»   » 'ಚಕ್ರವರ್ತಿ' ದರ್ಶನ್ ದರ್ಬಾರ್ ನಲ್ಲಿ ಸಹೋದರ ದಿನಕರ್ ವಿಲನ್ ಗಿರಿ

'ಚಕ್ರವರ್ತಿ' ದರ್ಶನ್ ದರ್ಬಾರ್ ನಲ್ಲಿ ಸಹೋದರ ದಿನಕರ್ ವಿಲನ್ ಗಿರಿ

Posted By:
Subscribe to Filmibeat Kannada

ಇಷ್ಟು ದಿನಗಳ ಕಾಲ ನಿರ್ದೇಶಕರಾಗಿ-ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದ ದಿನಕರ್ ತೂಗುದೀಪ ಅವರು ಇದೇ ಮೊದಲ ಬಾರಿಗೆ ಖಳನಾಯಕನಾಗಿ ಕಾಣಿಸಿಕೊಂಡು ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದೀಪಾ ಸನ್ನಿಧಿ ಮತ್ತೊಮ್ಮೆ ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಚಕ್ರವರ್ತಿ' ಎಂಬ ಚಿತ್ರದಲ್ಲಿ ದಿನಕರ್ ಅವರು ತಮ್ಮ ಸಹೋದರ ದರ್ಶನ್ ಅವರಿಗೆ ಸವಾಲ್ ಹಾಕಲು ಸಜ್ಜಾಗುತ್ತಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಹೋದರ ದಿನಕರ್ ಸವಾಲ್!]


ಇದೀಗ ಸದ್ಯಕ್ಕೆ ಹೈದರಾಬಾದ್ ನಲ್ಲಿ ಶೂಟಿಂಗ್ ಗಾಗಿ ಬೀಡು ಬಿಟ್ಟಿರುವ 'ಚಕ್ರವರ್ತಿ' ಚಿತ್ರತಂಡ ಕೆಲವು ಶೂಟಿಂಗ್ ಸ್ಟಿಲ್ಸ್ ಗಳನ್ನು ಬಿಡುಗಡೆ ಮಾಡಿವೆ. ವಿಶೇಷವಾಗಿ ದರ್ಶನ್ ಮತ್ತು ಸೃಜನ್ ಲೋಕೇಶ್ ಅವರ ರೆಟ್ರೋ ಲುಕ್ ಸಖತ್ ಸ್ಟೈಲಿಷ್ ಆಗಿ ಕಾಣುತ್ತಿದೆ.[ಇಲ್ಲ್ ಕೇಳಿ, 'ಇದು' ದರ್ಶನ್ ಅವರ ಆಜ್ಞೆ ಯಾರೂ ಮೀರಬೇಡಿ]


ಅದರಲ್ಲೂ ದಿನಕರ್ ತೂಗುದೀಪ್ ಅವರು ಖಳನಾಯಕನಾಗಿ ಜಬರ್ದಸ್ತ್ ಆಗಿ ತಮ್ಮ ಖದರ್ ತೋರಿದ್ದಾರೆ. ನಿರ್ದೇಶಕ ಚಿಂತನ್ ಆಕ್ಷನ್-ಕಟ್ ಹೇಳಿರುವ 'ಚಕ್ರವರ್ತಿ' ಚಿತ್ರದ ಶೂಟಿಂಗ್ ಸ್ಟಿಲ್ಸ್ ಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....


ತಂದೆಯನ್ನು ನೆನಪಿಗೆ ತಂದುಕೊಂಡ ದಿನಕರ್

ಈ ಚಿತ್ರದಲ್ಲಿ ಖಳನಟನ ಪಾತ್ರದ ಚಿತ್ರೀಕರಣದ ಸಂದರ್ಭದಲ್ಲಿ ದಿನಕರ್ ತೂಗುದೀಪ್ ಅವರು ತಮ್ಮ ತಂದೆ ತೂಗುದೀಪ್ ಶ್ರೀನಿವಾಸ್ ಮತ್ತು ಖಳನಟ ವಜ್ರಮುನಿ ಅವರನ್ನು ನೆನಪಿಗೆ ತಂದುಕೊಂಡಂರಂತೆ.['ಚಕ್ರವರ್ತಿ' ಜೀವನದಲ್ಲಿ ಶಾಂತಿಯ 'ದರ್ಶನ']


ನಕಲು ಮಾಡುವ ಅಗತ್ಯ ಇಲ್ಲ

ತಂದೆಯ ನಟನಾ ಶೈಲಿಯನ್ನು ನಕಲು ಮಾಡುವ ಅವಶ್ಯಕತೆ ಇಲ್ಲ. ಅದು ನನ್ನ ರಕ್ತದಲ್ಲೇ ಇದೆ. ಅವರ ಆಶೀರ್ವಾದ ನನಗೆ ಇಂದಿಗೂ ದೊಡ್ಡ ವರ ಎನ್ನುತ್ತಾರೆ ದಿನಕರ್ ತೂಗುದೀಪ್.


'ಚಕ್ರವರ್ತಿ' ತಂಡ

ಶೂಟಿಂಗ್ ಸೆಟ್ ನಲ್ಲಿ ಇಡಿ 'ಚಕ್ರವರ್ತಿ' ಚಿತ್ರತಂಡ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ, ನಟ ಸೃಜನ್ ಲೋಕೇಶ್, ನಿರ್ದೇಶಕ ಚಿಂತನ್ ಮತ್ತಿತ್ತರರು.['ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!]


ಚಾಲೆಂಜಿಂಗ್ ಸ್ಟಾರ್-ಟಾಕಿಂಗ್ ಸ್ಟಾರ್

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಕ್ರವರ್ತಿ ಶೂಟಿಂಗ್ ಸೆಟ್ ನಲ್ಲಿ ಪೋಸ್ ಕೊಟ್ಟ ಪರಿ.


ಬೈಕ್ ರೈಡ್

ಶೂಟಿಂಗ್ ಸೆಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜಾಲಿ ರೈಡ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.


ದರ್ಶನ್-ಸೃಜನ್

ಭೂಗತ ಲೋಕದ ಕಥೆಯನ್ನಾಧರಿಸಿದ 'ಚಕ್ರವರ್ತಿ' ಚಿತ್ರದ ಮೂಲಕ ಅಭಿಮಾನಿಗಳು ಮತ್ತೆ ಹಳೇ ನೆನಪುಗಳಿಗೆ ಜಾರಲಿದ್ದಾರೆ. ಅದೇ ರೆಟ್ರೋ ಲುಕ್, ಹಳೇ ಕಾಲದ ಬ್ರಾಂಡ್ ಅಂಬಾಸಿಡರ್ ಕಾರು ನಿಮಗೆ ಕಾಣ ಸಿಗಲಿದೆ.


ಸೃಜನ್ ಜಾಲಿ ರೈಡ್

ಸೆಟ್ ನಲ್ಲಿ ಶೂಟಿಂಗ್ ಜೊತೆ-ಜೊತೆಗೆ ಸಖತ್ ಮಸ್ತಿ ಮಾಡುತ್ತಾರೆ ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ. ನಟ ಸೃಜನ್ ಲೋಕೇಶ್ ಅವರು ಜಾಲಿ ಬೈಕ್ ರೈಡ್ ಮಾಡಿದ್ದು ಹೀಗೆ.


English summary
Kannada Movie 'Chakravarthy' shooting stills. Kannada Actor Darshan, Kannada Actor Aditya, Actress Deepa Sannidhi, Kannada Actor Srujan Lokesh, Dinakar Thoogudeepa in the lead role. The movie is directed by Chintan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada