»   » 'ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ

'ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ

Posted By:
Subscribe to Filmibeat Kannada

ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಎರಡನೇ ಬಾರಿ ಹಸೆಮಣೆ ತುಳಿದಿದ್ದಾರೆ. ಚಿತ್ತೂರು ಮೂಲದ ಜ್ಯುವೆಲ್ಲರಿ ಡಿಸೈನರ್ ಕಲ್ಯಾಣ್ ಎಂಬುವರೊಂದಿಗೆ ನಿನ್ನೆ ರಾತ್ರಿ 9.18ಕ್ಕೆ ಇದ್ದ ಶುಭ ತುಲಾ ಲಗ್ನದಲ್ಲಿ ಶ್ರೀಜಾ ವಿವಾಹವಾಗಿದ್ದಾರೆ.[ಬಿಪಾಶಾ ಬಸು ಮದುವೆ ಫಿಕ್ಸ್ ಆಯ್ತಂತೆ, ಜೋಡಿ ಹಕ್ಕಿ ನೋಡಿ]

ಇಬ್ಬರಿಗೂ ಇದು ಎರಡನೇ ಮದುವೆ! ಆದ್ದರಿಂದ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಚಿರಂಜೀವಿ ರವರ ಪ್ರಕೃತಿ ರೆಸಾರ್ಟ್ ನಲ್ಲಿ ಕುಟುಂಬ ಹಾಗೂ ಆಪ್ತೇಷ್ಟರ ಸಮ್ಮುಖದಲ್ಲಿ ಶ್ರೀಜಾ-ಕಲ್ಯಾಣ್ ಬಿಗಿ ಬಂದೋಬಸ್ತ್ ನಲ್ಲಿ ಮದುವೆ ಆದರು. [ವಿಡಿಯೋ ; ಮದುವೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಚಿರು ಪುತ್ರಿ ಶ್ರೀಜಾ]

 In Pics; Chiranjeevi's Daughter Srija tied knot with Kalyan

2007 ರಲ್ಲಿ ಕುಟುಂಬದ ವಿರೋಧವನ್ನು ಲೆಕ್ಕಿಸದೆ ಶಿರೀಶ್ ಭಾರದ್ವಾಜ್ ಎಂಬುವರನ್ನು ಪ್ರೀತಿಸಿ ಶ್ರೀಜಾ ಮದುವೆ ಆಗಿದ್ದರು. ಆದ್ರೆ, ಕೌಟುಂಬಿಕ ಕಲಹದ ಕಾರಣ ಶಿರೀಶ್ ಭಾರದ್ವಾಜ್ ರಿಂದ ಶ್ರೀಜಾ ವಿಚ್ಛೇದನ ಪಡೆದಿದ್ದರು. ['ತಾರೆ'ಗಳ ತೋಟದಲ್ಲಿ ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ']

ಈಗ ಫ್ಲ್ಯಾಶ್ ಬ್ಯಾಕ್ ನ್ನೆಲ್ಲಾ ಮರೆತು ಶ್ರೀಜಾ-ಕಲ್ಯಾಣ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವಧು-ವರರು ಸದ್ಯದಲ್ಲೇ ತಿರುಪತಿಗೆ ತೆರಳಿ ತಿಮ್ಮಪ್ಪನ ಆಶೀರ್ವಾದ ಪಡೆಯಲಿದ್ದಾರೆ. ಮಾರ್ಚ್ 31 ರಂದು ಹೈದರಾಬಾದ್ ನಲ್ಲಿ ಶ್ರೀಜಾ-ಕಲ್ಯಾಣ್ ರವರ ಆರತಕ್ಷತೆ ನಡೆಯಲಿದೆ. [ಫೋಟೋ ಆಲ್ಬಂ ; ಚಿರಂಜೀವಿ ಪುತ್ರಿ ಶ್ರೀಜಾ ಮೆಹೆಂದಿ ಕಾರ್ಯಕ್ರಮ]

ಹಸೆಮಣೆ ಏರುವ ಮುನ್ನ ಶ್ರೀಜಾ-ಕಲ್ಯಾಣ್ ರವರ ಮದುವೆ ಸಡಗರದ ಚಿತ್ರಗಳು ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ.....

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Tollywood Actor Chiranjeevi's daughter Srija tied knot with Kalyan yesterday (March 28th) at Prakruthi Resort, Bengaluru. Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada