For Quick Alerts
  ALLOW NOTIFICATIONS  
  For Daily Alerts

  'ಜಗ್ಗುದಾದಾ' ಚಿತ್ರಕ್ಕೆ ಹೀರೋ ಯಾರು ದರ್ಶನ್/ಸೃಜನ್ ಲೋಕೇಶ್?

  By Suneetha
  |

  ದರ್ಶನ್ ಅವರ ಈ ವರ್ಷದ ಬಹುನಿರೀಕ್ಷಿತ 'ಜಗ್ಗುದಾದಾ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೇ 9 ರಂದು ಬೆಂಗಳೂರಿನ ಗೋಲ್ಡ್ ಫಿನ್ಚ್ ಹೋಟೆಲ್ ನಲ್ಲಿ ಬಹಳ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮದ ಸುಂದರ ಸಂಜೆಗೆ ಹಲವಾರು ಗಣ್ಯರು ಸಾಕ್ಷಿಯಾದರು.

  ಅಂದಹಾಗೆ ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ಚಿತ್ರಗಳಲ್ಲಿ ಅವರಿಗೆ ಲೆಕ್ಕಕ್ಕಿಂತ ಜಾಸ್ತಿ ಬಿಲ್ಡಪ್ ಕೊಟ್ಟು ಕೊಂಚ ಓವರ್ ಆಗಿ ತೋರಿಸುತ್ತಾರೆ ಎಂದು ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೆ ಉತ್ತಮ ನಿದರ್ಶನ ಅಂದರೆ 'Mr.ಐರಾವತ' [ಚಿತ್ರ ವಿಮರ್ಶೆ: 'Mr.ಐರಾವತ'] ಮತ್ತು 'ವಿರಾಟ್' [ಚಿತ್ರ ವಿಮರ್ಶೆ: ವಿರಾಟ್] ಚಿತ್ರಗಳು. ಈ ಚಿತ್ರಗಳಲ್ಲಿ ದರ್ಶನ್ ಅವರಿಗೆ ಬೇಡ ಬೇಡ ಅನ್ನೋವಷ್ಟು ಬಿಲ್ಡಪ್ ಕೊಡಲಾಗಿತ್ತು.

  ಆದರೆ ಈ ಬಾರಿ 'ಜಗ್ಗುದಾದಾ' ಚಿತ್ರದಲ್ಲಿ ಮಾತ್ರ ಬಿಲ್ಡಪ್ ಅನ್ನೋ ಪದಕ್ಕೆ ಜಾಗನೇ ಇಲ್ವಂತೆ. ಹೀಗಂತ ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಹೌದು 'ಜಗ್ಗುದಾದಾ' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ದರ್ಶನ್ 'ಈ ಚಿತ್ರದಲ್ಲಿ ನಾನು ಯಾವುದೇ ಬಿಲ್ಡಪ್ ಇಲ್ಲದೆ ಸರಳವಾಗಿ ನಟಿಸಿದ್ದೇನೆ' ಎಂದಿದ್ದಾರೆ.

  "ಇತ್ತೀಚೆಗೆ ನನ್ನ ಬಗ್ಗೆ ಎಲ್ಲರೂ ತುಂಬಾ ದೂರು ಹೇಳುತ್ತಿದ್ದರು, ನನ್ನ ಚಿತ್ರಗಳಲ್ಲಿ ನಾನು ತುಂಬಾ ಓವರ್ ಬಿಲ್ಡಪ್ ಕೊಡುತ್ತೀನಿ ಅಂತ. ಆದರೆ ಈ ಬಾರಿ ಮಾತ್ರ ಹಾಗೇನೂ ಇಲ್ಲ, ಈ ಚಿತ್ರದಲ್ಲಿ ನನಗೆ ಕಡಿಮೆ ಮಾತಿದ್ದು, ಹೆಚ್ಚು ಬಿಲ್ಡಪ್ ಗಳಿಲ್ಲ. ನನ್ನ ಬದಲು ಈ ಚಿತ್ರದಲ್ಲಿ ಸೃಜನ್ ಹೀರೋ ಆಗಿದ್ದಾರೆ".[ದರ್ಶನ್ ರವರ 'ಜಗ್ಗುದಾದಾ' ಚಿತ್ರದ ಹಾಡುಗಳು ಹೇಗಿವೆ.?]

  "ಅವರೇ ಒಂಥರಾ ಪ್ಯಾರಲೆಲ್ ಹೀರೋ ಅಂದರೂ ತಪ್ಪಿಲ್ಲ. 'ಜಗ್ಗುದಾದಾ' ಎಂಬ ಹೆಸರು ಕೇಳಿದಾಕ್ಷಣ ಇದೊಂಥರಾ ರಗಡ್ ಸಿನಿಮಾ ಎನಿಸಬಹುದು. ಆದರೆ ಇದರಲ್ಲಿ ಅಷ್ಟೇ ಕಾಮಿಡಿ ದೃಶ್ಯಗಳು ಕೂಡ ಇವೆ. ಒಬ್ಬ ಕುಖ್ಯಾತ ರೌಡಿ ಮದುವೆ ಆಗಲು ಎಷ್ಟು ಕಷ್ಟ ಪಡುತ್ತಾನೆ ಎಂಬುದನ್ನು ಇಡೀ ಚಿತ್ರದಲ್ಲಿ ಬಹಳ ಕಾಮಿಡಿಯಾಗಿ ತೋರಿಸಲಾಗಿದೆ' ಎಂದು ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ತಿಳಿಸಿದ್ದಾರೆ.

  ಪಿ.ಎನ್ ಸತ್ಯ ಮತ್ತು ಎಂ.ಜಿ ರಾಮಮೂರ್ತಿ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಕಾರ್ಯಕ್ರಮದಲ್ಲಿ ನಟಿ ತಾರಾ, 'ಜಗ್ಗುದಾದಾ' ನಾಯಕಿ ದೀಕ್ಷಾ ಸೇಠ್, ನಟಿ ದೀಪಿಕಾ ಕಾಮಯ್ಯ, ನಟ ಆದಿತ್ಯ, ಗಾಯಕ ಹೇಮಂತ್, ನಟ ಸೃಜನ್ ಲೋಕೇಶ್, ನಿರ್ದೇಶಕ ರಾಘವೇಂದ್ರ ಹೆಗಡೆ ಮತ್ತು ಚಿತ್ರತಂಡದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.[ದಾಖಲೆ ಮೊತ್ತಕ್ಕೆ ಮಾರಾಟವಾದ 'ಜಗ್ಗುದಾದಾ' ಹಿಂದಿ ಡಬ್ಬಿಂಗ್ ಹಕ್ಕು]

  ಆಡಿಯೋ ಸಮಾರಂಭದ ಫೋಟೋ ಆಲ್ಬಂ ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದ್ದು, ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  -ದರ್ಶನ್ ಅವರ ಕುಚಿಕು ಗೆಳೆಯ 'ಡೆಡ್ಲಿ' ನಟ ಆದಿತ್ಯ

  -ನಟ ಧರ್ಮ ಕೀರ್ತಿರಾಜ್ ಜೊತೆ ದರ್ಶನ್ ಮಸ್ತಿ

  'ಜಗ್ಗುದಾದಾ' ಚಿತ್ರದ ಬಗ್ಗೆ ದರ್ಶನ್ ಹಂಚಿಕೊಂಡ ಕೆಲ ಸಂಗತಿಗಳು

  -ಸಂಭ್ರಮದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಗಣ್ಯರು

  -ಸಂಭ್ರಮದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಗಣ್ಯರು

  -ಕನ್ನಡ ನಟ ಸೃಜನ್ ಲೋಕೇಶ್

  -ಸೃಜನ್ ಲೋಕೇಶ್, ದರ್ಶನ್, ಧರ್ಮಕೀರ್ತಿರಾಜ್, ದೀಕ್ಷಾ ಸೇಠ್

  -ಸೃಜನ್ ಲೋಕೇಶ್, ದರ್ಶನ್, ಗಾಯಕ ಹೇಮಂತ್

  -ನಟಿ ತಾರಾ ಜೊತೆ ದರ್ಶನ್ ಮತ್ತು ಜಗ್ಗುದಾದಾ ಚಿತ್ರತಂಡ

  -ನಟಿ ತಾರಾ ಜೊತೆ ದರ್ಶನ್ ಮತ್ತು ಜಗ್ಗುದಾದಾ ಚಿತ್ರತಂಡ

  English summary
  P N Satya and M G Ramamurthy who were the director and producer of Darshan's first film as a hero, 'Majestic' released the audio of his forthcoming film 'Jaggu Dada' on in Bangalore. The movie is directed by Raghavendra Hegde.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X