»   » ನೂತನ ಬಾಳಿಗೆ ಕಾಲಿಟ್ಟ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ

ನೂತನ ಬಾಳಿಗೆ ಕಾಲಿಟ್ಟ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ

Posted By:
Subscribe to Filmibeat Kannada

'ಪಂಚರಂಗಿ' ರಂಗಿ ಬೆಡಗಿ ನಿಧಿ ಸುಬ್ಬಯ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈ ಮೂಲದ ಉದ್ಯಮಿ ಲವೇಶ್ ಖೈರಜನಿ ಅವರ ಜೊತೆ ಕನ್ನಡ ನಟಿ ನಿಧಿ ಸುಬ್ಬಯ್ಯ ಸಪ್ತಪದಿ ತುಳಿದು ಹೊಸ ಬಾಳಿಗೆ ನಾಂದಿ ಹಾಡಿದ್ದಾರೆ.

ಫೆಬ್ರವರಿ 10, 11 ರಂದು ಕೊಡಗಿನಲ್ಲಿ ಇವರಿಬ್ಬರ ವಿವಾಹ ಮಹೋತ್ಸವ ನೆರವೇರಿದ್ದು, ಎರಡು ಕುಟುಂಬದವರು ಈ ಶುಭ ಘಳಿಗೆಯಲ್ಲಿ ಭಾಗಿಯಾಗಿ ನವ ಜೋಡಿಗಳಿಗೆ ಅರಸಿ ಆರ್ಶೀವಾದಿಸಿದರು.[ಕೊಡಗಿನ ಬೆಡಗಿ, ನಟಿ ನಿಧಿ ಸುಬ್ಬಯ್ಯಗೆ ಕಂಕಣ ಬಲ]

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಧಿ ಸುಬ್ಬಯ್ಯ

ಸ್ಯಾಂಡಲ್ ವುಡ್ ಚೆಲುವೆ ನಿಧಿ ಸುಬ್ಬಯ್ಯ ತಮ್ಮ ಪ್ರಿಯಕರ ಲವೇಶ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ತಾವು ಪ್ರೀತಿಸಿದ ಯುವಕನನ್ನ ಬಾಳ ಸಂಗಾತಿಯಾಗಿ ವರಿಸಿದ್ದಾರೆ.[ನಿಧಿ ಸುಬ್ಬಯ್ಯ ಅವರದ್ದು ಲವ್ ಮ್ಯಾರೇಜಾ..? ಮದುವೆ ಬಗ್ಗೆ ಹೇಳಿದ್ದೇನು?]

ಲವೇಶ್ ಸಂಪ್ರದಾಯದಂತೆ ಮದುವೆ

ಶುಕ್ರವಾರ (ಫೆಬ್ರವರಿ 10) ವಿರಾಜಪೇಟೆ ತಾಲ್ಲೂಕಿನ ಕಡಂಗ ಸಮೀಪದ ರೆಸಾರ್ಟ್‌ವೊಂದರಲ್ಲಿ ಲವೇಶ್ ಕುಟುಂಬಸ್ಥರ ಸಂಪ್ರದಾಯದ ಪ್ರಕಾರ ವಿವಾಹ ನಿಧಿ ಸುಬ್ಬಯ್ಯ ಅವರ ಮದುವೆ ನಡೆದಿತ್ತು.

ಮಡಿಕೇರಿಯಲ್ಲಿ ನಡೆದ ಆರತಕ್ಷತೆ

ಮಡಿಕೇರಿಯ ಕ್ರಿಸ್ಟಲ್ ಹಾಲ್‌ನಲ್ಲಿ ಶನಿವಾರ (ಫೆಬ್ರವರಿ 11) ರಾತ್ರಿ ಆಪ್ತರ ಸಮ್ಮುಖದಲ್ಲಿ ನಿಧಿ ಸುಬ್ಬಯ್ಯ ಮತ್ತು ಲವೇಶ್ ಅವರ ಆರತಕ್ಷತೆ ಅದ್ಧೂರಿಯಿಂದ ನೆರವೇರಿತು.

ರಾಜ-ರಾಣಿ

ನೂತನ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ರಾಜ-ರಾಣಿಯಂತೆ ಕಂಗೊಳಿಸುತ್ತಿದ್ದರು.

ಮಂಟಪ್ಪಕ್ಕೆ ವಧು ಆಗಮನ

ಕೊಡವರ ಸಂಪ್ರದಾಯದಂತೆ ಮದುವೆ ಮಂಟಪಕ್ಕೆ ನವ ವಧುವನ್ನ ಕರೆದುಕೊಂಡು ಬರುತ್ತಿರುವುದು.

ಶಾಸ್ತ್ರ ಪೂರೈಸುತ್ತಿರುವ ನಿಧಿ

ಕೂರ್ಗ್ ಶೈಲಿಯಲ್ಲಿ ಉಡುಗೆ ತೊಟ್ಟು, ಮದುವೆ ಶಾಸ್ತ್ರದಲ್ಲಿ ನಟಿ ನಿಧಿ ಸುಬ್ಬಯ್ಯ ಪಾಲ್ಗೊಂಡಿದ್ದಾರೆ.

ಫ್ಯಾಮಿಲಿ ಜೊತೆ ಸಂಭ್ರಮ

ನಿಧಿ ಸುಬ್ಬಯ್ಯ ಹಾಗೂ ಲವೇಶ್, ತಮ್ಮ ವಿವಾಹದ ಆರತಕ್ಷತೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವೇಳೆ ಎರಡು ಕುಟುಂಬದವರು ಭಾಗಿಯಾಗಿದ್ದರು.

ಸಂತಸದಲ್ಲಿದ್ದ ನವ ಜೋಡಿ

ಮಾಂಗಲ್ಯಧಾರಣೆಯ ವೇಳೆಯಲ್ಲಿ ನಿಧಿ ಸುಬ್ಬಯ್ಯ ಮತ್ತು ಲವೇಶ್ ಕಾಣಿಸಿಕೊಂಡಿದ್ದು ಹೀಗೆ..

ಜನವರಿಯಲ್ಲಿ ಆಗಿತ್ತು ನಿಶ್ಚಿತಾರ್ಥ

ಜನವರಿ 1ರಂದು ಪರಸ್ಪರ ಉಂಗುರ ತೊಡಿಸಿ ಮದುವೆಯ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಹಕ್ಕಿ, ಕೊನೆಗೂ ಸಂತಸದಿಂದ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದಾರೆ. ನಮ್ಮ ಕಡೆಯಿಂದಲೂ ಇವರಿಬ್ಬರಿಗೂ ಶುಭಾಶಯ.

English summary
Actress Nidhi Subbaiah Married her Beau of one and a half years, Lavesh Khairajani in an Intimate Ceremony in Coorg on Saturday (February 11th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada