»   » ಚಿತ್ರಗಳು ; ಐತಿಹಾಸಿಕ ಲೇಪಾಕ್ಷಿ ದೇವಸ್ಥಾನದಲ್ಲಿ ನಟ ಅಂಬರೀಶ್

ಚಿತ್ರಗಳು ; ಐತಿಹಾಸಿಕ ಲೇಪಾಕ್ಷಿ ದೇವಸ್ಥಾನದಲ್ಲಿ ನಟ ಅಂಬರೀಶ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ರಾಜಕೀಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಸಖತ್ ಬಿಜಿ. ಅದರಲ್ಲೂ ಈಗ ಅಧಿವೇಶನ ಸಮಯ. ವಸತಿ ಸಚಿವ ಆಗಿ ವಿಧಾನಮಂಡಲ ಅಧಿವೇಶನದಲ್ಲಿ ಅಂಬರೀಶ್ ಪಾಲ್ಗೊಳ್ಳಲೇಬೇಕು.

ಇದೇ ಗ್ಯಾಪ್ ನಲ್ಲಿ ಶೂಟಿಂಗ್ ಇದ್ದುಬಿಟ್ಟರಂತೂ ಅಂಬಿಗೆ ಪುರುಸೊತ್ತೇ ಇರಲ್ಲ. ಹೀಗಿರುವಾಗಲೇ ನಟ ಅಂಬರೀಶ್ ಕೊಂಚ ಬ್ರೇಕ್ ತೆಗೆದುಕೊಂಡು ಇತ್ತೀಚೆಗಷ್ಟೇ ಲೇಪಾಕ್ಷಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು.

ಇದ್ದಕ್ಕಿದ್ದಂತೆ ಐತಿಹಾಸಿಕ ಲೇಪಾಕ್ಷಿ ದೇವಾಲಯದಲ್ಲಿ ನಟ ಅಂಬರೀಶ್ ವಿಸಿಟ್ ಹಾಕಲು ಕಾರಣ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ. [ಶಿವಣ್ಣನ ಮನೆಗೆ ತೆಲುಗು ನಟ ಬಾಲಕೃಷ್ಣ ಬಂದಿದ್ದೇಕೆ]

ಅರೇ, ನಂದಮೂರಿ ಬಾಲಕೃಷ್ಣಗೂ ನಟ ಅಂಬರೀಶ್ ಗೂ, ಲೇಪಾಕ್ಷಿ ದೇವಾಲಯಕ್ಕೂ ಏನು ಸಂಬಂಧ ಅಂತೀರಾ? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ...ನಿಮಗೆ ಗೊತ್ತಾಗುತ್ತೆ...

ಲೇಪಾಕ್ಷಿ ದೇವಾಲಯದಲ್ಲಿ ನಟ ಅಂಬರೀಶ್

ಬರೋಬ್ಬರಿ 500 ವರ್ಷಗಳ ಇತಿಹಾಸ ಇರುವ ಲೇಪಾಕ್ಷಿ ದೇವಾಲಯದಲ್ಲಿ ನಟ ಅಂಬರೀಶ್ ರನ್ನ ನೀವು ಚಿತ್ರದಲ್ಲಿ ಕಾಣಬಹುದು.

ಟಾಲಿವುಡ್ ನಟ ಮೋಹನ್ ಬಾಬು

ಟಾಲಿವುಡ್ ನ ಖ್ಯಾತ ನಟ ಮೋಹನ್ ಬಾಬು ಕೂಡ ಲೇಪಾಕ್ಷಿ ದೇವಾಲಯಕ್ಕೆ ಅಂಬರೀಶ್ ಜೊತೆ ಭೇಟಿ ನೀಡಿದ್ದರು.

ಲೇಪಾಕ್ಷಿ ಉತ್ಸವದಲ್ಲಿ ಭಾಗಿಯಾಗಿದ್ದರು!

ಅಂದ್ಹಾಗೆ, ಅಂಬರೀಶ್ ಹಾಗೂ ಮೋಹನ್ ಬಾಬು ಲೇಪಾಕ್ಷಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದು 'ಲೇಪಾಕ್ಷಿ ಉತ್ಸವ'ದ ಪ್ರಯುಕ್ತ.

ಲೇಪಾಕ್ಷಿ ಉತ್ಸವ ಯಾವಾಗ?

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯಲ್ಲಿ ಫೆಬ್ರವರಿ 27 ಹಾಗೂ 28 ರಂದು 'ಲೇಪಾಕ್ಷಿ ಉತ್ಸವ' ನಡೆಯಿತು.

ನಂದಮೂರಿ ಬಾಲಕೃಷ್ಣ ರೂವಾರಿ

ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ಅಂಗವಾಗಿ ಆಂಧ್ರಪ್ರದೇಶ ಸರ್ಕಾರ 'ಲೇಪಾಕ್ಷಿ ಉತ್ಸವ'ವನ್ನು ಹಮ್ಮಿಕೊಂಡಿತ್ತು. ಟಾಲಿವುಡ್ ನಟ ಹಾಗೂ ಹಿಂದುಪುರ ಕ್ಷೇತ್ರದ ಶಾಸಕ ನಂದಮೂರಿ ಬಾಲಕೃಷ್ಣ ರವರೇ 'ಲೇಪಾಕ್ಷಿ ಉತ್ಸವ-2016' ಮುಖ್ಯ ಆಯೋಜಕರು. ಈ ಉತ್ಸವ ಯಶಸ್ವಿಯಾಗಬೇಕೆಂದು ಬಾಲಯ್ಯ ಕನ್ನಡ ನಟರಾದ ಅಂಬರೀಶ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಆಹ್ವಾನ ನೀಡಿದ್ದರು.

ಶಿವಣ್ಣನ ಮನೆಗೆ ಭೇಟಿ ಕೊಟ್ಟಿದ್ದ ಬಾಲಯ್ಯ!

'ಲೇಪಾಕ್ಷಿ ಉತ್ಸವ'ದಲ್ಲಿ ಪಾಲ್ಗೊಳ್ಳುವಂತೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟು ಖುದ್ದು ಆಹ್ವಾನ ನೀಡಿದ್ದರು ಬಾಲಕೃಷ್ಣ.

ಅಂಬರೀಶ್ ಗೂ ಅತ್ಯಾಪ್ತ

ಶಿವರಾಜ್ ಕುಮಾರ್ ಮಾತ್ರ ಅಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಗೂ ನಂದಮೂರಿ ಬಾಲಕೃಷ್ಣ ಅತ್ಯಾಪ್ತರು. ಹೀಗಾಗಿ 'ಲೇಪಾಕ್ಷಿ ಉತ್ಸವ'ದಲ್ಲಿ ಅಂಬರೀಶ್ ಕುಟುಂಬ ಕೂಡ ಭಾಗವಹಿಸಿತ್ತು.

ಲೇಪಾಕ್ಷಿ ದೇವಾಲಯದ ಕುರಿತು....

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಂಡಲ್ ಎಂಬ ಹಳ್ಳಿಯಲ್ಲಿ ಲೇಪಾಕ್ಷಿ ದೇವಾಲಯ ಇದೆ. ಬೆಂಗಳೂರಿನಿಂದ ಸರಿಯಾಗಿ 120 ಕಿ.ಮಿ ದೂರ. ಶಿವ, ವಿಷ್ಣು ಹಾಗೂ ವೀರಭದ್ರ ದೇವಾಲಯ ಇರುವ ಲೇಪಾಕ್ಷಿಯಲ್ಲಿ ಬೃಹತ್ ನಂದಿ ವಿಗ್ರಹ ಪ್ರಮುಖ ಆಕರ್ಷಣೆ. ವಿಜಯನಗರದ ಅರಸರು ನಿರ್ಮಿಸಿರುವ ದೇವಾಲಯ ಇದು.

English summary
Kannada Actor Ambareesh and Tollywood Actor Mohan Babu visited Lepakshi Temple before attending the Grand 'Lepakshi Utsav-2016' organized by Tollywood Actor cum Hindupur MLA Nandamuri Balakrishna. Check out the Pictures here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada