»   » ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ

ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ

Posted By:
Subscribe to Filmibeat Kannada

ಯಾರಿಗೂ ಹೇಳದೆ, ಆಹ್ವಾನ ನೀಡದೆ, ಗ್ರ್ಯಾಂಡ್ ಆಗಿ ಪೂಜೆ ಮಾಡದೆ, ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಕೊಟ್ಟು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪಬ್ಲಿಸಿಟಿ ಪಡೆಯುವ ಸಿನಿಮಾಗಳ ಟ್ರೆಂಡ್ ಗಾಂಧಿನಗರದಲ್ಲಿ ಈಗ ಶುರು ಆಗಿದೆ.

ಆದ್ರೆ, ಶಿವರಾಜ್ ಕುಮಾರ್ ಮುಂಚೆ ಹೇಗಿದ್ರೋ, ಈಗ್ಲೂ ಹಾಗೆ. ಕೊಂಚ ಕೂಡ ಬದಲಾಗಿಲ್ಲ. ಗಾಂಧಿನಗರದ ಸಂಪ್ರದಾಯದ ಪ್ರಕಾರ, ಎಲ್ಲರ ಸಮ್ಮುಖದೊಂದಿಗೆ ತಮ್ಮ ಚಿತ್ರಗಳ ಮುಹೂರ್ತ ನೆರವೇರಿಸುತ್ತಾರೆ ಶಿವಣ್ಣ. ಹಾಗೇ, 'ಟಗರು' ಚಿತ್ರದ ಮುಹೂರ್ತ ಸಮಾರಂಭ ಕೂಡ ನಿನ್ನೆ ಆಗಸ್ಟ್ 21 ರಂದು ಅದ್ಧೂರಿ ಆಗಿ ನಡೆಯಿತು. [ಹುಶಾರು..ಇದು ಪೊಗರು ತುಂಬಿರೋ 'ಟಗರು']


ಬಹುಶಃ ಇತ್ತೀಚಿನ ದಿನಗಳಲ್ಲಿ, ಇಡೀ ಚಿತ್ರತಂಡದ ಸಮ್ಮುಖದಲ್ಲಿ, ಇಷ್ಟೊಂದು ಅದ್ಧೂರಿ ಆಗಿ, ಯಾವ ಚಿತ್ರದ ಮುಹೂರ್ತದ ಕೂಡ ನಡೆದಂತಿಲ್ಲ. ಗವಿಪುರಂನ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದ 'ಟಗರು' ಚಿತ್ರದ ಮುಹೂರ್ತ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ....


ಪತ್ನಿ ಸಮೇತ ಹಾಜರಾದ ಶಿವಣ್ಣ

'ಟಗರು' ಚಿತ್ರದ ಮುಹೂರ್ತ ಸಮಾರಂಭಕ್ಕೆ ಪತ್ನಿ ಗೀತಾ ಜೊತೆ ಶಿವರಾಜ್ ಕುಮಾರ್ ಹಾಜರ್ ಆದರು.


ರವಿಚಂದ್ರನ್ ಕ್ಲಾಪ್ ಮಾಡಿದ್ರು!

'ಟಗರು' ಚಿತ್ರದ ಮುಹೂರ್ತದ ಶಾಟ್ ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದರು.


ಶುಭ ಕೋರಿದ ಯಶ್

'ಟಗರು' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಶಿವಣ್ಣನಿಗೆ ಶುಭ ಕೋರಲು ರಾಕಿಂಗ್ ಸ್ಟಾರ್ ಯಶ್ ಆಗಮಿಸಿದ್ರು.


ಇಡೀ ಚಿತ್ರತಂಡ ನೆರೆದಿತ್ತು!

ಸಾಮಾನ್ಯವಾಗಿ ಚಿತ್ರವೊಂದರ ಮುಹೂರ್ತ ಅಂದ್ರೆ ನಿರ್ದೇಶಕ, ನಿರ್ಮಾಪಕ, ನಾಯಕ, ನಾಯಕಿ ಮಾತ್ರ ಹಾಜರ್ ಆಗ್ತಾರೆ. ಆದ್ರೆ, 'ಟಗರು' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಇಡೀ ಚಿತ್ರತಂಡ ಪಾಲ್ಗೊಂಡಿತ್ತು. [ಎಕ್ಸ್ ಕ್ಲ್ಯೂಸಿವ್: ಗುಮ್ಮೋ 'ಟಗರಿಗೆ' ಎದುರಾಗಿ ನಿಂತ ಧನಂಜಯ್]


ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?

ಶಿವಣ್ಣಗೆ 'ಕೆಂಡಸಂಪಿಗೆ' ಮಾನ್ವಿತಾ ಹರೀಶ್ ಜೋಡಿ ಆಗಿದ್ರೆ, ಧನಂಜಯ್ ಮತ್ತು ವಸಿಷ್ಠ ಸಿಂಹ ವಿಲನ್ ಆಗಿ ಮಿಂಚಲಿದ್ದಾರೆ. [ಸೂರಿ 'ಟಗರಿ'ಗೆ ಟಕ್ಕರ್ ನೀಡಲು ಬಂದ 'ಸಿಂಹ'!]


ಶಿವಣ್ಣ ಜೊತೆ ಮೊದಲ ಬಾರಿ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ನಟಿ ಮಾನ್ವಿತಾ ಹರೀಶ್ ದೊಡ್ಡ ಅಭಿಮಾನಿ. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ಅದೃಷ್ಟ ಎನ್ನುತ್ತಾರೆ ಮಾನ್ವಿತಾ. ['ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ]


ಮೊದಲು 'ಕಡ್ಡಿಪುಡಿ' ಈಗ 'ಟಗರು'

'ಕಡ್ಡಿಪುಡಿ' ಚಿತ್ರದಲ್ಲಿ ಮ್ಯಾಜಿಕ್ ಮಾಡಿದ್ದ ಸೂರಿ-ಶಿವಣ್ಣ ಈಗ 'ಟಗರು' ಚಿತ್ರದ ಮೂಲಕ ಒಂದಾಗಿದ್ದಾರೆ.


ಭಟ್ರು ಬಂದಿದ್ರು

'ಟಗರು' ಚಿತ್ರತಂಡಕ್ಕೆ ಶುಭ ಕೋರಲು ನಿರ್ದೇಶಕ ಯೋಗರಾಜ್ ಭಟ್ ಕೂಡ ಆಗಮಿಸಿದ್ರು.


ವಿನಯ್ ರಾಜ್ ಕುಮಾರ್

ದೊಡ್ಡಪ್ಪ ಶಿವರಾಜ್ ಕುಮಾರ್ ರವರ 'ಟಗರು' ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ವಿನಯ್ ರಾಜ್ ಕುಮಾರ್ ಮತ್ತು ಸಾ.ರಾ.ಗೋವಿಂದು ಕೂಡ ಆಗಮಿಸಿದ್ದು ವಿಶೇಷ.


'ಟಗರು' ಚಿತ್ರದಲ್ಲಿ ಚಂದ್ರಿಕಾ?

'ಕೆಂಡಸಂಪಿಗೆ' ಚಿತ್ರದಲ್ಲಿ ನಟಿಸಿದ್ದ ಚಂದ್ರಿಕಾ, 'ಟಗರು' ಸಿನಿಮಾಗೂ ಬಣ್ಣ ಹಚ್ಚುತ್ತಾರಾ? ಉತ್ತರ ಇನ್ನೂ ಸ್ಪಷ್ಟವಿಲ್ಲ.


ನಿರ್ಮಾಪಕ ಕೆ.ಪಿ.ಶ್ರೀಕಾಂತ್

'ಟಗರು' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ಶಿವರಾಜ್ ಕುಮಾರ್ ರವರ ಆಪ್ತ ಕೆ.ಪಿ.ಶ್ರೀಕಾಂತ್


ರೌಡಿಸಂ ಹಿನ್ನಲೆಯ ಸಿನಿಮಾ

'ಟಗರು' ಕೂಡ ರೌಡಿಸಂ ಹಿನ್ನೆಲೆಯಲ್ಲಿ ಸಾಗುವ ಕಥೆ. ಹೀಗಾಗಿ, ಇಲ್ಲೂ ಶಿವಣ್ಣ ಲಾಂಗ್ ಹಿಡಿಯುವುದು ಗ್ಯಾರೆಂಟಿ.


'ಕಾಗೆ ಬಂಗಾರ' ಮುಂದಕ್ಕೆ ತಳ್ಳಿದ ಸೂರಿ

'ಟಗರು' ಚಿತ್ರದ ಕಥೆ ತುಂಬಾ ವಿಭಿನ್ನವಾಗಿದ್ದು, ಇದನ್ನು ಮೊದಲು ಮಾಡಬೇಕು ಎಂಬ ಕಾರಣಕ್ಕೆ 'ದೊಡ್ಮನೆ ಹುಡ್ಗ' ಕಂಪ್ಲೀಟ್ ಆದ ಕೂಡಲೆ ಈ ಚಿತ್ರಕ್ಕೆ ಚಾಲನೆ ನೀಡಿ, 'ಕಾಗೆ ಬಂಗಾರ' ಚಿತ್ರವನ್ನ ಮುಂದಕ್ಕೆ ತಳ್ಳಿದರಂತೆ ನಿರ್ದೇಶಕ ಸೂರಿ.


ಅಭಿಮಾನಿಗಳ ಆಸೆಗೆ ತಕ್ಕಂತೆ 'ಟಗರು'

ಶಿವಣ್ಣನನ್ನ ತೆರೆಮೇಲೆ ಅಭಿಮಾನಿಗಳು ನೋಡಲು ಇಷ್ಟ ಪಡುವ ರೀತಿಯಲ್ಲಿ 'ಟಗರು' ತಯಾರಾಗುತ್ತಂತೆ.


ಶಿವಣ್ಣನಿಗೆ ಇಷ್ಟವಾಗಿದೆ 'ಟಗರು' ಚಿತ್ರದ ಕಥೆ

'ಟಗರು' ಚಿತ್ರದ ಕಥೆ ಶಿವಣ್ಣನಿಗೆ ಇಂಪ್ರೆಸ್ ಆಗಿದೆ. ಹೀಗಾಗಿ ಸೂರಿಗೆ ಕಾಲ್ ಶೀಟ್ ನೀಡಿದ್ದಾರೆ. ಸದ್ಯದಲ್ಲೇ 'ಟಗರು' ಚಿತ್ರದ ಶೂಟಿಂಗ್ ಶುರುವಾಗಲಿದೆ.


English summary
Duniya Soori directorial Kannada Actor Shiva Rajkumar starrer 'Tagaru' muhurat was held yesterday (August) in Bande Mahakali Temple, Bengaluru. Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada