»   » ಚಿತ್ರಗಳು: ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ರಂಗೇರಿದ 'ರಂಗಿತರಂಗ'

ಚಿತ್ರಗಳು: ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ರಂಗೇರಿದ 'ರಂಗಿತರಂಗ'

Posted By:
Subscribe to Filmibeat Kannada

ಹೈದ್ರಾಬಾದ್ ನ ಗಾಚಿಬೌಲಿಯಲ್ಲಿ ಆದಿತ್ಯವಾರ (ಜನವರಿ 24) ದಂದು ನಡೆದ ಈ ವರ್ಷದ ಐಐಎಫ್ಎ ಉತ್ಸವದಲ್ಲಿ (IIFA Utsavam 2016) ನಮ್ಮ ಕನ್ನಡದ ಹೊಸಬರ ಕೋಲ್ಮಿಂಚು 'ರಂಗಿತರಂಗ' ಸಿನಿಮಾ ಭರ್ಜರಿ ಆರು ಪ್ರಶಸ್ತಿಗಳನ್ನು ಬಾಚಿಕೊಂಡು ಹೊಸ ಅಲೆಯನ್ನು ಸೃಷ್ಟಿಸಿದೆ.

ಉತ್ತಮ ಚಿತ್ರ, ಉತ್ತಮ ನಿರ್ದೇಶನ, ಉತ್ತಮ ಸಂಗೀತ ಮತ್ತು ಸಾಹಿತ್ಯ, ಉತ್ತಮ ಪೋಷಕ ನಟ, ಉತ್ತಮ ಖಳನಟ, ಹಾಗೂ ತಾಂತ್ರಿಕ ವಿಭಾಗ ಸೇರಿದಂತೆ ಸುಮಾರು 6 ಪ್ರಶಸ್ತಿಗಳು ನಮ್ಮ 'ರಂಗಿತರಂಗ' ತಂಡದ ಮಡಿಲು ಸೇರಿದೆ.

ಇನ್ನು ಈ ವರ್ಷದ ಹಿಟ್ ಸಿನಿಮಾ 'ರಂಗಿತರಂಗ' ಮಾತ್ರವಲ್ಲದೇ, ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಕಂಡ ನಿರ್ದೇಶಕ ಸಂತೋಷ್ ಆನಂದ್ ಆಕ್ಷನ್-ಕಟ್ ಹೇಳಿದ್ದ 'ಮಿ.ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಕೂಡ ಉತ್ತಮ ನಟ-ನಟಿ ಹಾಗೂ ಉತ್ತಮ ಹಾಸ್ಯ ನಟ ಪ್ರಶಸ್ತಿ ಸೇರಿದಂತೆ ಉತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಯಾರು ಯಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ಮತ್ತು ಐಐಎಫ್ಎ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಮ್ಮ ಚಂದನವನದ ತಾರೆಯರ ಸೊಬಗು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಉತ್ತಮ ಚಿತ್ರ 'ರಂಗಿತರಂಗ'

ಸ್ಯಾಂಡಲ್ ವುಡ್ ಗೆ ಹೊಸ ಎಂಟ್ರಿ ಪಡೆದುಕೊಂಡ ನಿರ್ದೇಶಕ ಅನುಪ್ ಭಂಡಾರಿ ಅವರು ಆಕ್ಷನ್-ಕಟ್ ಹೇಳಿದ್ದ 'ರಂಗಿತರಂಗ' ಸಿನಿಮಾ 'ಐಐಎಫ್ಎ ಉತ್ಸವ 2016' ರ ಸಮಾರಂಭದಲ್ಲಿ ಉತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಉತ್ತಮ ನಿರ್ದೇಶನ

ಉತ್ತಮ ನಿರ್ದೇಶಕ ಎಂಬ ಹೆಗ್ಗಳಿಕೆಗೆ ನವ ನಿರ್ದೇಶಕ ಅನುಪ್ ಭಂಡಾರಿ ಅವರು ಪಾತ್ರರಾಗಿದ್ದು, 'ರಂಗಿತರಂಗ' ಎಂಬ ಕೋಲ್ಮಿಂಚನ್ನು ನಿರ್ದೇಶಕ ಅನುಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದರು.

ಉತ್ತಮ ಸಾಹಿತ್ಯ ಮತ್ತು ಸಂಗೀತ

ಇನ್ನು ಸಿನಿಮಾ ಮತ್ತು ನಿರ್ದೇಶನ ಮಾತ್ರವಲ್ಲದೇ, 'ರಂಗಿತರಂಗ' ಚಿತ್ರಕ್ಕೆ ಉತ್ತಮ ಸಂಗೀತ ಮತ್ತು ಸಾಹಿತ್ಯ ಎಂಬ ಪ್ರಶಸ್ತಿಯೂ ಲಭಿಸಿದ್ದು, ಅದನ್ನೂ ನಿರ್ದೇಶಕ ಅನುಪ್ ಭಂಡಾರಿ ಅವರು ಬಾಚಿಕೊಂಡಿದ್ದಾರೆ.

ಉತ್ತಮ ಪೋಷಕ ನಟ

'ರಂಗಿತರಂಗ' ದಲ್ಲಿ ಉತ್ತಮ ನಟನೆ ಮಾಡಿ ಪ್ರೇಕ್ಷಕರ ಮನಗೆದ್ದಿರುವ ಸ್ಯಾಂಡಲ್ ವುಡ್ ನ ಖ್ಯಾತ ನಟ ಸಾಯಿ ಕುಮಾರ್ 'ರಂಗಿತರಂಗ' ಸಿನಿಮಾದಲ್ಲಿನ ನಟನೆಗಾಗಿ ಉತ್ತಮ ಪೋಷಕ ನಟ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಉತ್ತಮ ಖಳನಟ

'ರಂಗಿತರಂಗ' ಸಿನಿಮಾದಲ್ಲಿ ನೀಡಿದ ಅದ್ಭುತ ನಟನೆಗಾಗಿ ನಟ ಅರವಿಂದ್ ರಾವ್ ಅವರಿಗೆ ಉತ್ತಮ ಖಳ ನಟ ಎಂಬ ಪ್ರಶಸ್ತಿ ದೊರೆತಿದೆ. ಇದರೊಂದಿಗೆ ತಾಂತ್ರಿಕ ವಿಭಾಗದಲ್ಲಿ ಎರಡು ಪ್ರಶಸ್ತಿಗಳು 'ರಂಗಿತರಂಗ' ಸಿನಿಮಾ ಪಾಲಾಗಿದೆ.

ಯಶ್ ಉತ್ತಮ ನಟ

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರಿಗೆ 'ಮಿ.ಅಂಡ್.ಮಿಸಸ್ ರಾಮಾಚಾರಿ' ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ ಉತ್ತಮ ನಟ ಎಂಬ ಪ್ರಶಸ್ತಿ ಲಭಿಸಿದೆ.

ಉತ್ತಮ ನಟಿ ರಾಧಿಕಾ ಪಂಡಿತ್

'ಮಿ.ಅಂಡ್.ಮಿಸಸ್ ರಾಮಾಚಾರಿ' ಚಿತ್ರದ ಅದ್ಭುತ ನಟನೆಗೆ ಸ್ಯಾಂಡಲ್ ವುಡ್ ನ ಪ್ರಿನ್ಸಸ್ ನಟಿ ರಾಧಿಕಾ ಪಂಡಿತ್ ಅವರು ಉತ್ತಮ ನಟಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸಾಧು ಮಹರಾಜ್ ಉತ್ತಮ ಹಾಸ್ಯ ನಟ

ಸ್ಯಾಂಡಲ್ ವುಡ್ ನ ಖ್ಯಾತ ಕಾಮಿಡಿ ನಟ ಸಾಧುಕೋಕಿಲ ಅವರಿಗೆ 'ಮಿ.ಅಂಡ್.ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಕಾಮಿಡಿ ನಟನಾಗಿ ನಟಿಸಿದ್ದಕ್ಕಾಗಿ ಉತ್ತಮ ಹಾಸ್ಯ ನಟ ಪ್ರಶಸ್ತಿ ಲಭಿಸಿದೆ.

ಶ್ರೇಯಾ ಘೋಷಾಲ್ ಉತ್ತಮ ಹಿನ್ನಲೆ ಗಾಯಕಿ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್-ಕಟ್ ಹೇಳಿದ್ದ 'ಮಿ.ಅಂಡ್.ಮಿಸಸ್ ರಾಮಾಚಾರಿ' ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದ ಶ್ರೇಯಾ ಘೋಷಾಲ್ ಅವರಿಗೆ ಉತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಲಭಿಸಿದೆ.

ತಮಿಳು ನಟ ದನುಷ್

ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಸಿನಿಮಾದ 'ನೋ ಪ್ರಾಬ್ಲಂ' ಹಾಡಿಗೆ ತಮಿಳು ನಟ ದನುಷ್ ಅವರಿಗೆ ಉತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಲಭಿಸಿದೆ.

ಐಐಎಫ್ಎ ದಲ್ಲಿ ಶಿವಣ್ಣ ಪೋಸ್

ಹೈದ್ರಾಬಾದ್ ನಲ್ಲಿ ನಡೆದ ಐಐಎಫ್ಎ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಜೊತೆ ಹೋಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಭಂಡಾರಿ ಬ್ರದರ್ಸ್

ತಮ್ಮ ಚೊಚ್ಚಲ ಪ್ರಯತ್ನಕ್ಕೆ ಭರ್ಜರಿ ಆರು ಪ್ರಶಸ್ತಿಗಳನ್ನು ಬಾಚಿಕೊಂಡ ಖುಷಿಯಲ್ಲಿ ತೇಲಾಡುತ್ತಿರುವ ಭಂಡಾರಿ ಬ್ರದರ್ಸ್.

ಗುಂಪಿನಲ್ಲಿ ಸೆಂಚುರಿ ಸ್ಟಾರ್

ದಕ್ಷಿಣ ಭಾರತದ ಸಿನಿ ಕ್ಷೇತ್ರ ತುಂಬಾ ದೊಡ್ಡದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಶಿವಣ್ಣ ಅವರು ಕಾರ್ಯಕ್ರಮದಲ್ಲಿ ನೃತ್ಯಗಾರರ ನಡುವೆ ಫೊಟೋ ಗೆ ಪೋಸ್ ಕೊಟ್ಟಿದ್ದು ಹೀಗೆ.

English summary
The first edition of the IIFA Utsavam kicked off with a big bang in Hyderabad at the Gachibowli stadium on Sunday, January 24. Anup Bhandari directorial Kannada Movie 'Rangitaranga' win laurels at IIFA Utsavam.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more