»   » ಫೋಟೋ ಆಲ್ಬಂ: ಲೀಲಾ ಪ್ಯಾಲೇಸ್ ನಲ್ಲಿ ಚಿರು-ಮೇಘನಾ 'ರಾಯಲ್' ನಿಶ್ಚಿತಾರ್ಥ

ಫೋಟೋ ಆಲ್ಬಂ: ಲೀಲಾ ಪ್ಯಾಲೇಸ್ ನಲ್ಲಿ ಚಿರು-ಮೇಘನಾ 'ರಾಯಲ್' ನಿಶ್ಚಿತಾರ್ಥ

Posted By:
Subscribe to Filmibeat Kannada

ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಬಾಳಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಇಷ್ಟು ದಿನ ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದ ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಂತಾಗಿದೆ.

ಚಿತ್ರಪಟ: ಚಿರು - ಮೇಘನಾ ನಿಶ್ಚಿತಾರ್ಥದ ಅಮೂಲ್ಯ ಕ್ಷಣಗಳು

ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೆ.ಪಿ.ನಗರದಲ್ಲಿ ಇರುವ ಮೇಘನಾ ರಾಜ್ ನಿವಾಸದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನಡೆಯಿತು. ಸರಳವಾಗಿ ನಡೆದ ಉಂಗುರ ಬದಲಾಯಿಸಿಕೊಳ್ಳುವ ಶಾಸ್ತ್ರದಲ್ಲಿ ಉಭಯ ಕುಟುಂಬಗಳಷ್ಟೇ ಪಾಲ್ಗೊಂಡಿದ್ದರು. ಬಳಿಕ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಗ್ರ್ಯಾಂಡ್ ಫಂಕ್ಷನ್ ನಡೆಯಿತು. ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ....

ಲೀಲಾ ಪ್ಯಾಲೇಸ್ ನಲ್ಲಿ 'ರಾಯಲ್' ನಿಶ್ಚಿತಾರ್ಥ

ಶಾಸ್ತ್ರೋಕ್ತವಾಗಿ ಉಂಗುರ ಬದಲಾಯಿಸಿಕೊಂಡ ಬಳಿಕ ಲೀಲಾ ಪ್ಯಾಲೇಸ್ ನಲ್ಲಿ ಚಿರಂಜೀವಿ ಸರ್ಜಾ-ಮೇಘನಾ ರಾಜ್ 'ರಾಯಲ್' ನಿಶ್ಚಿತಾರ್ಥ ನಡೆಯಿತು. ಅರ್ಥಾತ್ 'ರಾಯಲ್' ಥೀಮ್ ನಲ್ಲಿ ಈ ಸಮಾರಂಭ ನಡೆಯಿತು.

ಇಪ್ಪತ್ತೈದು ವರ್ಷಗಳ ಬಳಿಕ 'ಸರ್ಜಾ' ಕುಟುಂಬದಲ್ಲಿ ಇಂದು ಸಡಗರ-ಸಂಭ್ರಮ

ತಾರಾ ಜೋಡಿ

ಪರ್ಪಲ್ ಬಣ್ಣದ ಗೌನ್ ನಲ್ಲಿ ಮೇಘನಾ ರಾಜ್ ಕಂಗೊಳಿಸಿದರೆ, ನೀಲಿ ಬಣ್ಣದ ಸೂಟು-ಬೂಟಿನಲ್ಲಿ ಚಿರಂಜೀವಿ ಸರ್ಜಾ ಮಿಂಚಿದರು.

ಜಗ್ಗೇಶ್ ಕುಟುಂಬ ಭಾಗಿ

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಗೆ ನಟ ಜಗ್ಗೇಶ್ ಹಾಗೂ ಕುಟುಂಬ ಶುಭ ಹಾರೈಸಿದರು.

ತಾರೆಯರು ದಂಡು

ಲೀಲಾ ಪ್ಯಾಲೇಸ್ ನಲ್ಲಿ ನಡೆದ ಸಮಾರಂಭದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ, ಜಗ್ಗೇಶ್ ಸೇರಿದಂತೆ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು.

ಮದುವೆ ಯಾವಾಗ.?

ಸದ್ಯಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿಯ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

English summary
Chiranjeevi Sarja-Meghana Raj engagement in Leela Palace. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X