»   » ಚಿತ್ರಗಳು ; ಯಾರ ಮದುವೆಯಲ್ಲಿ ದರ್ಶನ್ ಕುಣಿದು ಕುಪ್ಪಳಿಸಿದ್ರು?

ಚಿತ್ರಗಳು ; ಯಾರ ಮದುವೆಯಲ್ಲಿ ದರ್ಶನ್ ಕುಣಿದು ಕುಪ್ಪಳಿಸಿದ್ರು?

Posted By:
Subscribe to Filmibeat Kannada

ಸ್ವರ್ಗವೇ ಧರೆಗೆ ಇಳಿದಂತೆ ಮದುವೆ ಮನೆ ವೈಭವದಿಂದ ಸಿಂಗಾರಗೊಂಡಿತ್ತು. ಎತ್ತ ತಿರುಗಿ ನೋಡಿದರೂ ಆಡಂಬರ ಕಣ್ಣು ಕುಕ್ಕುತ್ತಿತ್ತು.

ಅರಮನೆಯಂತೆ ಕಂಗೊಳಿಸುತ್ತಿದ್ದ ಮದುವೆ ಮಂಟಪದ ಎದುರು ಚಾಲೆಂಜಿಂಗ್ ಸ್ಟಾರ್ ದರ್ಶನ್ ನರ್ತನ.! ಸಂಗಡಿಗರೊಂದಿಗೆ ದರ್ಶನ್ ಸ್ಟೆಪ್ ಹಾಕ್ತಿದ್ರೆ, 'ದಾಸ'ನ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಹಬ್ಬ ಯಾವುದಿದೆ? [ಚಿತ್ರಗಳು : 'ಜಗ್ಗು ದಾದಾ' ಅಡ್ಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್]

ಅಂದ್ಹಾಗೆ, ದರ್ಶನ್ ಹೀಗೆ ಭರ್ಜರಿ ಸ್ಟೆಪ್ ಹಾಕಿರುವುದು ಯಾರ ಮದುವೆಯಲ್ಲಿ? ಅಂತ ಯೋಚನೆ ಮಾಡ್ತಿದ್ದೀರಾ...ಪೂರಾ ಮ್ಯಾಟರ್ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

ರೀಲ್ ಸುದ್ದಿ.!

ದರ್ಶನ್ ಹೀಗೆ ಮದುವೆ ಮನೆ ಅಂಗಳದಲ್ಲಿ ಕುಣಿದು ಕುಪ್ಪಳಿಸುತ್ತಿರುವುದು 'ಜಗ್ಗು ದಾದಾ' ಚಿತ್ರದ ಹಾಡೊಂದಕ್ಕೆ.

ಅದ್ದೂರಿ ಸೆಟ್ ನಲ್ಲಿ ದರ್ಶನ್ ಡ್ಯಾನ್ಸ್!

ಅದ್ದೂರಿ ಸೆಟ್ ನಲ್ಲಿ ದರ್ಶನ್ ಅಭಿನಯದ 'ಜಗ್ಗು ದಾದಾ' ಚಿತ್ರದ ಮದುವೆ ಸಾಂಗ್ ಚಿತ್ರೀಕರಣಗೊಂಡಿದೆ.

ಸ್ಪೆಷಲ್ ಏನು ಗೊತ್ತಾ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಪುತ್ರಿ ನಿರುಪಮಾ ಮದುವೆಯಾದ ಸ್ಥಳದಲ್ಲೇ 'ಜಗ್ಗು ದಾದಾ' ಚಿತ್ರದ ಮದುವೆ ಹಾಡಿಗೆ ಸ್ಪೆಷಲ್ ಸೆಟ್ ನಿರ್ಮಿಸಲಾಗಿತ್ತು.

ಡ್ಯಾನ್ಸರ್ಸ್ ದಂಡೇ ಇದೆ!

'ಜಗ್ಗು ದಾದಾ' ಚಿತ್ರದ ಈ ಮದುವೆ ಹಾಡಿಗೆ ಒಟ್ಟು 450 ಜೂನಿಯರ್ ಡ್ಯಾನ್ಸರ್ಸ್, 110 ನೃತ್ಯಗಾರರು ಮತ್ತು 20 ಹಿರಿಯ ಮಹಿಳೆಯರು ಭಾಗಿಯಾಗಿದ್ದರು.

ದರ್ಶನ್ ಜೊತೆ ರವಿಶಂಕರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ರವಿಶಂಕರ್ ಕೂಡ 'ಜಗ್ಗು ದಾದಾ' ಚಿತ್ರದಲ್ಲಿ ನಟಿಸಿದ್ದಾರೆ. ರವಿಶಂಕರ್ ಪಾತ್ರ ಚಿತ್ರದಲ್ಲಿ ಸಖತ್ ಡಿಫರೆಂಟ್ ಆಗಿದೆ ಅನ್ನೋದಕ್ಕೆ ಈ ಫೋಟೋ ಸಾಕ್ಷಿ.

ಗಜ ಜೊತೆ ಸೃಜ!

'ಜಗ್ಗು ದಾದಾ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸೃಜನ್ ಲೋಕೇಶ್ ಕೂಡ ಮದುವೆ ಸಾಂಗ್ ನಲ್ಲಿ ಭಾಗಿಯಾಗಿದ್ದಾರೆ.

ವಿಶಾಲ್ ಕೂಡ ಇದ್ದಾರೆ!

ಚಾಕಲೇಟ್ ಬಾಯ್ ವಿಶಾಲ್ ಹೆಗಡೆ ಕೂಡ 'ಜಗ್ಗು ದಾದಾ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

ದೀಕ್ಷಾ ಸೇಠ್ ನಾಯಕಿ

ಮೊದಲ ಬಾರಿ ದರ್ಶನ್ ಗೆ ನಾಯಕಿಯಾಗಿರುವ ದೀಕ್ಷಾ ಸೇಠ್ ಮದುವೆ ಮನೆಯಲ್ಲಿ ಕಂಗೊಳಿಸಿದ್ದು ಹೀಗೆ....

ವಿಭಿನ್ನ ಪಾತ್ರದಲ್ಲಿ ದರ್ಶನ್!

ಇದುವರೆಗೂ ನೀವು ತೆರೆ ಮೇಲೆ ನೋಡದ ದರ್ಶನ್ ರನ್ನ 'ಜಗ್ಗು ದಾದಾ' ಸಿನಿಮಾದಲ್ಲಿ ನೋಡಬಹುದು ಅಂತ ನಿರ್ದೇಶಕ ರಾಘವೇಂದ್ರ ಹೆಗಡೆ ಹೇಳುತ್ತಾರೆ.

ಎಲ್ಲೆಲ್ಲಿ ಶೂಟಿಂಗ್ ಆಗಿದೆ!

ಈಗಾಗಲೇ ಮುಂಬೈ, ಚೆನ್ನೈ ಸೇರಿದಂತೆ ಅನೇಕ ಕಡೆ 'ಜಗ್ಗು ದಾದಾ' ಚಿತ್ರದ ಶೂಟಿಂಗ್ ನಡೆದಿದ್ದು, ಉಳಿದ ಹಾಡುಗಳ ಚಿತ್ರೀಕರಣಕ್ಕೆ ಇಟಲಿಗೆ ಹಾರುವ ಸಾಧ್ಯತೆ ಇದೆ.

ವಿ.ಹರಿಕೃಷ್ಣ ಸಂಗೀತ ಸಂಯೋಜನೆ

ದರ್ಶನ್ ರವರ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್ ವಿ.ಹರಿಕೃಷ್ಣ 'ಜಗ್ಗು ದಾದಾ' ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

ರಿಲೀಸ್ ಯಾವಾಗ?

ಇನ್ನೂ ಶೂಟಿಂಗ್ ಹಂತದಲ್ಲೇ ಇರುವ 'ಜಗ್ಗು ದಾದಾ' ಚಿತ್ರ ಬಿಡುಗಡೆ ಆಗುವುದಕ್ಕೆ ಕನಿಷ್ಟ ಅಂದ್ರೂ ಇನ್ನೂ ಮೂರು ತಿಂಗಳು ಬೇಕು.

English summary
Kannada Actor Darshan shakes his leg for Kannada Movie 'Jaggu Dada' wedding song. The Actor's pics from the sets of 'Jaggu Dada' is here. Check out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada