»   » ಫೋಟೋ ನೋಡಿ: ಮಲೇಶಿಯಾದಲ್ಲಿ 'ಚಕ್ರವರ್ತಿ' ದರ್ಶನ್ ಚಕ್ರಾಧಿಪತ್ಯ

ಫೋಟೋ ನೋಡಿ: ಮಲೇಶಿಯಾದಲ್ಲಿ 'ಚಕ್ರವರ್ತಿ' ದರ್ಶನ್ ಚಕ್ರಾಧಿಪತ್ಯ

Posted By:
Subscribe to Filmibeat Kannada

ಇಲ್ಲಿಯವರೆಗೂ ದರ್ಶನ್ ಅಭಿನಯಿಸಿರುವ ಯಾವುದೇ ಚಿತ್ರವನ್ನ ತೆಗೆದುಕೊಳ್ಳಿ...ರೌಡಿ ಆಗಿ, ಕಾಲೇಜು ಹುಡುಗನಾಗಿ, ದುಷ್ಟರ ವಿರುದ್ಧ ಸಿಡಿದೇಳುವ ಕ್ರಾಂತಿಕಾರಿಯಾಗಿ, ಯೋಧನಾಗಿ, ಆಟೋ ಡ್ರೈವರ್ ಆಗಿ ಅನೇಕ ಪಾತ್ರಗಳಿಗೆ ದರ್ಶನ್ ಜೀವ ತುಂಬಿದ್ದಾರೆ.

ಈಗ 'ಚಕ್ರವರ್ತಿ' ಚಿತ್ರದ ಮೂಲಕ ಅಂಡರ್ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್. ರೆಟ್ರೋ ಸ್ಟೈಲ್ ನಲ್ಲಿ ಸಾಗುವ 'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ರವರ 'ಅಂದಿನ ಜಮಾನ'ದ ಗೆಟಪ್ ನ ಈಗಾಗಲೇ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ನೋಡಿದ್ದೀರಾ...[ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.!]


ಈಗ ಏಕ್ದಂ ಸ್ಟೈಲಿಶ್ 'ಚಕ್ರವರ್ತಿ' ನೋಡುವ ಕಾಲ ಬಂದಿದೆ. 'ಚಕ್ರವರ್ತಿ' ಚಿತ್ರಕ್ಕಾಗಿ ದರ್ಶನ್ ತಾಳಿರುವ ಹೊಸ ರೂಪ ಇಲ್ಲಿದೆ ನೋಡಿ....


ಇದೇ ನೋಡಿ ದರ್ಶನ್ ಹೊಸ ಲುಕ್....

'ಚಕ್ರವರ್ತಿ' ಸಿನಿಮಾಗಾಗಿ ಕೂದಲಿಗೆ ಹೇರ್ ಕಲರ್ ಮಾಡಿಸಿ, ನೀಲಿ ಬಣ್ಣದ ಸೂಟ್ ತೊಟ್ಟು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕೊಂಡು, ಖಡಕ್ ಪೋಸ್ ಕೊಟ್ಟಿರುವ ದರ್ಶನ್ 'ದರ್ಶನ' ನಿಮಗಾಗಿ....['ಚಕ್ರವರ್ತಿ'ಯಲ್ಲಿ ದರ್ಶನ್ ನ್ಯೂ ಲುಕ್ ಹೇಗಿದೆ, ನೋಡಿದ್ರಾ?]


ಓ ಕೆಂಚ...ಓ ಕೆಂಚ....

ದರ್ಶನ್ ರವರ ಹೊಸ ಗೆಟಪ್ ನೋಡಿದ ಕೂಡಲೆ 'ಓ ಕೆಂಚ..ಓ ಕೆಂಚ..ನೀನಂದ್ರೆ ನಂಗಿಷ್ಟ ಕಣೋ..' ಹಾಡು ನೆನಪಾದರೆ ಅಚ್ಚರಿ ಇಲ್ಲ.! [ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]


ಮಲೇಶಿಯಾದಲ್ಲಿ ಶೂಟಿಂಗ್

ಸದ್ಯ 'ಚಕ್ರವರ್ತಿ' ಚಿತ್ರದ ಶೂಟಿಂಗ್ ಮಲೇಶಿಯಾದ ಸುಂದರ ತಾಣಗಳಲ್ಲಿ ನಡೆಯುತ್ತಿದೆ.


ಇಲ್ಲೊಂದು ಲುಕ್, ಅಲ್ಲೊಂದು ಲುಕ್

ಮೈಸೂರಿನಲ್ಲಿ 'ಚಕ್ರವರ್ತಿ' ಶೂಟಿಂಗ್ ನಡೆಯುತ್ತಿದ್ದಾಗ ಬೂಟ್ ಕಟ್ ಪ್ಯಾಂಟ್, ಚೆಕ್ಸ್ ಶರ್ಟ್ ತೊಟ್ಟು ರೆಟ್ರೋ ಲುಕ್ ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಈಗ ಮಲೇಶಿಯಾಗೆ ಹಾರಿದ ಕೂಡಲೆ ಅವರ ಸ್ಟೈಲ್ ಕೂಡ ಬದಲಾಗಿದೆ. ಅಲ್ಲಿಗೆ, 'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಗೆ ವಿಭಿನ್ನ ಶೇಡ್ ಗಳಿರುವುದು ಗ್ಯಾರೆಂಟಿ.


'ಚಕ್ರವರ್ತಿ' ಚಿತ್ರದಲ್ಲಿ ದೊಡ್ಡ ತಾರಾಬಳಗ

ದರ್ಶನ್ ಜೊತೆ ದಿನಕರ್ ತೂಗುದೀಪ, ದೀಪಾ ಸನ್ನಿಧಿ, ಚಾರುಲತಾ, ಸೃಜನ್ ಲೋಕೇಶ್, ಆದಿತ್ಯ ಸೇರಿದಂತೆ ದೊಡ್ಡ ತಾರಾಬಳಗ 'ಚಕ್ರವರ್ತಿ' ಚಿತ್ರದಲ್ಲಿದೆ. ಚಿಂತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.


English summary
Check out the brand new killer look of Kannada Actor Darshan for Kannada Movie 'Chakravarthy'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada