»   » ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಮದುವೆ ಫೋಟೋ ಆಲ್ಬಂ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಮದುವೆ ಫೋಟೋ ಆಲ್ಬಂ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸ್ಯಾಂಡಲ್ ವುಡ್ ನ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಹುಡುಗ ಪ್ರಜ್ವಲ್ ದೇವರಾಜ್ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. 9ನೇ ಕ್ಲಾಸ್ ನಿಂದಲೂ ಆತ್ಮೀಯ ಗೆಳತಿಯಾಗಿರುವ ಮಾಡೆಲ್ ಕಮ್ ಡ್ಯಾನ್ಸರ್ ರಾಗಿಣಿ ಚಂದ್ರನ್ ರವರ ಕೈಹಿಡಿದಿದ್ದಾರೆ ಪ್ರಜ್ವಲ್ ದೇವರಾಜ್.

  ಇಂದು ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಇದ್ದ ಶುಭ ಧನುರ್ ಲಗ್ನದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಹಸೆ ಮಣೆ ಏರಿದರು. 11.05 ರ ಸುಮಾರಿಗೆ ರಾಗಿಣಿ ಚಂದ್ರನ್ ರವರ ಕುತ್ತಿಗೆಗೆ ಪ್ರಜ್ವಲ್ ದೇವರಾಜ್ ಮಾಂಗಲ್ಯಧಾರಣೆ ಮಾಡಿದರು. ಆ ಮೂಲಕ ಇಬ್ಬರ ಸುದೀರ್ಘ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. [ನವ ಬಾಳಿಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್-ರಾಗಿಣಿ]

  ಇಂದಲೋಕವೇ ಧರೆಗಿಳಿದಷ್ಟು ಅದ್ದೂರಿಯಾಗಿ ಡೈನಾಮಿಕ್ ಸ್ಟಾರ್ ದೇವರಾಜ್ ರವರ ಪುತ್ರ ಪ್ರಜ್ವಲ್ ದೇವರಾಜ್ ಹಾಗು ಚಂದ್ರನ್ ಬಾಲು ರವರ ಜ್ಯೇಷ್ಠ ಪುತ್ರಿ ರಾಗಿಣಿ ಚಂದ್ರನ್ ರವರ ವಿವಾಹ ಬೆಂಗಳೂರಿನ ಅರಮನೆ ಮೈದಾನದ 'ದಿ ಗ್ರ್ಯಾಂಡ್ ಕೆಸಲ್'ನಲ್ಲಿ ನೆರವೇರಿದೆ.

  ಪ್ರಜ್ವಲ್ ದೇವರಾಜ್ ಮದುವೆ ಸಂಭ್ರಮದ ಚಿತ್ರಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  ಹೊಸ ಬಾಳಿಗೆ ಕಾಲಿಟ್ಟ ನವ ಜೋಡಿ

  ಅಯ್ಯರ್ ಕುಟುಂಬದ ಹುಡುಗಿ ರಾಗಿಣಿ ಚಂದ್ರನ್ ಜೊತೆ ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. [ಹ್ಯಾಪಿ ಮ್ಯಾರೀಡ್ ಲೈಫ್ ಪ್ರಜ್ವಲ್ ದೇವರಾಜ್-ರಾಗಿಣಿ]

  ಮೇಡ್ ಫಾರ್ ಈಚ್ ಅದರ್

  ಈ ಫೋಟೋ ನೋಡ್ತಿದ್ರೆ, ನಿಮಗೆ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಮೇಡ್ ಫಾರ್ ಈಚ್ ಅದರ್ ಅನ್ಸುತ್ತೆ ಅಲ್ವಾ? ['ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ]

  ನವಜೋಡಿಗೆ ಶುಭ ಹಾರೈಸಿದ ರಾಘವೇಂದ್ರ ರಾಜ್ ಕುಮಾರ್

  ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ನವ ಜೋಡಿ ಪ್ರಜ್ವಲ್-ರಾಗಿಣಿಗೆ ಶುಭ ಹಾರೈಸಿದರು.

  ತಾಳಿ ಕಟ್ಟುವ ಶುಭ ವೇಳೆ

  ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಇದ್ದ ಶುಭ ಧನುರ್ ಲಗ್ನದಲ್ಲಿ ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್ ರವರಿಗೆ ಮಾಂಗಲ್ಯಧಾರಣೆ ಮಾಡಿದರು. ಅಯ್ಯರ್ ಮತ್ತು ಒಕ್ಕಲಿಗ ಸಂಪ್ರದಾಯದಂತೆ ವಿವಾಹ ಜರುಗಿತು.

  ಕೈಯಲ್ಲಿ ಹೂವಿನ ಮಾಲೆ

  ಮಾಂಗಲ್ಯಧಾರಣೆ ನಂತರ ಮಂತ್ರಪಠಣ ಮಾಡುತ್ತಿರುವ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್.

  ಆಶೀರ್ವಾದ ಮಾಡಿದ ಬ್ರಹ್ಮಾವರ್

  ಪೋಷಕ ಪಾತ್ರಗಳಲ್ಲಿ ಮಿಂಚುವ ಸದಾಶಿವ ಬ್ರಹ್ಮಾವರ ನವ ಜೋಡಿಗೆ ಶುಭ ಹಾರೈಸಿದರು.

  ಹಿರಿಯ ನಟ ಲೋಕನಾಥ್

  ಹಿರಿಯ ನಟ ಲೋಕನಾಥ್ ಕೂಡ ಅರಮನೆ ಮೈದಾನಕ್ಕೆ ಆಗಮಿಸಿ, ವಧು-ವರರಿಗೆ ಆಶೀರ್ವಾದ ಮಾಡಿದರು.

  ಭಾರತಿ ವಿಷ್ಣುವರ್ಧನ್

  ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ ಕೂಡ ಆಗಮಿಸಿ ಪ್ರಜ್ವಲ್-ರಾಗಿಣಿಗೆ ಶುಭ ಕೋರಿದರು.

  ಸಂಭ್ರಮದಲ್ಲಿರುವ ದೇವರಾಜ್ ಕುಟುಂಬ

  ಮಗನ ಮದುವೆಯಲ್ಲಿ ಅಪ್ಪ ದೇವರಾಜ್, ಅಮ್ಮ ಚಂದ್ರ ದೇವರಾಜ್ ಸಂತಸದಲ್ಲಿರುವ ಕ್ಷಣ. [ಚಿತ್ರಗಳು : ಪ್ರಜ್ವಲ್ ದೇವರಾಜ್ ಮದುವೆ ತಯಾರಿ ಸಂಭ್ರಮ]

  ಫ್ಯಾಮಿಲಿ ಫೋಟೋ

  ಚಿತ್ರದಲ್ಲಿ - ಪ್ರಜ್ವಲ್ ದೇವರಾಜ್ ತಂದೆ-ತಾಯಿ ಮತ್ತು ರಾಗಿಣಿ ಚಂದ್ರನ್ ಅಪ್ಪ-ಅಮ್ಮ-ಸಹೋದರಿ. [ಮಗ ಪ್ರಜ್ವಲ್ ಮದುವೆಗೆ ಅಪ್ಪನ 'ಅದ್ದೂರಿ' ಉಡುಗೊರೆ]

  ಇಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

  ಇಂದು ಹಸೆಮಣೆ ಏರಿರುವ ಪ್ರಜ್ವಲ್ ದೇವರಾಜ್, ಮನದನ್ನೆ ರಾಗಿಣಿ ಚಂದ್ರನ್ ರವರನ್ನ ಮೊಟ್ಟ ಮೊದಲ ಬಾರಿಗೆ ನೋಡಿದ್ದು 9ನೇ ಕ್ಲಾಸ್ ನಲ್ಲಿದ್ದಾಗ. ಆಗ ರಾಗಿಣಿ ಚಂದ್ರನ್ 6ನೇ ಕ್ಲಾಸ್ ನಲ್ಲಿದ್ದರು.

  ಡ್ಯಾನ್ಸ್ ಕ್ಲಾಸ್ ನಲ್ಲಿ ಪರಿಚಯ

  ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಕ್ಲಾಸ್ ನಲ್ಲಿ ಫ್ರೀ ಸ್ಟೈಲ್ ನೃತ್ಯ ಕಲಿಯುತ್ತಿರುವಾಗ ಪ್ರಜ್ವಲ್ ದೇವರಾಜ್ ಗೆ ರಾಗಿಣಿ ಚಂದ್ರನ್ ಪರಿಚಯವಾಯ್ತು.

  ಇಬ್ಬರು ಒಳ್ಳೆ ಫ್ರೆಂಡ್ಸ್

  ಅಂದಿನಿಂದಲೇ ರಾಗಿಣಿ ಚಂದ್ರನ್ ಮತ್ತು ಪ್ರಜ್ವಲ್ ದೇವರಾಜ್ ಕ್ಲೋಸ್ ಫ್ರೆಂಡ್ಸ್. ಇಬ್ಬರಿಗೂ ಕಾಮನ್ ಫ್ರೆಂಡ್ಸ್ ಹೆಚ್ಚು. ಒಂದೇ ಫ್ರೆಂಡ್ಸ್ ಗ್ರೂಪ್ ನಲ್ಲಿರುವ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈಗ ದಂಪತಿ ಆಗಿದ್ದಾರೆ.

  ಲವ್ ಶುರುವಾಗಿದ್ದು ಇತ್ತೀಚೆಗೆ

  ವೃತ್ತಿ ಬದುಕಿನಲ್ಲಿ ಏಳಿಗೆ ಸಾಧಿಸಿದ ಬಳಿಕ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಮನಸ್ಸಲ್ಲಿ ಪ್ರೀತಿ ಮೊಳಕೆಯೊಡೆದಿದೆ.

  ಮನೆಯವರ ಸಮ್ಮತಿ ಸಿಕ್ತು

  ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಪ್ರೀತಿಗೆ ಯಾರೂ ವಿಲನ್ ಇಲ್ಲ. ಮನೆಯಲ್ಲಿ ಅವರ ಪ್ರೀತಿಯ ವಿಷ್ಯ ಹೇಳಿದ ತಕ್ಷಣ ಎಲ್ಲರೂ ಪ್ರೀತಿಯಿಂದ ಒಪ್ಪಿಕೊಂಡು ಇಂದು ಅದ್ದೂರಿಯಾಗಿ ಮದುವೆ ಮಾಡಿದ್ದಾರೆ.

  ರಾಗಿಣಿ ಚಂದ್ರನ್ ಯಾರು?

  ರಾಗಿಣಿ ಚಂದ್ರನ್ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ನೃತ್ಯ ಅಂದ್ರೆ ರಾಗಿಣಿ ಚಂದ್ರನ್ ಗೆ ಅಚ್ಚುಮೆಚ್ಚು. ನಾಲ್ಕು ವರ್ಷದ ಪುಟ್ಟ ಬಾಲಕಿಯಾಗಿರುವಾಗಲೇ ಭರತನಾಟ್ಯ ಕಲಿಯುವುದಕ್ಕೆ ರಾಗಿಣಿ ಚಂದ್ರನ್ ಆರಂಭಿಸಿದರು. [ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

  ನೃತ್ಯ ಅಂದ್ರೆ ರಾಗಿಣಿಗೆ ಪಂಚಪ್ರಾಣ

  ಖ್ಯಾತ ನೃತ್ಯಗಾರ್ತಿ ಶ್ರೀಮತಿ.ನಿರುಪಮ ರಾಜೇಂದ್ರ ಮತ್ತು ಶ್ರೀ.ರಾಜೇಂದ್ರ ರವರ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ರಾಗಿಣಿ ಚಂದ್ರನ್ ಕಥಕ್ ಡ್ಯಾನ್ಸರ್ ಆಗಿದ್ದಾರೆ. ವಿಶ್ವಾದ್ಯಂತ ಕಥಕ್ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ.

  ಮಾಡೆಲಿಂಗ್ ಲೋಕದಲ್ಲಿ ರಾಗಿಣಿ ಚಂದ್ರನ್

  ಕಳೆದ ಕೆಲ ವರ್ಷಗಳ ಹಿಂದಷ್ಟೆ ಮಾಡೆಲಿಂಗ್ ಲೋಕಕ್ಕೆ ಅಡಿಯಿಟ್ಟ ರಾಗಿಣಿ ಚಂದ್ರನ್ Khazana Jewellers, GRT Jewellers, 3M Nexcare, Colortree, Lulu International Mall ಗಾಗಿ ಟಿವಿ ಜಾಹೀರಾತು ಮತ್ತು ಪ್ರಿಂಟ್ ಆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಪ್ರಜ್ವಲ್ ಜೊತೆ ಡ್ಯಾನ್ಸ್ ಸ್ಟುಡಿಯೋ ನಡೆಸುತ್ತಾರೆ

  ಪ್ರಜ್ವಲ್ ದೇವರಾಜ್ ಜೊತೆ ಸೇರಿ ಯು-ರಿಧಮಿಕ್ಸ್ ಅನ್ನುವ ಡ್ಯಾನ್ಸ್ ಮತ್ತು ಫಿಟ್ನೆಸ್ ಸ್ಟುಡಿಯೋ ಕೂಡ ಶುರುಮಾಡಿದ್ದಾರೆ ರಾಗಿಣಿ ಚಂದ್ರನ್.

  ಹೀರೋಯಿನ್ ಆಗೋಕೆ ರೆಡಿ

  ಮಾಡೆಲಿಂಗ್ ನಿಂದ ಸ್ಯಾಂಡಲ್ ವುಡ್ ಗೂ ಕಾಲಿಡುವುದಕ್ಕೆ ರಾಗಿಣಿ ಚಂದ್ರನ್ ರೆಡಿಯಿದ್ದಾರೆ.

  ರಾಗಿಣಿ ಜೊತೆ ಒಂದ್ ಸಿನಿಮಾ?

  ರಾಗಿಣಿ ಚಂದ್ರನ್ ಜೊತೆ ಒಂದು ಸಿನಿಮಾ ಮಾಡುವ ಹಂಬಲ ಪ್ರಜ್ವಲ್ ದೇವರಾಜ್ ಗೆ ಇದೆ. ಇದು ಯಾವಾಗ ಈಡೇರುತ್ತದೋ..? ನೋಡೋಣ.

  ನವ ಜೋಡಿಗೆ ವಿಶ್ ಮಾಡಿ....

  ಈಗಷ್ಟೆ ಹೊಸ ಬದುಕಿಗೆ ಕಾಲಿಟ್ಟಿರುವ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಗೆ ನೀವೂ ವಿಶ್ ಮಾಡಿ...ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಶುಭಾಶಯಗಳನ್ನ ತಿಳಿಸಿ....

  English summary
  Kannada Actor Prajwal Devaraj has tied knot with his long-time girlfriend Ragini Chandran today (October 25th) in Palace Grounds, Bengaluru. Check out the wedding album of this cute couple

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more