»   » ರಿಯಲ್ ಉಪೇಂದ್ರರ ಮನೆಯಲ್ಲಿ ಕಲರ್ ಫುಲ್ ಹೋಳಿ ಸಂಭ್ರಮ

ರಿಯಲ್ ಉಪೇಂದ್ರರ ಮನೆಯಲ್ಲಿ ಕಲರ್ ಫುಲ್ ಹೋಳಿ ಸಂಭ್ರಮ

Posted By:
Subscribe to Filmibeat Kannada

ಬಣ್ಣಗಳ ಹಬ್ಬ 'ಹೋಳಿ' ಸಂಭ್ರಮ ಎಲ್ಲಾ ಕಡೆ ಬಲು ಜೋರಾಗೇ ಶುರು ಆಗಿದೆ. ಸಮಸ್ತ ಜನತೆ ರಂಗಿನ ಹಬ್ಬಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ. ಮಾರ್ಚ್ 23 ರಂದು ಇಡೀ ಜನತೆ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ.

ಕನಸು, ಭಾವನೆ, ಸ್ನೇಹ, ಸಂಬಂಧ ಇದೆಲ್ಲವುಗಳ ಪ್ರತಿರೂಪವೇ ಹೋಳಿಹಬ್ಬ. ಭಾರತೀಯ ಪರಂಪರೆಯಲ್ಲಿ ಈ ಹಬ್ಬಕ್ಕೆ ವಿಶೇಷ ಸ್ಥಾನವಿದ್ದು, ಮಕ್ಕಳು-ವೃದ್ಧರಿಂದ ಹಿಡಿದು ಎಲ್ಲಾ ವಯಸ್ಸಿನ ಜನರು ಕುಣಿದು ಕುಪ್ಪಳಿಸುತ್ತಾ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.[ರಿಯಲ್ ಸ್ಟಾರ್ ಉಪೇಂದ್ರ ಮೇಲೆ ಏನಿದು ದೊಡ್ಡ ಅಪವಾದ?]

ಅಂದಹಾಗೆ ಈ ಬಾರಿ ಹೋಳಿ ಹಬ್ಬವನ್ನು ಎರಡು ದಿನ ಮುಂಚಿತವಾಗಿಯೇ ನಮ್ಮ ಸ್ಯಾಂಡಲ್ ವುಡ್ ನ ತಾರೆಯರು ಭಯಂಕರ ಸಂಭ್ರಮದಿಂದ ಆಚರಿಸಿದ್ದಾರೆ. ಸದ್ಯಕ್ಕೆ ಹೋಳಿ ಸಂಭ್ರಮದ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.[ಉಪ್ಪಿಗೆ ಸವಾಲೆಸೆಯಲು ಸಜ್ಜಾದ ಮುದ್ದು ಮಡದಿ ಪ್ರಿಯಾಂಕ]

ಅದರಲ್ಲೂ ರಿಯಲ್ ಸ್ಟಾರ್ ಉಪೇಂದ್ರ ದಂಪತಿಗಳು ಮಾರ್ಚ್ 20 ಭಾನುವಾರದಂದು ತಮ್ಮ ಮನೆಯಂಗಳದಲ್ಲಿಯೇ ಪೆಂಡಾಲ್ ಹಾಕಿ ಶಾಮಿಯಾನ ಏರಿಸಿ ಹೋಳಿ ಹಬ್ಬವನ್ನು ಚಂದನವನದ ತಾರೆಯರ ಜೊತೆ ಬಣ್ಣಗಳನ್ನು ಎರಚಾಡಿ ಸಡಗರದಿಂದ ಹಬ್ಬ ಆಚರಿಸಿದ್ದಾರೆ. ತಾರೆಯರ ಸಂಭ್ರಮ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಡೋಲು ಬಾರಿಸಿದ ರಿಯಲ್ ಸ್ಟಾರ್ ಉಪೇಂದ್ರ

ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಮನೆಯಲ್ಲಿಯೇ ಎರಡು ದಿನಕ್ಕಿಂತ ಮುಂಚೆಯೇ ಹಬ್ಬ ಆಚರಿಸಿದರು. ಚಿತ್ರದಲ್ಲಿ ಉಪೇಂದ್ರ ಅವರು ಡೋಲು ಬಾರಿಸುತ್ತಿರುವುದು.[ತಮ್ಮ ಮನದನ್ನೆ 'ಪ್ರಿಯಾಂಕ' ಬಗ್ಗೆ ರಿಯಲ್ ಉಪ್ಪಿ ಏನಂದ್ರು?]

ನಿರೂಪಕಿ ಅನುಶ್ರೀ

ಖ್ಯಾತ ನಿರೂಪಕಿ ಕಮ್ ನಟಿ ಅನುಶ್ರೀ ಅವರು ಕೂಡ ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಹಾಜರಿದ್ದು, ಬಣ್ಣದಲ್ಲಿ ಮಿಂದು ಹೋಳಿ ಆಚರಿಸಿದರು.

ಭಾರತಿ ವಿಷ್ಣುವರ್ಧನ್

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಕೂಡ ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಗೆ ಹಾಜರಾಗಿ ಬಣ್ಣದ ಹಬ್ಬ ಹೋಳಿಯ ಸಂಭ್ರಮದಲ್ಲಿ ಪಾಲ್ಗೊಂಡರು.

ಉಪ್ಪಿ ಫೋಸ್

ಹತ್ತಿರದ ಗೆಳೆಯರು ಹಾಗು ಸ್ಯಾಂಡಲ್ ವುಡ್ ನ ತಾರೆಯರ ಜೊತೆ ಬಣ್ಣ ಹಚ್ಚಿಕೊಂಡು ಕ್ಯಾಮರಾಗೆ ಫೋಸ್ ಕೊಟ್ಟ ರಿಯಲ್ ಉಪ್ಪಿ.[ಚಿತ್ರಗಳು: ಚಂದನವನದ ಗ್ರೇಟ್ ಅಪ್ಪಂದಿರು ಇವರೇ ಕಣ್ರೀ ]

ಕಲರ್ ಫುಲ್ ಪ್ರಿಯಾಂಕ

ಮುಖದ ತುಂಬಾ ಬಣ್ಣ ಹಚ್ಚಿಕೊಂಡು ಕಲರ್ ಫುಲ್ ಆಗಿ ನಟಿ ಪ್ರಿಯಾಂಕ ಉಪೇಂದ್ರ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.

ಕೇಕ್ ಕತ್ತರಿಸಿದ ಉಪ್ಪಿ

ಹೋಳಿ ಪರವಾಗಿ ಕೇಕ್ ಕತ್ತರಿಸಿ ಹಬ್ಬ ಆಚರಿಸಿದ ಉಪೇಂದ್ರ ದಂಪತಿಗಳು, ತಾರೆಯರು ಮತ್ತು ಗೆಳೆಯರು. ಉಪ್ಪಿ ಅವರ ಮುದ್ದು ಮಗಳು ಐಶ್ವರ್ಯ ಉಪ್ಪಿ ಅವರಿಗೆ ಕೇಕ್ ತಿನ್ನಿಸಿದ ಪರಿ.

ಮಾವನ ಜೊತೆ ಸೆಲ್ಫಿ

ಮಾವನ (ಉಪೇಂದ್ರ ಅವರ ತಂದೆ) ಜೊತೆ ಪ್ರಿಯಾಂಕ ಉಪೇಂದ್ರ ಅವರು ಬಣ್ಣ ಹಚ್ಚಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.

ಉಪ್ಪಿ ದಂಪತಿಗಳ ಸೆಲ್ಫಿ

ಉಪ್ಪಿ ದಂಪತಿಗಳು ಹೋಳಿ ಹಬ್ಬ ಆಚರಣೆಯ ನಡುವೆಯೂ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು.

ಡೋಲು ಬಾರಿಸಿದ ಮೇಘನಾ ಗಾಂವ್ಕರ್

'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ನಾಯಕಿ ಮೇಘನಾ ಗಾಂವ್ಕರ್ ಅವರು ಚಿತ್ರದ ಯಶಸ್ಸಿನಲ್ಲಿ ಉಪ್ಪಿ ಅವರ ಮನೆಯಲ್ಲಿ ಹೋಳಿ ಆಚರಿಸಿದರು.

ಸುಸ್ತಾದ ಉಪ್ಪಿ

ಬಣ್ಣಗಳ ಜೊತೆ ಆಟ ಆಡಿ, ಬಣ್ಣದ ನೀರು ಎರಚಾಡಿಕೊಂಡು ಸುಸ್ತಾಗಿ ಮಿಶ್ರಮಿಸಿಕೊಳ್ಳುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ.

English summary
Kannada Actor Upendra and his wife set the charts through their latest photos on the social media. The beautiful couple have recently celebrated Holi with their family and friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada