»   » ಚಿತ್ರಪಟ: ಚಿರು - ಮೇಘನಾ ನಿಶ್ಚಿತಾರ್ಥದ ಅಮೂಲ್ಯ ಕ್ಷಣಗಳು

ಚಿತ್ರಪಟ: ಚಿರು - ಮೇಘನಾ ನಿಶ್ಚಿತಾರ್ಥದ ಅಮೂಲ್ಯ ಕ್ಷಣಗಳು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಚಿತ್ರರಂಗದ ಮತ್ತೊಂದು ತಾರಾ ಜೋಡಿ ಇದೀಗ ರಿಯಲ್ ಲೈಫ್ ನಲ್ಲಿಯೂ ಒಂದಾಗಿದೆ. ಇಷ್ಟು ವರ್ಷ ಪ್ರೇಮ ಪಕ್ಷಿಗಳಾಗಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ನಿಶ್ಚಿತಾರ್ಥ ಇಂದು ನಡೆದಿದೆ.

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೆ.ಪಿ.ನಗರದ ಮೇಘನಾ ರಾಜ್ ನಿವಾಸದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಸರಳವಾಗಿ ನಡೆಯಿತು. ನಟ ಅರ್ಜುನ್ ಸರ್ಜಾ ಕುಟುಂಬ, ಚಿರಂಜೀವಿ ಸರ್ಜಾ ಸಹೋದರ ನಟ ಧ್ರುವ ಸರ್ಜಾ ಹಾಗೂ ಸುಂದರ್ ರಾಜ್ ದಂಪತಿ ಸೇರಿದಂತೆ ಎರಡು ಕುಟುಂಬದ ಆಪ್ತರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಂದಹಾಗೆ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿಶ್ಚಿತಾರ್ಥದ ಫೋಟೋಗಳು ನಿಮ್ಮ ಫಿಲ್ಮಿಬೀಟ್ ಕನ್ನಡಗೆ ಲಭ್ಯವಾಗಿದೆ. ನೋಡಿ....

ಚಿರು - ಮೇಘನಾ ನಿಶ್ಚಿತಾರ್ಥ

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿಶ್ಚಿತಾರ್ಥ ಬೆಂಗಳೂರಿನ ಜೆ.ಪಿ.ನಗರದ ಮೇಘನಾ ರಾಜ್ ಮನೆಯಲ್ಲಿ ನಡೆಯಿತು.

ಉಂಗುರ ಬದಲಾಯಿಸಿಕೊಂಡ ಜೋಡಿ

ಕುಟುಂಬಸ್ಥರ ಸಮ್ಮುಖದಲ್ಲಿ ಚಿರು - ಮೇಘನಾ ಉಂಗುರ ಬದಲಿಸಿಕೊಂಡರು.

ಆಪ್ತರು ಭಾಗಿ

ನಿಶ್ಚಿತಾರ್ಥದಲ್ಲಿ ಎರಡು ಕುಟುಂಬದ ಆಪ್ತರು ಹಾಗೂ ಹತ್ತಿರ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಸಾಂಪ್ರದಾಯಿಕ ಉಡುಗೆ

ಮೇಘನಾ ರಾಜ್ ಕೆಂಪು ಬಣ್ಣದ ಸೀರೆಯಲ್ಲಿ ಹಾಗೂ ಚಿರು ವೈಟ್ ಶರ್ಟ್ ತೊಟ್ಟು ನಿಶ್ಚಿತಾರ್ಥದಲ್ಲಿ ಮಿಂಚಿದ್ದರು.

ಸಿಂಪಲ್ ಆಗಿ ನೆರವೇರಿತು ಚಿರಂಜೀವಿ ಸರ್ಜಾ - ಮೇಘನಾ ರಾಜ್ ನಿಶ್ಚಿತಾರ್ಥ

ಇಂದು ಸಂಜೆ ಅದ್ದೂರಿ ಕಾರ್ಯಕ್ರಮ

ಇಂದು ಸಂಜೆ 7 ಗಂಟೆಗೆ ಲೀಲಾ ಪ್ಯಾಲೇಸ್ ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ.

English summary
Check out pictures : Kannada Actor Chiranjeevi Sarja got engaged to Kannada Actress Meghana Raj today (october22d) in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X