For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನ ಭರವಸೆಯ 'ಸ್ಟಾರ್' ನಿಖಿಲ್ ಕುಮಾರ್!

  By Harshitha
  |

  ''ದುಡ್ದಿದ್ದ ಮಾತ್ರಕ್ಕೆ ಸ್ಟಾರ್ ಅಗಲು ಸಾಧ್ಯವಿಲ್ಲ. ರಾಜಕಾರಣಿಗಳ ಮಕ್ಕಳು ಹೀರೋ ಆಗುವುದು ಈಗ ಒಂದು ಫ್ಯಾಶನ್.!'' - ಹೀಗಂತ ಹೇಳ್ತಾ ಕೆಲವು ತಿಂಗಳ ಹಿಂದೆ ಗಾಂಧಿನಗರದಲ್ಲಿ ಮೂಗು ಮುರಿದವರೇ ಹೆಚ್ಚು.

  ಕಾರಣ ಇಷ್ಟೇ...ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್, ಎಚ್.ಎಂ.ರೇವಣ್ಣ ಪುತ್ರ ಅನೂಪ್, ಚೆಲುವರಾಯಸ್ವಾಮಿ ಪುತ್ರ ಸಚಿನ್, ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ರಾಜಕಾರಣ ಮಾಡದೆ ಬಣ್ಣ ಹಚ್ಚಲು ತಯಾರಿ ನಡೆಸುತ್ತಿದ್ದಾರೆ ಅಂತ ಗಾಂಧಿನಗರದ ಗಲ್ಲಿಗಲ್ಲಿಯಲ್ಲೂ ಸುದ್ದಿ ಆಗಿತ್ತು.

  ಇದನ್ನ ಕೇಳಿ ''ಇವರೆಲ್ಲಾ ಸ್ಟಾರ್ ಹೀರೋಗಳು ಆಗ್ತಾರಾ'' ಅಂತ ಕಣ್ಣು ಬಾಯಿ ಬಿಟ್ಟವರೇ ಹೆಚ್ಚಿನ ಮಂದಿ. [ವಿಡಿಯೋ ; 'ಜಾಗ್ವಾರ್' ನಿಖಿಲ್ ತಯಾರಿ ಸೂಪರ್ರೋ ಸೂಪರ್.!]

  ಈಗ ನಿಮಗೆ ನಾವು ಇದನ್ನೆಲ್ಲಾ ಹೇಳಲು ಕಾರಣ ನಿಖಿಲ್ ಕುಮಾರ್.! ಎಲ್ಲರ ನಿರೀಕ್ಷೆಗೂ ಮೀರಿ, ಎಲ್ಲರೂ ಬಾಯಿ ಮೇಲೆ ಬೆರಳಿಡುವ ಮಟ್ಟಕ್ಕೆ ಟಾಪ್ ಟು ಬಾಟಂ ಫಿಟ್ ಆಗಿರುವ ನಿಖಿಲ್ ಕುಮಾರ್ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ.

  ಅದಕ್ಕೆ ಸಾಕ್ಷಿ 'ಜಾಗ್ವಾರ್' ಚಿತ್ರದ ಲೇಟೆಸ್ಟ್ ಫೋಟೋಶೂಟ್ ಮತ್ತು MAKING OF NIKHIL KUMAR ವಿಡಿಯೋ. ಮುಂದೆ ಓದಿ.....

  ಭರವಸೆಯ ಕೋಲ್ಮಿಂಚು ನಿಖಿಲ್ ಕುಮಾರ್

  ಭರವಸೆಯ ಕೋಲ್ಮಿಂಚು ನಿಖಿಲ್ ಕುಮಾರ್

  ಇತ್ತೀಚೆಗಷ್ಟೆ ತಮ್ಮ ಚೊಚ್ಚಲ ಚಿತ್ರ 'ಜಾಗ್ವಾರ್'ಗಾಗಿ ನಿಖಿಲ್ ಕುಮಾರ್ ಒಂದು ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದರು. ಅದರ ಎಕ್ಸ್ ಕ್ಲೂಸಿವ್ ಸ್ಟಿಲ್ಸ್ ಇದು. [ಹೀರೋ ಆದ ನಿಖಿಲ್; ಗೌಡರ ಮನೆಯಲ್ಲಿ ಭಿನ್ನಮತ!?]

  ಯಾರಿಗೂ ಕಮ್ಮಿ ಇಲ್ಲ!

  ಯಾರಿಗೂ ಕಮ್ಮಿ ಇಲ್ಲ!

  ಈ ಫೋಟೋಶೂಟ್ ನಲ್ಲಿ ನಿಖಿಲ್ ಕುಮಾರ್ ರವರ ಲುಕ್ಸ್ ನೋಡಿದ್ರೆ, ಹರೆಯದ ಹುಡುಗಿಯರು ಫಿದಾ ಆಗುವುದರಲ್ಲಿ ಡೌಟೇ ಇಲ್ಲ. [ಮಗನಿಗೆ ಮರುನಾಮಕರಣ ಮಾಡಿದ ಕುಮಾರಸ್ವಾಮಿ..!]

  ಹ್ಯಾಂಡ್ಸಮ್ ಹಂಕ್!

  ಹ್ಯಾಂಡ್ಸಮ್ ಹಂಕ್!

  ಹೀರೋಗೆ ಬೇಕಾಗಿರುವ ಹೈಟು, Personality ನಿಖಿಲ್ ಕುಮಾರ್ ಗಿದೆ. ಅದಕ್ಕೆ ಈ ಫೋಟೋಗಳಿಗಿಂತ ಬೇರೆ ಉದಾಹರಣೆ ಬೇಕಾ? ['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

  ಆಕ್ಷನ್ ಹೀರೋಗೂ ಸೈ

  ಆಕ್ಷನ್ ಹೀರೋಗೂ ಸೈ

  ಕಟ್ಟುಮಸ್ತಾದ ಬಾಡಿ ಬಿಲ್ಡ್ ಮಾಡಿರುವ ನಿಖಿಲ್ ಕುಮಾರ್ ಆಕ್ಷನ್ ಹೀರೋ ಪಾತ್ರಕ್ಕೂ ಸೂಟ್ ಆಗ್ತಾರೆ ಅಲ್ವಾ? [ಯಾರ ಕೈಗೂ ಸಿಕ್ಕಲ್ಲವಂತೆ ಎಚ್.ಡಿ.ಕೆ ಪುತ್ರ ನಿಖಿಲ್!]

  ಕಾಲೇಜ್ ಹುಡುಗನ ಪಾತ್ರಕ್ಕೂ ಜೈ

  ಕಾಲೇಜ್ ಹುಡುಗನ ಪಾತ್ರಕ್ಕೂ ಜೈ

  'ಜಾಗ್ವಾರ್' ಚಿತ್ರದ ಫೋಟೋಶೂಟ್ ನಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ನಿಖಿಲ್ ಕುಮಾರ್ [ಡಾ.ರಾಜ್ ಕುಮಾರ್ ನನಗೆ ಸ್ಪೂರ್ತಿ - ನಿಖಿಲ್ ಗೌಡ]

  ಸ್ಟೈಲಿಶ್ ಹೀರೋ

  ಸ್ಟೈಲಿಶ್ ಹೀರೋ

  ನಿಖಿಲ್ ಕುಮಾರ್ ರವರ ಸ್ಟೈಲಿಶ್ ಪೋಸ್....

  ಸ್ಟೈಲಿಂಗ್...

  ಸ್ಟೈಲಿಂಗ್...

  ತಮ್ಮ ಲುಕ್ಸ್ ಬಗ್ಗೆ ತುಂಬಾ ಎಕ್ಸ್ ಪೆರಿಮೆಂಟ್ ಮಾಡಿರುವ ನಿಖಿಲ್ ಕುಮಾರ್ ಸ್ಟೈಲಿಂಗ್ ಬಗ್ಗೆ ತುಂಬಾ ಕಾಳಜಿ ವಹಿಸಿದ್ದಾರೆ.

  ಫುಲ್ ಟ್ರೈನಿಂಗ್

  ಫುಲ್ ಟ್ರೈನಿಂಗ್

  ಹಾಲಿವುಡ್ ಸ್ಟಂಟ್ ಮಾಸ್ಟರ್ ಸಿರಿಲ್ ರಫೇಲ್ ರಿಂದ ಮಾರ್ಷಲ್ ಆರ್ಟ್ಸ್, ಸ್ಟಂಟ್ಸ್ ಮತ್ತು ಫೈಟಿಂಗ್ ತರಬೇತಿ ಪಡೆದಿದ್ದಾರೆ ನಿಖಿಲ್ ಕುಮಾರ್.

  ವಿಡಿಯೋ ನೋಡಿ....

  ವಿಡಿಯೋ ನೋಡಿ....

  ಡ್ಯಾನ್ಸ್ ಮತ್ತು ಫೈಟ್ ನಲ್ಲಿ ನಿಖಿಲ್ ಕುಮಾರ್ ಕರಾಮತ್ತು ಹೇಗಿದೆ ಅಂತ ನೀವೇ ಈ ವಿಡಿಯೋದಲ್ಲಿ ನೋಡಿ....

  ಭರವಸೆಯ ಸ್ಟಾರ್!

  ಭರವಸೆಯ ಸ್ಟಾರ್!

  ನಿಖಿಲ್ ಕುಮಾರ್ ರವರ ಇಷ್ಟೆಲ್ಲಾ ತಯಾರಿ ನೋಡಿದ್ರೆ, ಮುಂದೆ ಅವರು 'ಸ್ಟಾರ್' ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಏನಂತೀರಿ.....

  English summary
  Nikhil Kumar, son of EX CM H.D.Kumaraswamy is making his debut in Sandalwood through 'Jaguar'. Take a look at Nikhil Kumar's Photoshoot for Kannada Movie 'Jaguar'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X