»   » ಕನ್ನಡ ಥಳಕು ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು

ಕನ್ನಡ ಥಳಕು ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು

By: ಹರಾ
Subscribe to Filmibeat Kannada

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಅನ್ನುವ ಕಾಲವೊಂದಿತ್ತು. ಈಗ ಹಾಗಿಲ್ಲ, ಗಂಡ-ಹೆಂಡಿರ ಜಗಳ ವಿಚ್ಛೇದನ ಪಡೆಯುವ ತನಕ ಅನ್ನುವ ಹಾಗಾಗಿದೆ.

ಬೆಳ್ಳಿತೆರೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನಮ್ಮ ಸ್ಟಾರ್ ಗಳು, ಅದ್ಯಾಕೋ ನಿಜ ಜೀವನದಲ್ಲಿ ಮಾತ್ರ ಎಡವುತ್ತಾರೆ. ತೆರೆಮೇಲೆ 'ಉತ್ತಮ ಕಲಾವಿದ' ಅನಿಸಿಕೊಂಡವರೆಲ್ಲಾ, ಮನೆಯಲ್ಲಿ 'ಉತ್ತಮ ಗಂಡ' ಆಗಿರುವುದಕ್ಕೆ ಕಷ್ಟಸಾಧ್ಯವೇನೋ.? ಇನ್ನೂ ನಟಿಯರ ಪರಿಸ್ಥಿತಿ ಕೂಡ ಆಲ್ ಮೋಸ್ಟ್ ಸೇಮ್. [14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]

ಇದೇ ಕಾರಣಕ್ಕೆ ಒಬ್ಬರ ನಂತರ ಮತ್ತೊಬ್ಬರು ವಿವಾಹ ವಿಚ್ಛೇದನ ವಿಚಾರವಾಗಿ ಚಿತ್ರರಂಗದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಎಲ್ಲರ ಮನೆ ದೋಸೆನೂ ತೂತು ನಿಜ. ಆದ್ರೆ, ಯುವಕರಿಗೆ ರೋಲ್ ಮಾಡೆಲ್ ಆಗಿರುವ ಸೆಲೆಬ್ರಿಟಿ ಕಲಾವಿದರೇ ಇದೀಗ ವಿಚ್ಛೇದನ ವಿಚಾರವಾಗಿ ಸದ್ದು ಮಾಡುತ್ತಿರುವುದು ಮಾತ್ರ ಬೇಸರದ ಸಂಗತಿ.

ಕನ್ನಡ ಚಿತ್ರರಂಗದ ಪ್ರಮುಖರ ವಿವಾಹ ವಿಚ್ಛೇದನ ಪ್ರಕರಣಗಳು ಫೋಟೋ ಸ್ಲೈಡ್ ನಲ್ಲಿ ನೋಡಿ......

ಕಿಚ್ಚ ಸುದೀಪ್-ಪ್ರಿಯಾ

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ಜೋಡಿಯನ್ನ ನೋಡ್ತಿದ್ರೆ ಎಂಥವರಿಗೂ ಖುಷಿ ಆಗುತ್ತಿತ್ತು. ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಇದೀಗ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಮೂಲಕ ತಮ್ಮ 14 ವರ್ಷಗಳ ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಡುವುದಕ್ಕೆ ನಿರ್ಧರಿಸಿದ್ದಾರೆ.

ದುನಿಯಾ ವಿಜಯ್-ನಾಗರತ್ನ

ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ವಿಚ್ಛೇದನ ಪ್ರಹಸನ ಒಂದು ವರ್ಷ ಕಾಲ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡಿತ್ತು. ಕೊನೆಗೆ ಮಕ್ಕಳ ಭವಿಷ್ಯಕ್ಕಾಗಿ ತಲೆಬಾಗಿದ ಈ ಜೋಡಿಯ ಸಂಸಾರ ಈಗ ಆನಂದ ಸಾಗರ.

ಪ್ರಕಾಶ್ ರೈ-ಲಲಿತಾ ಕುಮಾರಿ

ಕನ್ನಡ ನಟ ಪ್ರಕಾಶ್ ರೈ, ಲಲಿತಾ ಕುಮಾರಿ ಅವರನ್ನ ಮದುವೆಯಾಗಿದ್ದು 1994ರಲ್ಲಿ. ಮದುವೆಯಾದ 15 ವರ್ಷಗಳ ಬಳಿಕ ಪ್ರಕಾಶ್ ರೈ, ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು ಮತ್ತೊಂದು ಮದುವೆಯಾದರು.

ಶೃತಿ-ಮಹೇಂದರ್

ಪ್ರೀತಿಸಿ ಮದುವೆಯಾಗಿದ್ದ ನಟಿ ಶೃತಿ ಮತ್ತು ನಿರ್ದೇಶಕ ಮಹೇಂದರ್ ಸಂಸಾರದಲ್ಲೂ ಅಪಶೃತಿ ಕೇಳಿಬಂದ ಕಾರಣ ಇಬ್ಬರು ವಿಚ್ಛೇದನ ಪಡೆದರು.

ಅನುಪ್ರಭಾಕರ್-ಕೃಷ್ಣಕುಮಾರ್

ಸ್ಯಾಂಡಲ್ ವುಡ್ ತಾರೆ ಅನುಪ್ರಭಾಕರ್ ಕೂಡ ತಮ್ಮ ಹನ್ನೆರಡು ವರ್ಷಗಳ ದಾಂಪತ್ಯ ಜೀವನಕ್ಕೆ ಶುಭಂ ಹಾಡಲು, ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಭಿನಯ ಶಾರದೆ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರ ಜೊತೆ 2002ರಲ್ಲಿ ಅನು ಪ್ರಭಾಕರ್ ಮದುವೆಯಾಗಿತ್ತು.

ರಾಜೇಶ್ ಕೃಷ್ಣನ್-ರಮ್ಯಾ

ಕನ್ನಡದ ಜನಪ್ರಿಯ ಗಾಯಕ ರಾಜೇಶ್ ಕೃಷ್ಣನ್, ಗಾಯಕಿ ರಮ್ಯಾ ವಸಿಷ್ಟ ಅವರನ್ನ ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ವಿವಾಹವಾಗಿದ್ದರು. ಆದ್ರೆ, ಒಂದೇ ವರ್ಷಕ್ಕೆ ಇಬ್ಬರ ಸಂಬಂಧ ಮುರಿದು ಬಿತ್ತು.

English summary
Kannada Actor Sudeep has decided to end 14 years of relationship with his wife Priya. The couple has applied for Divorce on Mutual consent. Check out the Sandalwood Divorced Celebrities in Pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada