»   » ನಟ ಕೋಮಲ್ ನಂಬಿರುವ 'ಆ' ಪದ್ಮಾವತಿ ಬಗ್ಗೆ ಊರೆಲ್ಲಾ ಮಾತು.!

ನಟ ಕೋಮಲ್ ನಂಬಿರುವ 'ಆ' ಪದ್ಮಾವತಿ ಬಗ್ಗೆ ಊರೆಲ್ಲಾ ಮಾತು.!

Posted By:
Subscribe to Filmibeat Kannada

ಶೀರ್ಷಿಕೆ ನೋಡಿ ಶಾಕ್ ಆಗುವ ಮುನ್ನ ನಾವು ಹೇಳುತ್ತಿರುವುದು ಬರೀ ರೀಲ್ ಸುದ್ದಿ ಅನ್ನೋದು ನಿಮಗೆ ನೆನಪಿರಲಿ.

ನಟ ಕೋಮಲ್ ಕುಮಾರ್ ಅಭಿನಯದ 'ಡೀಲ್ ರಾಜ' ಚಿತ್ರದ 'ನಿನ್ನನ್ನೇ ನಂಬಿರುವೆ ಪದ್ಮಾವತಿ' ಹಾಡು ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಮೊನ್ನೆಯಷ್ಟೇ ಬಿಡುಗಡೆ ಆಗಿದ್ದ ಈ ಹಾಡು ಸಾಮಾಜಿಕ ಜಾಲತಾಣಗಳ ಟ್ರೆಂಡಿಂಗ್ ಲಿಸ್ಟ್ ನಲ್ಲಿದೆ. ಯಾರ ಮೊಬೈಲ್ ನಲ್ಲಿ ನೋಡಿದ್ರೂ, 'ಪದ್ಮಾವತಿ'ಯದ್ದೇ ಸೌಂಡು.

In Pics; Komal Kumar starrer 'Deal Raja' song shoot

'ಪದ್ಮಾವತಿ' ಹಾಡಿಗೆ ಸಿಗುತ್ತಿರುವ ಜನಪ್ರಿಯತೆ ನೋಡಿದ್ರೆ, 'ಕೊಲವೆರಿ ಡಿ', 'ಪ್ಯಾರ್ಗೆ ಆಗ್ಬುಟೈತೆ', 'ಸರಳಾ ಸರಳಾ' ಮತ್ತು 'ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ..' ಹಾಡುಗಳ ಪಟ್ಟಿಗೆ 'ಪದ್ಮಾವತಿ' ಸದ್ಯದಲ್ಲೇ ಸೇರುವ ಎಲ್ಲಾ ಲಕ್ಷಣಗಳಿವೆ. [ಪ್ಯಾರ್ ಗೆ ಆಗ್ಬಿಟ್ಟೈತೆ ಪತ್ರೊಡೆ ಮಸಾಲ ರಿಮಿಕ್ಸ್]

'ಗೋವಿಂದಾಯ ನಮಃ' ಚಿತ್ರದ ನಂತರ ಒಂದು ಬಿಗ್ ಬ್ರೇಕ್ ನಿರೀಕ್ಷೆಯಲ್ಲಿರುವ ಕೋಮಲ್ ಗೆ 'ಪದ್ಮಾವತಿ' ಕೃಪಾಕಟಾಕ್ಷ ವರ್ಕೌಟ್ ಆದರೂ ಅಚ್ಚರಿ ಪಡಬೇಕಿಲ್ಲ.

ಅಂದ್ಹಾಗೆ, ಈ ಹಿಂದೆ ಕೋಮಲ್ ಗೆ 'ಸರಳಾ ಸರಳಾ..' ದಂತಹ ಹಿಟ್ ಸಾಂಗ್ ನೀಡಿದ್ದ ಅಭಿಮನ್ ರಾಯ್, ಈ ಬಾರಿ 'ಡೀಲ್ ರಾಜ' ಚಿತ್ರಕ್ಕೆ ಸಂಗೀತ ನೀಡಿ 'ಪದ್ಮಾವತಿ' ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. [ಕೋಮಲ್ 'ಸರಸಕೆ ಬಾರೆ ಸರಳ' ಹಾಡು ಸೂಪರ್ ಹಿಟ್]

'ಡೀಲ್ ರಾಜ' ಚಿತ್ರದಲ್ಲಿ ಕೋಮಲ್ ಗೆ ನಾಯಕಿ ಆಗಿ ಭಾನುಶ್ರೀ ಅಭಿನಯಿಸಿದ್ದಾರೆ. ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ತಬಲಾ ನಾಣಿ, ಅವಿನಾಶ್, ಸುಮನ್ ರಂಗನಾಥ್ ಸೇರಿದಂತೆ ಜನಪ್ರಿಯ ಕಲಾವಿದರು 'ಡೀಲ್ ರಾಜ' ಚಿತ್ರದಲ್ಲಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ರವರ 'ಶಿವಾಜಿ' ಚಿತ್ರದ ವಿಲನ್ ಬೋಸ್ ವೆಂಕಟ್ 'ಡೀಲ್ ರಾಜ' ಚಿತ್ರದಲ್ಲಿ ನಟಿಸಿರುವುದು ವಿಶೇಷ. ಈ ಹಿಂದೆ 'ಸಡಗರ' ಚಿತ್ರವನ್ನು ನಿರ್ದೇಶಿಸಿದ್ದ ರಾಜ್ ಗೋಪಿ 'ಡೀಲ್ ರಾಜ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಡೀಲ್ ರಾಜ' ಚಿತ್ರದ ಫೋಟೋ ಗ್ಯಾಲರಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ....

-
-
ನಟ ಕೋಮಲ್ ನಂಬಿರುವ 'ಆ' ಪದ್ಮಾವತಿ ಬಗ್ಗೆ ಊರೆಲ್ಲಾ ಮಾತು.!

ನಟ ಕೋಮಲ್ ನಂಬಿರುವ 'ಆ' ಪದ್ಮಾವತಿ ಬಗ್ಗೆ ಊರೆಲ್ಲಾ ಮಾತು.!

-
-
-
English summary
Kannada Actor Komal Kumar starrer 'Deal Raja' song shooting pictures are out. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada