»   » ರೀಲ್ ನಲ್ಲಿ ಮೈತ್ರಿಯಾ-ಪ್ರೇಮಕುಮಾರಿ 'ರಿಯಲ್' ಕಹಾನಿ?

ರೀಲ್ ನಲ್ಲಿ ಮೈತ್ರಿಯಾ-ಪ್ರೇಮಕುಮಾರಿ 'ರಿಯಲ್' ಕಹಾನಿ?

Posted By:
Subscribe to Filmibeat Kannada

ಬಹುಶಃ ಸ್ಟಾರ್ ಗಳಿಗೂ ಇಷ್ಟು ಪ್ರಚಾರ ಸಿಕ್ಕಿರಲಿಲ್ಲ. ಎಲ್ಲೇ ಹೋದರೂ, ಸುದ್ದಿ ವಾಹಿನಿಗಳ ಕ್ಯಾಮರಾ ಹಿಂಬಾಲಿಸುವಷ್ಟರ ಮಟ್ಟಿಗೆ ಸೆಲೆಬ್ರಿಟಿ ಸ್ಟೇಟಸ್ ಪಡೆದುಕೊಂಡುಬಿಟ್ಟಿದ್ದಾರೆ ನಟಿ ಮೈತ್ರಿಯಾ ಗೌಡ, ರಾಮ್ ದಾಸ್ ಪ್ರೇಮ ಪ್ರಕರಣದ ಪ್ರೇಮ ಕುಮಾರಿ, ಕಾಳಿ ಸ್ವಾಮಿ, ನರ್ಸ್ ಜಯಲಕ್ಷ್ಮೀ.

ಈಗ ಯಾವುದೇ ಚಾನೆಲ್ ಹಾಕಿದರೂ, ಎಲ್ಲಾ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವ ಈ ಕಾಂಟ್ರವರ್ಸಿ ಕುಡಿಗಳು ಕನ್ನಡ ಚಿತ್ರರಂಗದಲ್ಲಿ ಬಿಜಿಯಾಗಿರುವುದು ನಿಮಗೆ ಗೊತ್ತು. ಹಾಗೆ, ಈ ಎಲ್ಲಾ ವಿವಾದಿತರು ಒಂದೇ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವ ಸುದ್ದಿ ಕೂಡ ಹಳೆಯದ್ದೇ.

ಪತ್ರಕರ್ತ ಪಿ.ಎನ್.ಶ್ರೀನಾಥ್ ನಿರ್ದೇಶಿಸುತ್ತಿರುವ 'Love on NH 4' ಚಿತ್ರದಲ್ಲಿ ಇಡೀ ಕರ್ನಾಟಕವನ್ನ ನಡುಗಿಸಿದ 'ಟಿ.ಆರ್.ಪಿ' ಕ್ಯಾಂಡಿಡೇಟ್ಸ್ ಅಭಿನಯಿಸಿದ್ದಾರೆ. ಆದ್ರೆ, ಚಿತ್ರದಲ್ಲಿ ಅವರ ಪಾತ್ರಗಳೇನು? 'ಲವ್ ಆನ್ NH 4' ಚಿತ್ರದಲ್ಲಿ ಇವರೆಲ್ಲರ ಅಗತ್ಯವೇನಿತ್ತು ಅಂತ ನಿಮಗೆ ಅನಿಸಿರಬಹುದು.

ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿರುವ 'ಲವ್ ಆನ್ NH 4' ಚಿತ್ರದ ಫೋಟೋಗಳನ್ನ ನೋಡಿದ್ರೆ, ನಿಮಗೆ ಖಂಡಿತ ಆಶ್ಚರ್ಯವಾಗುತ್ತೆ. ನಿಜ ಜೀವನದಲ್ಲಿ ವಿವಾದ ಹುಟ್ಟುಹಾಕಿರುವ 'ಖ್ಯಾತ' ನಾಮರು ಸಿನಿಮಾದಲ್ಲೂ 'ರಿಯಲ್' ಆಗಿ ಕಾಣಿಸಿಕೊಂಡಿದ್ದಾರೆ. ನಂಬಲ್ಲ ಅಂದ್ರೆ, ಸ್ಲೈಡ್ ಗಳಲ್ಲಿರುವ ಚಿತ್ರದ ಫೋಟೋಗಳನ್ನ ಒಮ್ಮೆ ನೋಡಿ.....

ತೆರೆಮೇಲೆ ಮೈತ್ರಿಯಾ ಗೌಡ 'ರಿಯಲ್' ಕಹಾನಿ!?

ಮೈತ್ರಿಯಾ ಗೌಡ ಮತ್ತು ತಿಲಕ್ ಕಾಣಿಸಿಕೊಂಡಿರುವ ಈ ಫೋಟೋವನ್ನ ನೋಡಿ, ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ಪ್ರಕರಣವನ್ನ ನೆನಪಿಸಿಕೊಳ್ಳಿ. ಕುತ್ತಿಗೆಯಲ್ಲಿ ಅರಿಶಿನ ಕೊಂಬು ಕೊಟ್ಟಿಕೊಂಡು, ''ಇದು ಕಾರ್ತಿಕ್ ಗೌಡ ನನಗೆ ಕಟ್ಟಿದ್ದು'' ಅಂತ ಮೈತ್ರಿಯಾ ತನ್ನ ಪ್ರೇಮ ಪ್ರಕರಣವನ್ನ ಸುದ್ದಿ ವಾಹಿನಿಗಳಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅದೇ 'ರಿಯಲ್' ಅರಿಶಿನ ಕೊಂಬು ಸೀನ್ 'ಲವ್ ಆನ್ NH 4' ಚಿತ್ರದಲ್ಲಿ ಬಳಸಲಾಗಿದೆಯಾ? ಈ ಫೋಟೋ ನೋಡಿದ್ಮೇಲೆ ಇಂತಹ ಡೌಟ್ ಬರುವುದು ಸಹಜ.

'ಲವ್ ಆನ್ NH 4'ನಲ್ಲಿ ಮೈತ್ರಿಯಾ ಪ್ರೇಮ ಪುರಾಣ?

ಇದೇ ತಿಲಕ್, ಮೈತ್ರಿಯಾ ಜೊತೆ ಲವ್ವಿ ಡವ್ವಿ ಆಡುತ್ತಿರುವ ಫೋಟೋ ಇಲ್ಲಿದೆ. ಮೇಲ್ನೋಟಕ್ಕೆ ತಿಲಕ್ ಶ್ರೀಮಂತ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಮೈತ್ರಿಯಾ ಎಂದಿನಂತೆ ಮಾಡ್ ಆಗೇ ಇದ್ದಾರೆ. ಅಂದ್ಮೇಲೆ ಸಿನಿಮಾದಲ್ಲಿ 'ಪ್ಯಾರ್-ಸೆಕ್ಸ್-ಧೋಖಾ' ಕಥಾಹಂದರ ಇದ್ದರೆ, ಆಶ್ಚರ್ಯ ಪಡಬೇಡಿ.

ಕೋರ್ಟ್ ನಲ್ಲಿ ಮೈತ್ರಿಯಾ ಗೌಡ..!

'ಲವ್ ಆನ್ NH 4' ಅಡ್ಡದಿಂದ ಬಂದಿರುವ ಮತ್ತೊಂದು ಫೋಟೋದಲ್ಲಿ ಮೈತ್ರಿಯಾ ಕೋರ್ಟ್ ಗೆ ಅಲೆದಾಡುತ್ತಿರುವ ದೃಶ್ಯಗಳೂ ಸೆರೆಯಾಗಿವೆ. [ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ]

ಪ್ರೇಮ ಕುಮಾರಿ ಪ್ರೇಮ್ ಕಹಾನಿ?

'ಲವ್ ಆನ್ NH 4' ಸಿನಿಮಾದ ಮತ್ತೊಂದು ರೋಚಕ ಸ್ಟಿಲ್ ಇಲ್ಲಿದೆ ನೋಡಿ. ಏಕ್ದಂ ಅಲ್ಟ್ರಾ ಮಾಡರ್ನ್ ಆಗಿರುವ ಪ್ರೇಮ ಕುಮಾರಿ ಪ್ಯಾಂಟು ಶರ್ಟು ಧರಿಸಿ, ಬಾಬ್ ಕಟ್ ಮಾಡಿಸಿಕೊಂಡು ಹೇಗೆ ಮಿಂಚಿದ್ದಾರೆ ಅಂತ ನೋಡಿ. ಇದೇ ಫೋಟೋದಲ್ಲಿ ನೀವು ಗಮನಿಸಿದ್ರೆ, ಸಿ.ಎಂ. ಸಿದ್ದರಾಮಯ್ಯ, ಮಾಜಿ ಸಿ.ಎಂ ಕುಮಾರಸ್ವಾಮಿ, ವಾಟಾಳ್ ನಾಗರಾಜ್ ರನ್ನ ಅನುಕರಿಸುವ ನಟರಿದ್ದಾರೆ. ಬ್ಯಾಕ್ ಗ್ರೌಂಡ್ ನಲ್ಲಿ 'ಲವ್' ಸಿಂಬಲ್ ಇದೆ. ಆಂಕರ್ಸ್ ಆಗಿ ರ್ಯಾಪಿಡ್ ರಶ್ಮಿ, ರಾಕ್ ಸ್ಟಾರ್ ರೋಹಿತ್ ಇದ್ದಾರೆ. ಇಷ್ಟೆಲ್ಲಾ ಇದ್ಮೇಲೆ, ಪ್ರೇಮಕುಮಾರಿಯ 'ಪೊಲಿಟಿಕಲ್ ಪ್ರೇಮ್ ಕಹಾನಿ' ಸಿನಿಮಾದಲ್ಲಿ ಇಲ್ಲದೇ ಇರುತ್ತಾ ಸ್ವಲ್ಪ ಯೋಚಿಸಿ....

'ಜಡ್ಜ್' ಆದ ನರ್ಸ್ ಜಯಲಕ್ಷ್ಮಿ

ಎಲ್ಲರಿಗಿಂತ ಕೊಂಚ ವಿಭಿನ್ನ ಅನಿಸುವುದು ನರ್ಸ್ ಜಯಲಕ್ಷ್ಮಿ. ನಿಜ ಜೀವನದಲ್ಲಿ ನರ್ಸ್ ಆಗಿದ್ದ ಜಯಲಕ್ಷ್ಮಿ, 'ಲವ್ ಆನ್ NH 4' ಸಿನಿಮಾದಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಆದ್ರೆ, ಅವರ ನಿಜವಾದ ಪಾತ್ರ ಇನ್ನೂ ಸಸ್ಪೆನ್ಸ್. [ಪೋಲಿಗಳ ಜೊತೆ ಜಾಲಿ ಬಾರಿಗೆ ನರ್ಸ್ ಜಯಲಕ್ಷ್ಮಿ ]

'ಲಾಯರ್' ಆಗಿ ಕರಿ ಕೋಟು ತೊಟ್ಟ ಕಾಳಿ ಸ್ವಾಮಿ

ಖಾವಿ ಕಳಚಿ, 'ಲವ್ ಆನ್ NH 4' ಚಿತ್ರದಲ್ಲಿ ಕಾಳಿ ಸ್ವಾಮಿ ಲಯರ್ ಆಗಿ ಮಿಂಚಿದ್ದಾರೆ. ಮಾತಲ್ಲಿ ಮನೆಕಟ್ಟುವ ಸ್ವಾಮೀಜಿ, ಚಿತ್ರದಲ್ಲಿ ಯಾರ ಪರ ವಕಾಲತ್ತು ವಹಿಸುತ್ತಾರೋ ಕಾದು ನೋಡಬೇಕು.

'ಲವ್ ಆನ್ NH 4' ಹೀರೋ..?

ಅಸಲಿಗೆ 'ಲವ್ ಆನ್ NH 4' ಚಿತ್ರದ ನಾಯಕ 'ರಿಯಾಲಿಟಿ ಸ್ಟಾರ್' ಅಕುಲ್ ಬಾಲಾಜಿ ಮತ್ತು ತಿಲಕ್. ವಿಶೇಷ ಪಾತ್ರದಲ್ಲಿ ಥ್ರಿಲ್ಲರ್ ಮಂಜು ಕೂಡ ಅಭಿನಯಿಸಿ, ಮೈನವಿರೇಳಿಸುವ ಸ್ಟಂಟ್ ಮಾಡಿದ್ದಾರೆ.

'ಲವ್ ಆನ್ NH 4' ಕಥಾಹಂದರವೇನು..?

ಪ್ರೀತಿಯ ಅಸ್ತಿತ್ವ, ನೈತಿಕತೆಯ ಮುಖವಾಡಗಳು 'ಲವ್ ಆನ್ NH 4' ಚಿತ್ರದಲ್ಲಿ ಕಳಚಿಡಲಾಗಿದ್ಯಂತೆ. ಪ್ರೀತಿ ಪ್ರೇಮದ ಸೋಂಕು ಇಡೀ ಪ್ರಜಾಪ್ರಭುತ್ವದ ನಾಲ್ಕು ಅಂಗಗಳಿಗೂ ಹರಡಿ, ಇಡೀ ಸಮಾಜ ಯಾವ ಮಟ್ಟದ ಕಾಂಟ್ರವರ್ಸಿಗೆ ಗುರಿಯಾಗುತ್ತದೆ ಎಂಬುದನ್ನ ಹಸಿಹಸಿಯಾಗಿ ತೋರಿಸಿ ಸಮಾಜವನ್ನು ಎಚ್ಚರಿಸುವ ಜವಾಬ್ದಾರಿಯುತ ಕಥೆ 'ಲವ್ ಆನ್ NH 4' ಚಿತ್ರದಲ್ಲಿದೆ. ಅಂದ್ಮೇಲೆ, ಚಿತ್ರದಲ್ಲಿ ಮೈತ್ರಿಯಾ-ಪ್ರೇಮ ಕುಮಾರಿ ಪ್ರೇಮ ಪ್ರಕರಣ ರಾರಾಜಿಸುವುದು ಗ್ಯಾರೆಂಟಿ.

ಪತ್ರಕರ್ತರೇ ಸೇರಿ ಮಾಡಿರುವ ಸಿನಿಮಾ!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಡೀ ಪತ್ರಕರ್ತರ ಸಮೂಹ ಸೇರಿ ಮಾಡುತ್ತಿರುವ ಸಿನಿಮಾ 'ಲವ್ ಆನ್ NH 4'. ಸುಮಾರು 20 ವರ್ಷಗಳಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಾಥ್ 'ಲವ್ ಆನ್ NH 4' ಚಿತ್ರದ ನಿರ್ದೇಶಕ. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯವನ್ನ ಖುದ್ದು ಬರೆದು 'ಲವ್ ಆನ್ NH 4' ಚಿತ್ರದಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ. 'ನಮ್ಮ ನೆಲದಲ್ಲಿಯೇ ನಡೆದ ನೈಜಘಟನೆಯಾಧಾರಿತ ಚಿತ್ರ' ಅಂತ ನಿರ್ದೇಶಕರು ಹೇಳಿಕೊಂಡಿದ್ದಾರೆ. ಇದೀಗ ಬಿಡುಗಡೆಯಾಗಿರುವ ಈ ಫೋಟೋಗಳನ್ನ ನೋಡಿದ್ರೆ, 'ಲವ್ ಆನ್ NH 4' ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ಕರ್ನಾಟಕದ ಮೂಲೆ ಮೂಲೆಯಲ್ಲೂ ಹಲ್ ಚಲ್ ಎಬ್ಬಿಸುವುದು ಖಂಡಿತ.

English summary
Controversial Actress Mythriya Gowda and Prema Kumari (alleged partner of former BJP Minister S.A.Ramadass) is said to have playing their real-life characters on screen in the movie Love on NH4. Check out the Exclusive pics of the movie in Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada