Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಶ್-ರಾಧಿಕಾ ಪಂಡಿತ್ ಮದುವೆಯ ಆಕರ್ಷಕ ಫೋಟೋ ಆಲ್ಬಂ
ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದ ರಾಕಿಂಗ್ ಸ್ಟಾರ್ ಯಶ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಆತ್ಮೀಯ ಗೆಳತಿ ನಟಿ ರಾಧಿಕಾ ಪಂಡಿತ್ ಜೊತೆ ಯಶ್ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ.
ನಿನ್ನೆ (ಡಿಸೆಂಬರ್ 9) ಮಧ್ಯಾಹ್ನ 11.30 ರಿಂದ 12.30 ರವರೆಗೆ ಇದ್ದ ಶುಭ ಅಭಿಜಿತ್ ಲಗ್ನದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದರು. 12.30 ರ ಸುಮಾರಿಗೆ ರಾಧಿಕಾ ಪಂಡಿತ್ ರವರ ಕೊರಳಿಗೆ ಯಶ್ ಮಾಂಗಲ್ಯ ಧಾರಣೆ ಮಾಡಿದರು. ಆ ಮೂಲಕ ಇಬ್ಬರ ಸುದೀರ್ಘ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಯ್ತು.[ಹ್ಯಾಪಿ ಮ್ಯಾರೀಡ್ ಲೈಫ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್]
ಯಶ್-ರಾಧಿಕಾ ಪಂಡಿತ್ ರವರ ಮದುವೆ ಸಂಭ್ರಮದ ಚಿತ್ರಗಳು ಇಲ್ಲಿವೆ. ನೋಡಿ, ಕಣ್ತುಂಬಿಕೊಳ್ಳಿ....

ಹೊಸ ಬಾಳಿಗೆ ಕಾಲಿಟ್ಟ ಸ್ಟಾರ್ ಜೋಡಿ
ಕೊಂಕಣಿ ಕುಟುಂಬದ ಹುಡುಗಿ ರಾಧಿಕಾ ಪಂಡಿತ್ ಜೊತೆ ಒಕ್ಕಲಿಗ ಕುಟುಂಬದ ಹುಡುಗ ಯಶ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.['ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್]

ಮೇಡ್ ಫಾರ್ ಈಚ್ ಅದರ್
ಈ ಫೋಟೋ ನೋಡ್ತಿದ್ರೆ, ನಿಮಗೆ ಯಶ್ ಮತ್ತು ರಾಧಿಕಾ ಪಂಡಿತ್ ಮೇಡ್ ಫಾರ್ ಈಚ್ ಅದರ್ ಅನ್ಸುತ್ತೆ ಅಲ್ವಾ?

ಸಂಪ್ರದಾಯ ಬದ್ಧವಾಗಿ ನಡೆದ ಮದುವೆ
ಶಾಸ್ತ್ರ-ಸಂಪ್ರದಾಯ ಬದ್ಧವಾಗಿ ಯಶ್-ರಾಧಿಕಾ ಪಂಡಿತ್ ಮದುವೆ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ತಾಜ್ ವೆಸ್ಟ್ ಎಂಡ್ ನಲ್ಲಿ ನಡೆಯಿತು.

ದೇವಸ್ಥಾನದ ಮದುವೆ ಮಂಟಪದಲ್ಲಿ ಧಾರೆ
ರಾಧಿಕಾ ಪಂಡಿತ್ ಹಾಗೂ ಯಶ್ ರವರ ವಿವಾಹಕ್ಕೋಸ್ಕರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ರವರಿಗೆ ಯಶ್ ತಾಳಿ ಕಟ್ಟಿದರು. [ಎಕ್ಸ್ ಕ್ಲೂಸಿವ್: ತಾಜ್ ವೆಸ್ಟ್ಎಂಡ್ ನಲ್ಲಿ ಯಶ್-ರಾಧಿಕಾ 'ಧಾರೆ'ಗೆ ಶಿವಾಲಯ ನಿರ್ಮಾಣ]

ಶಿವ-ಪಾರ್ವತಿ ಸಮ್ಮುಖದಲ್ಲಿ ಮದುವೆ
ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಲ್ಲಿ ಶಿವ-ಪಾರ್ವತಿ, ನಂದಿ ಹಾಗೂ ಗಣಪತಿ ಮೂರ್ತಿ ಸಮ್ಮುಖದಲ್ಲಿ ಯಶ್-ರಾಧಿಕಾ ಪಂಡಿತ್ ವಿವಾಹವಾದರು. ['ಯಶ್-ರಾಧಿಕಾ' ಮೆಹಂದಿ ಶಾಸ್ತ್ರದ ಕಂಪ್ಲೀಟ್ ವಿಶೇಷತೆಗಳು!]

ಮಿರಿ ಮಿರಿ ಮಿಂಚಿದ ರಾಧಿಕಾ ಪಂಡಿತ್
ಗೋಲ್ಡನ್ ಹಾಗೂ ಕೆಂಪು ಬಣ್ಣ ಮಿಶ್ರಿತ ಸೀರೆಯನ್ನು ತೊಟ್ಟು ವಧು ರಾಧಿಕಾ ಪಂಡಿತ್ ಮಿರಿ ಮಿರಿ ಮಿಂಚಿದರು. [ಎಕ್ಸ್ ಕ್ಲೂಸಿವ್ : ನವ ವಧು ರಾಧಿಕಾ ಪಂಡಿತ್ ಗೌರಿ ಪೂಜೆ ವಿಡಿಯೋ]

ವರ ಯಶ್ ಮೊಗದಲ್ಲಿ ಮಂದಹಾಸ
ಹಸಿರು, ಕ್ರೀಮ್ ಮತ್ತು ಗೋಲ್ಡನ್ ಬಣ್ಣ ಮಿಶ್ರಿತ ರೇಶ್ಮೆ ಶಲ್ಯ, ಮೈಸೂರು ಪೇಟ ತೊಟ್ಟಿದ್ದರು ವರ ಯಶ್.

ತಾಳಿ ಕಟ್ಟುವ ಶುಭ ವೇಳೆ
''ಮಾಂಗಲ್ಯಂ ತಂತು ನಾನೇನ..'' ಎನ್ನುತ್ತಾ ಶುಭ ಅಭಿಜಿತ್ ಲಗ್ನದಲ್ಲಿ ರಾಧಿಕಾ ಪಂಡಿತ್ ಕೊರಳಿಗೆ ನಟ ಯಶ್ ಮಾಂಗಲ್ಯಧಾರಣೆ ಮಾಡಿದರು.

ಇಂದು ಅದ್ಧೂರಿ ರಿಸೆಪ್ಷನ್ ಇದೆ
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆಯಲಿದೆ.

ಹೊಸ ಜೋಡಿಗೆ ವಿಶ್ ಮಾಡಿ
ಈಗಷ್ಟೇ ಹೊಸ ಬದುಕಿಗೆ ಕಾಲಿಟ್ಟಿರುವ ಯಶ್-ರಾಧಿಕಾ ಪಂಡಿತ್ ಗೆ ನೀವೂ ವಿಶ್ ಮಾಡಿ. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ಶುಭಾಶಯಗಳನ್ನು ತಿಳಿಸಿ....