌಡ.

  ಖುಷಿ ಹಂಚಿಕೊಂಡ ನಿವೇದಿತಾ

  ಖುಷಿ ಹಂಚಿಕೊಂಡ ನಿವೇದಿತಾ

  ''ಚಂದನ್ ನಾನು ಇಷ್ಟ ಪಟ್ಟ ಹುಡುಗ. ಅವರೊಂದಿಗೆಯೇ ನನ್ನ ಮದುವೆ ಆಗಿರುವುದು ನನಗೆ ತುಂಬಾ ಖುಷಿ ಆಗಿದೆ. ಮದುವೆಗೆ ಬಂದು ನಮ್ಮನ್ನ ಹರಸಿದ ಎಲ್ಲರಿಗೂ ನನ್ನ ಧನ್ಯವಾದಗಳು'' ಅಂತ ಹೇಳಿದ್ದಾರೆ ನಿವೇದಿತಾ ಗೌಡ.

  ವಿನ್ನರ್ ಜೊತೆ ಟ್ರೋಫಿಯೂ ಸಿಕ್ಕಿದ ಹಾಗಾಯ್ತು.!

  ವಿನ್ನರ್ ಜೊತೆ ಟ್ರೋಫಿಯೂ ಸಿಕ್ಕಿದ ಹಾಗಾಯ್ತು.!

  ''ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್. ಚಂದನ್ ಶೆಟ್ಟಿಯನ್ನ ನಾನು ಮದುವೆ ಆಗಿದ್ದೇನೆ. ಹೀಗಾಗಿ, ನನಗೆ ವಿನ್ನರ್ ಸಿಕ್ಕಿದ್ರು. ಟ್ರೋಫಿ ಕೂಡ ಸಿಕ್ಕಿದ ಹಾಗಾಯಿತು. 'ಬಿಗ್ ಬಾಸ್' ಇಲ್ಲ ಅಂದಿದ್ರೆ, ನಾವಿಬ್ಬರು ಮೀಟ್ ಮಾಡೋಕೆ ಸಾಧ್ಯನೇ ಇರಲಿಲ್ಲ ಅನಿಸುತ್ತೆ'' ಎಂದಿದ್ದಾರೆ ನಿವೇದಿತಾ ಗೌಡ

  ಹನಿಮೂನ್ ಎಲ್ಲಿ.?

  ಹನಿಮೂನ್ ಎಲ್ಲಿ.?

  ನಿವೇದಿತಾಗೆ ಪ್ಯಾರಿಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಹೀಗಾಗಿ, ಅಲ್ಲೇ ಹನಿಮೂನ್ ಪ್ಲಾನ್ ಮಾಡಿದ್ದಾರೆ ಪತಿ ಚಂದನ್ ಶೆಟ್ಟಿ.

  English summary
  Have a look at Chandan Shetty-Niveditha Gowda's wedding photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X