»   » ಸದ್ದು ಮಾಡದೆ, ಸುದ್ದಿ ಇಲ್ಲದೆ ಮದುವೆಯಾದ್ರಾ ಪಾರೂಲ್..?

ಸದ್ದು ಮಾಡದೆ, ಸುದ್ದಿ ಇಲ್ಲದೆ ಮದುವೆಯಾದ್ರಾ ಪಾರೂಲ್..?

Posted By: Pavithra
Subscribe to Filmibeat Kannada

'ಪ್ಯಾರ್‌ಗೆ ಆಗ್ಬಿಟೈತೆ' ಅಂತ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡ ನಟಿ ಪಾರೂಲ್ ಯಾದವ್. ಆಕ್ಟ್ ಮಾಡಿದ ಮೊದಲ ಸಿನಿಮಾದಲ್ಲಿಯೇ 'ಅತ್ಯುತ್ತಮ ನಟಿ' ಎನ್ನುವ ಪಟ್ಟ ಪಡೆದುಕೊಂಡ ಪಾರೂಲ್, ಕನ್ನಡ ಸಿನಿಮಾರಂಗದಲ್ಲಿಯೇ ನೆಲೆ ಕಂಡುಕೊಂಡ್ರು.

ಪಕ್ಕದ ಮುಂಬೈನ ಬೆಡಗಿಯಾದರೂ, ಪಾರೂಲ್ ಗೆ ಅವಕಾಶಗಳು ಹುಡುಕಿಕೊಂಡು ಬಂದಿದ್ದು ಮಾತ್ರ ಕನ್ನಡ ಸಿನಿಮಾರಂಗದಲ್ಲಿ. ಒಂದರ ನಂತ್ರ ಒಂದು ಸಿನಿಮಾ ಮಾಡಿ ಸಕ್ಸಸ್ ಮೆಟ್ಟಿಲುಗಳನ್ನ ಹತ್ತಿದ ನಟಿ ಈಗ ಸುದ್ದಿ ಕೊಡದೆ ಸದ್ದಿಲ್ಲದೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಬರ್ತಿದೆ..!

ಪಾರೂಲ್ ಮದುವೆ ಯಾವಾಗ ಆಯ್ತು.? ಯಾರ ಜೊತೆ ಎನ್ನುವ ಕುತೂಹಲ ನಿಮಗೂ ಇದ್ಯಾ.? ಹಾಗಾದ್ರೆ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರೂಲ್.?

ನಟಿ ಪಾರೂಲ್ ಯಾದವ್ ಮದುವೆ ಮಾಡಿಕೊಂಡಿದ್ದಾರೆ. ಕೈತುಂಬ ಮೆಹಂದಿ ಹಾಕಿಕೊಂಡು ಮದುವೆ ಸಂಭ್ರಮದಲ್ಲಿ ಪಾರೂಲ್ ಫೋಟೋ ಗಳನ್ನೂ ತೆಗೆದುಕೊಂಡಿದ್ದಾರೆ. ಪಾರೂಲ್ ಮದುವೆಯಾದ ತಕ್ಷಣ ಫ್ಲೈಟ್ ಹತ್ತಿ ಪ್ಯಾರಿಸ್ ಕಡೆಗೆ ಹೊರಟಿದ್ದಾರೆ.

'ಬಟರ್ ಫ್ಲೈ' ಚಿತ್ರದ ಮೊದಲ ನೋಟ ಸಖತ್ ಕಲರ್ ಫುಲ್

ಹನಿಮೂನ್ ಗಾಗಿ ಪ್ಯಾರಿಸ್ ಗೆ ಹೋದ್ರಾ ಪಾರೂಲ್.?

ಹಾಗಾದ್ರೆ ಹನಿಮೂನ್ ಗಾಗಿ ಪಾರೂಲ್ ಪ್ಯಾರಿಸ್ ಗೆ ಹೊರಟ್ರಾ ಅಂತ ಕೇಳಿದ್ರೆ ಉತ್ತರ ಹೌದು. ಅದ್ರೆ, ಇವೆಲ್ಲವೂ ನಡೆದಿರುವುದು ಸಿನಿಮಾದಲ್ಲಿ ಮಾತ್ರ. ಪಾರೂಲ್ ಮದುಮಗಳಂತೆ ತಯಾರಾಗಿರುವುದು ಕೂಡ ಸಿನಿಮಾದ ಚಿತ್ರೀಕರಣಕ್ಕಾಗಿ.!

'ಬಟರ್ ಫ್ಲೈ' ಜೊತೆ ರಮೇಶ್ ಅರವಿಂದ್, ಪಾರೂಲ್ ಹಾರಾಟ

'ಬಟರ್‌ ಫ್ಲೈ' ಸಿನಿಮಾದಲ್ಲಿ ಪಾರೂಲ್ ಕಲ್ಯಾಣ

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಪಾರೂಲ್ ಹಿಂದಿಯ 'ಕ್ವೀನ್' ರೀಮೇಕ್ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ಚಿತ್ರದಲ್ಲಿ ಪಾರೂಲ್ ಲೀಡ್ ರೋಲ್ ಪ್ಲೇ ಮಾಡ್ತಿದ್ದು, ಸದ್ಯ ಚಿತ್ರತಂಡ ಪಾರೂಲ್ ಮದುವೆ ಸಂಭ್ರಮ ಮುಗಿಸಿ ಮುಂದಿನ ಭಾಗದ ಚಿತ್ರೀಕರಣಕ್ಕಾಗಿ ಪ್ಯಾರಿಸ್ ನಲ್ಲಿದೆ.

ನೆನಪಿಡಿ.. ಪಾರೂಲ್ ಸಿನಿಮಾ ಹೆಸರು 'ಪಾತರಗಿತ್ತಿ' ಅಲ್ಲ, ಅದು 'ಬಟರ್ ಫ್ಲೈ'

ರಮೇಶ್ ಅರವಿಂದ್ ಡೈರೆಕ್ಷನ್ ನಲ್ಲಿ 'ಕ್ವೀನ್' ಕನ್ನಡ

'ಬಟರ್ ಫ್ಲೈ' ಸಿನಿಮಾವನ್ನ ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ನಿರ್ದೇಶನ ಮಾಡ್ತಿದ್ದಾರೆ. ಪಾರೂಲ್ ಮುಖ್ಯ ಭೂಮಿಕೆಯಲ್ಲಿ ಆಕ್ಟ್ ಮಾಡಿದ್ರೆ, ಆಮಿ ಜಾಕ್ಸನ್ ಕೂಡ ಒಂದು ಪಾತ್ರದಲ್ಲಿ ಆಕ್ಟ್ ಮಾಡ್ತಿದ್ದಾರೆ. ಈಗಾಗ್ಲೆ ಎರಡನೇ ಹಂತದ ಚಿತ್ರೀಕರಣ ಶುರುವಾಗಿದ್ದು ಸಿನಿಮಾ ತಂಡ ಪ್ಯಾರಿಸ್ ನಲ್ಲಿ ಸಿನಿಮಾದ ಸೆಕೆಂಡ್ ಆಫ್ ಶೂಟಿಂಗ್ ನಲ್ಲಿ ಬಿಜಿ ಆಗಿದೆ. ಮೆಡಿನೆಟ್ ಇಂಟರ್ ನ್ಯಾಷನಲ್ ಫಿಲ್ಮ್ ನಲ್ಲಿ ಚಿತ್ರ ನಿರ್ಮಾಣವಾಗ್ತಿದ್ದು ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ತರೋ ಪ್ರಯತ್ನದಲ್ಲಿದೆ.

English summary
Parul Yadav's marriage sequence shoot for 'Butterfly'. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X