»   » ಚಿತ್ರಗಳು : ಪ್ರಜ್ವಲ್ ದೇವರಾಜ್ ಮದುವೆ ತಯಾರಿ ಸಂಭ್ರಮ

ಚಿತ್ರಗಳು : ಪ್ರಜ್ವಲ್ ದೇವರಾಜ್ ಮದುವೆ ತಯಾರಿ ಸಂಭ್ರಮ

Posted By:
Subscribe to Filmibeat Kannada

ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೃಹಸ್ಥಾಶ್ರಮಕ್ಕೆ ಕಾಲಿಡುವುದಕ್ಕೆ ಇನ್ನೊಂದೇ ದಿನ ಬಾಕಿ.

ನಾಳೆ (ಅಕ್ಟೋಬರ್ 25) ಬೆಳಗ್ಗೆ 10.30 ರಿಂದ 12 ಗಂಟೆವರೆಗಿನ ಧನುರ್ ಲಗ್ನದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಜ್ವಲ್ ದೇವರಾಜ್, ತಮ್ಮ ದೀರ್ಘಕಾಲದ ಗೆಳತಿ ರಾಗಿಣಿ ಚಂದ್ರನ್ ರವರನ್ನ ಕೈಹಿಡಿಯಲಿದ್ದಾರೆ. [ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

ವಿವಾಹ ಪೂರ್ವ ಶಾಸ್ತ್ರಗಳಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಪ್ರಜ್ವಲ್ ದೇವರಾಜ್ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮಗಳು ನೆರವೇರಿದೆ. ['ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ]

ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ರವರ ವಿವಾಹ ಪೂರ್ವ ಶಾಸ್ತ್ರದ ಚಿತ್ರಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಡೈನಾಮಿಕ್ ಫ್ಯಾಮಿಲಿ

ವಿವಾಹ ಪೂರ್ವ ಶಾಸ್ತ್ರದಲ್ಲಿ ಡೈನಾಮಿಕ್ ಫ್ಯಾಮಿಲಿ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು ಹೀಗೆ. ಮಧುಮಗ ಪ್ರಜ್ವಲ್ ದೇವರಾಜ್ ಜೊತೆ ತಂದೆ ದೇವರಾಜ್, ತಾಯಿ ಚಂದ್ರ ದೇವರಾಜ್, ಕಿರಿಯ ಸಹೋದರ ಪ್ರಣಾಮ್ ದೇವರಾಜ್ ಚಿತ್ರದಲ್ಲಿದ್ದಾರೆ.

ಮಧುಮಗನಿಗೆ ಆರತಿ

ವಿವಾಹ ಪೂರ್ವ ಶಾಸ್ತ್ರದಲ್ಲಿ ಮಧುಮಗ ಪ್ರಜ್ವಲ್ ದೇವರಾಜ್ ಗೆ ಆರತಿ ಬೆಳಗುತ್ತಿರುವ ಮುತ್ತೈದೆಯರು.

ವಿವಾಹ ಪೂರ್ವ ಶಾಸ್ತ್ರ

ಮದುವೆಗೆ ಮುನ್ನ ವಿವಿಧ ಶಾಸ್ತ್ರಗಳಲ್ಲಿ ಭಾಗಿಯಾಗಿರುವ ಪ್ರಜ್ವಲ್ ದೇವರಾಜ್

ಬಳೆ ತೊಡಿಸುವ ಶಾಸ್ತ್ರ

ಬಳೆ ತೊಡಿಸುವ ಶಾಸ್ತ್ರದ ವೇಳೆ ದೇವರಾಜ್ ಮನೆಯಲ್ಲಿ ಹೆಂಗಸರ ಸಂಭ್ರಮ

ಬಳೆ ತೊಟ್ಟು ಖುಷಿ ಪಟ್ಟ ಮಾಳವಿಕಾ

ಬಳೆ ತೊಡಿಸುವ ಶಾಸ್ತ್ರದಲ್ಲಿ ಭಾಗಿಯಾದ ನಟಿ ಮಾಳವಿಕಾ ಅವಿನಾಶ್ ಹಸಿರು ಗಾಜಿನ ಬಳೆ ತೊಟ್ಟು ಸಂಭ್ರಮಿಸಿದರು.

ಮಧುಮಗನೊಂದಿಗೆ ಗೆಳೆಯರ ಬಳಗ

ಮಧುಮಗ ಪ್ರಜ್ವಲ್ ದೇವರಾಜ್ ಜೊತೆ ಅವರ ಗೆಳೆಯರ ಬಳಗ.

ವಧು-ವರರ ಜೊತೆ ಸೆಲ್ಫಿ

ಗೆಳೆಯರಿಗಾಗಿ ಪ್ರಜ್ವಲ್ ದೇವರಾಜ್ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಕಾಕ್ ಟೇಲ್ ಪಾರ್ಟಿ ಆಯೋಜಿಸಿದ್ದರು. ಅಲ್ಲಿ ವಧು-ವರರೊಂದಿಗೆ ಗೆಳೆಯರ ಬಳಗ ಕ್ಲಿಕ್ಕಿಸಿದ ಸೆಲ್ಫಿ ಇದು.

ವರನಿಗೆ ವಿಶ್ ಮಾಡಿದ ಅವಿನಾಶ್

ಪ್ರಜ್ವಲ್ ದೇವರಾಜ್ ಫ್ಯಾಮಿಲಿಯೊಂದಿಗೆ ನಟ ಅವಿನಾಶ್

ಪಾರ್ಟಿಯಲ್ಲಿ ಮಾಳವಿಕಾ ಅವಿನಾಶ್

ಮದುವೆಗೂ ಮುನ್ನ ಆಯೋಜಿಸಿದ್ದ ಪಾರ್ಟಿಯಲ್ಲಿ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಜೊತೆ ಮಾಳವಿಕಾ-ಅವಿನಾಶ್

English summary
Kannada Actor Prajwal Devaraj is getting married to his long-time girlfriend Ragini Chandran tomorrow (October 25th) in Palace Grounds, Bengaluru. Check out the pictures of Prajwal Devaraj's pre wedding rituals.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada