For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್-ಎಚ್.ಡಿ.ಕುಮಾರಸ್ವಾಮಿ ಭೇಟಿ: ಅಸಲಿ ಉದ್ದೇಶ ಏನು?

  By Harshitha
  |

  ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದು ಹೈದರಾಬಾದ್ ನಲ್ಲಿ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನ ಮೀಟ್ ಮಾಡಿದ್ದಾರೆ.

  ಪವನ್ ಕಲ್ಯಾಣ್-ಎಚ್.ಡಿ.ಕೆ ಭೇಟಿ ಹಿಂದೆ ರಾಜಕೀಯ ಉದ್ದೇಶ ಇರಬಹುದು. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕರ್ನಾಟಕ-ಆಂಧ್ರದ ಗಡಿ ಭಾಗದಲ್ಲಿ ಜೆ.ಡಿ.ಎಸ್ ಹವಾ ಎಬ್ಬಿಸಲು ಜನಸೇನಾ ಪಕ್ಷದ ಸಾರಥಿ ಪವನ್ ಕಲ್ಯಾಣ್ ನೆರವು ಪಡೆಯಲು ನಡೆಸಿರುವ ಮೊದಲ ಹಂತದ ಮಾತುಕತೆ ಇದು ಅಂತ ಅನೇಕರು ವಿಶ್ಲೇಷಿಸಬಹುದು. [ಅಣ್ತಮ್ಮ ಪವನ್ ಮೀಟ್ ಮಾಡೋಕೆ ಬಂದಿದ್ದೆ ಬ್ರದರ್: ಎಚ್ಡಿಕೆ]

  ಇದರ ಜೊತೆಗೆ ಈ ಭೇಟಿಯ ಹಿಂದೆ ಎಚ್.ಡಿ.ಕುಮಾರಸ್ವಾಮಿ ರವರ ಸ್ವಾರ್ಥ ಕೂಡ ಇದೆ. ಅದೇನು ಅಂತ ವಿವರವಾಗಿ ಹೇಳ್ತೀವಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ.....

  ಪವನ್ ಕಲ್ಯಾಣ್ ರನ್ನ ಮೀಟ್ ಮಾಡಿದ್ದು...

  ಪವನ್ ಕಲ್ಯಾಣ್ ರನ್ನ ಮೀಟ್ ಮಾಡಿದ್ದು...

  ಹೈದರಾಬಾದ್ ನ ಪ್ರಶಾಂತ್ ನಗರದಲ್ಲಿರುವ ಪವನ್ ಕಲ್ಯಾಣ್ ನಿವಾಸಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದು ತಮ್ಮ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರದ ಟೀಸರ್ ತೋರಿಸಲು.! [ಕನ್ನಡದ ಬಿಸಿ ಬೇಳೆಬಾತ್ ಬದ್ಲು ಹೈದರಾಬಾದ್ ಬಿರಿಯಾನಿ ಉಂಡ ಕುಮಾರಣ್ಣ.!]

  'ಜಾಗ್ವಾರ್' ಟೀಸರ್ ವೀಕ್ಷಿಸಿದ ಪವನ್

  'ಜಾಗ್ವಾರ್' ಟೀಸರ್ ವೀಕ್ಷಿಸಿದ ಪವನ್

  ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯಿಸಿರುವ ಚೊಚ್ಚಲ ಸಿನಿಮಾ 'ಜಾಗ್ವಾರ್' ಟೀಸರ್ ನ ಸ್ಮಾರ್ಟ್ ಫೋನ್ ನಲ್ಲಿ ಪವನ್ ಕಲ್ಯಾಣ್ ವೀಕ್ಷಿಸಿದರು. [ಎಚ್.ಡಿ.ಕುಮಾರಸ್ವಾಮಿ ಸುಪುತ್ರ ನಿಖಿಲ್ ರೋಷ-ಆವೇಶ ಹೀಗಿದೆ....]

  ಪವನ್ ಕಲ್ಯಾಣ್ ಏನಂದ್ರು.?

  ಪವನ್ ಕಲ್ಯಾಣ್ ಏನಂದ್ರು.?

  ಎಚ್.ಡಿ.ಕೆ ಜೊತೆಗಿನ ಭೇಟಿ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಪವನ್, ''ಕಳೆದ ಎಂಟು ವರ್ಷಗಳಿಂದ ಎಚ್.ಡಿ.ಕೆ ಪರಿಚಯ ಇದೆ. ಅವರ ಮಗ ಈಗ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರಿಗೆ ನಾನು ಶುಭಾಶಯ ಕೋರಲು ಬಯಸುತ್ತೇನೆ'' ಅಂತ ಹೇಳಿದರು. ['ಜಾಗ್ವಾರ್' ಬರೋ ಮುನ್ನವೇ 3 ತೆಲುಗು ಚಿತ್ರಕ್ಕೆ ನಿಖಿಲ್ ಬುಕ್ ಆಗಿದ್ದಾರಾ?]

  ಕುಮಾರಸ್ವಾಮಿ ಏನಂದ್ರು ಗೊತ್ತಾ?

  ಕುಮಾರಸ್ವಾಮಿ ಏನಂದ್ರು ಗೊತ್ತಾ?

  ''Actually my son wanted to move in Telugu Film Industry. Personally i wanted to request my Brother Pawan Kalyan to treat my son as his own brother and give all blessings and co-operation'' - ಎಚ್.ಡಿ.ಕುಮಾರಸ್ವಾಮಿ

  ಟಾಲಿವುಡ್ ಕಡೆ ಹೆಚ್ಚು ಗಮನ ಹರಿಸುತ್ತಿರುವ ಎಚ್.ಡಿ.ಕೆ

  ಟಾಲಿವುಡ್ ಕಡೆ ಹೆಚ್ಚು ಗಮನ ಹರಿಸುತ್ತಿರುವ ಎಚ್.ಡಿ.ಕೆ

  ಸ್ಯಾಂಡಲ್ ವುಡ್ ಗಿಂತ ಟಾಲಿವುಡ್ ನಲ್ಲಿ ಮಗ ನಿಖಿಲ್ ಕುಮಾರ್ ಭವಿಷ್ಯದ ಕುರಿತು ಎಚ್.ಡಿ.ಕುಮಾರಸ್ವಾಮಿ ಹೆಚ್ಚು ಗಮನ ಹರಿಸುತ್ತಿದ್ದಾರೆ.

  ಟಾಲಿವುಡ್ ನಲ್ಲೇ 'ಟೀಸರ್' ರಿಲೀಸ್ ಮಾಡಿದ್ರು!

  ಟಾಲಿವುಡ್ ನಲ್ಲೇ 'ಟೀಸರ್' ರಿಲೀಸ್ ಮಾಡಿದ್ರು!

  ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್ ನಲ್ಲಿ 'ಜಾಗ್ವಾರ್' ಚಿತ್ರದ ತೆಲುಗು ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿ ಆಗಿ ನಡೆದಿತ್ತು.

  ತೆಲುಗು ನಟ ಆಗಲು ಇಷ್ಟ?

  ತೆಲುಗು ನಟ ಆಗಲು ಇಷ್ಟ?

  ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗಳಲ್ಲಿ ''ನಿಖಿಲ್ ಕುಮಾರ್ ಗೆ ತೆಲುಗು ಚಿತ್ರರಂಗ ಇಷ್ಟ'' ಎಂಬುದು ಸ್ಪಷ್ಟವಾಗಿದೆ.

  ಗಾಂಧಿನಗರದ ಕಡೆ ಗಮನ ಕಡಿಮೆ

  ಗಾಂಧಿನಗರದ ಕಡೆ ಗಮನ ಕಡಿಮೆ

  ಕನ್ನಡ-ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಿರುವ 'ಜಾಗ್ವಾರ್' ಚಿತ್ರಕ್ಕೆ ಎಚ್.ಡಿ.ಕೆ ಸ್ಯಾಂಡಲ್ ವುಡ್ ಗಿಂತ ಟಾಲಿವುಡ್ ನಲ್ಲಿ ಹೆಚ್ಚು ಪ್ರಚಾರ ನೀಡುತ್ತಿದ್ದಾರೆ.

  ಪವನ್ ಕಲ್ಯಾಣ್ ಗೆ ಅಭಿಮಾನಿಗಳು ಹೆಚ್ಚು!

  ಪವನ್ ಕಲ್ಯಾಣ್ ಗೆ ಅಭಿಮಾನಿಗಳು ಹೆಚ್ಚು!

  ಟಾಲಿವುಡ್ ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು. ಅವರ ಆಶೀರ್ವಾದ ಇದ್ದರೆ, ಮಗನ ಭವಿಷ್ಯ ತೆಲುಗು ಸಿನಿ ಅಂಗಳದಲ್ಲಿ ಉಜ್ವಲ ಅಂತ ಭಾವಿಸಿದ್ದಾರೇನೋ.?

  ಟಾಲಿವುಡ್ ತಂತ್ರಜ್ಞರೇ ಹೆಚ್ಚು

  ಟಾಲಿವುಡ್ ತಂತ್ರಜ್ಞರೇ ಹೆಚ್ಚು

  ನಿರ್ದೇಶಕ ಮಹದೇವ್, ಕಥೆ ಬರೆದಿರುವ ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸೇರಿದಂತೆ 'ಜಾಗ್ವಾರ್' ಚಿತ್ರಕ್ಕೆ ಕೆಲಸ ಮಾಡಿರುವವರ ಪೈಕಿ ತೆಲುಗಿನವರೇ ಹೆಚ್ಚು.

  English summary
  JDS Leader, Ex CM H.D.Kumaraswamy met Tollywood Actor Pawan Kalyan in Hyderabad today (August 20th) to show his son Nikhil Kumar's debut film 'Jaguar' Telugu teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X