»   » ಚಿತ್ರಗಳು: ಪ್ರಿಯಾಂಕ ಉಪೇಂದ್ರ ಬರ್ತ್ ಡೇ ಪಾರ್ಟಿಯಲ್ಲಿ ಸ್ಟಾರ್ಸ್ ಮೋಜು-ಮಸ್ತಿ

ಚಿತ್ರಗಳು: ಪ್ರಿಯಾಂಕ ಉಪೇಂದ್ರ ಬರ್ತ್ ಡೇ ಪಾರ್ಟಿಯಲ್ಲಿ ಸ್ಟಾರ್ಸ್ ಮೋಜು-ಮಸ್ತಿ

Written By:
Subscribe to Filmibeat Kannada

ಇತ್ತೀಚೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು ಹುಟ್ಟುಹಬ್ಬ ಸಮಾರಂಭಗಳನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸಿಕೊಳ್ಳುತ್ತಾರೆ. ಇಂತಹ ಹುಟ್ಟುಹಬ್ಬಗಳು ಬಂತು ಅಂದ್ರೆ, ಸ್ಟಾರ್ ಫ್ಯಾಮಿಲಿಗಳು ಒಟ್ಟಾಗಿ ಒಬ್ಬ ಸ್ಟಾರ್ ಮನೆಯಲ್ಲಿ ಸೇರಿ ಬರ್ತ್ ಡೇ ಪಾರ್ಟಿ ಮಾಡೋದು ಇತ್ತೀಚಿನ ಹೊಸ ಟ್ರೆಂಡ್ ಆಗಿದೆ.

ಇಂತದ್ದೇ ಬರ್ತ್ ಡೇ ಪಾರ್ಟಿಯೊಂದಕ್ಕೆ ಸಾಕ್ಷಿಯಾಗಿದ್ದು ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆ. ಹೌದು, ಉಪೇಂದ್ರ ಅವರ ಪತ್ನಿ, ಸ್ಯಾಂಡಲ್ ವುಡ್ ನ ಮುದ್ದು ಚೆಲುವೆ ನಟಿ ಪ್ರಿಯಾಂಕ ಉಪೇಂದ್ರ ಅವರು ಇತ್ತೀಚೆಗೆ, ತಮ್ಮ39ನೇ ಹುಟ್ಟುಹಬ್ಬವನ್ನ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಅದ್ದೂರಿಯಾಗಿ ಆಚರಿಸಿಕೊಂಡ್ರು.[ಹಾಲಿವುಡ್ ಶೈಲಿಯಲ್ಲಿ 'ಮಮ್ಮಿ'ಗೆ ರೀ-ರೆಕಾರ್ಡಿಂಗ್]

ಈ ಸ್ಟಾರ್ ನಟಿಯ ಬರ್ತ್ ಡೇಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ದಂಪತಿ ಸಮೇತರಾಗಿ ಆಗಮಿಸಿ, ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದರು. ರೆಬಲ್ ಸ್ಟಾರ್ ಅಂಬರೀಶ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ಗಣೇಶ್, ಶ್ರೀಮುರುಳಿ, ಸೃಜನ್ ಲೋಕೇಶ್, ನಿರ್ಮಾಪಕ ಸೌಂಧರ್ಯ ಜಗದೀಶ್, ಯಶ್ ಫ್ಯಾಮಿಲಿ ಸೇರಿಂದತೆ ಹಲವರು ಪ್ರಿಯಾಂಕ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಮುಂದೆ ಓದಿ.....

ಪ್ರಿಯಾಂಕ ಉಪೇಂದ್ರ ಬರ್ತ್ ಡೇ

ಇತ್ತೀಚೆಗೆ (ನವೆಂಬರ್ 9) ನಟಿ ಪ್ರಿಯಾಂಕ ಉಪೇಂದ್ರ ಅವರು ತಮ್ಮ 39ನೇ ಹುಟ್ಟುಹಬ್ಬವನ್ನ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಆಚರಿಸಿಕೊಂಡ್ರು. ತಮ್ಮ ಫ್ಯಾಮಿಲಿ, ಇಂಡಸ್ಟ್ರಿ ಫ್ರೆಂಡ್ಸ್, ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.['ಮಮ್ಮಿ...save me' ಚಿತ್ರಕ್ಕೂ 'ಬಾಹುಬಲಿ' ಚಿತ್ರಕ್ಕೂ ದೊಡ್ಡ ಲಿಂಕ್ ಇದೆ.!]

ಸ್ಟೈಲಿಶ್ ಅಂಬರೀಶ್

ಪ್ರಿಯಾಂಕ ಬರ್ತ್ ಡೇ ಪಾರ್ಟಿಯಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅರವದ್ದೇ ದರ್ಬಾರ್. ಬರ್ತ್ ಡೇ ಪಾರ್ಟಿಗೆ ಸಖತ್ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದ ಅಂಬರೀಶ್, ಎಲ್ಲ ಸ್ಟಾರ್ ಗಳ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡಿದರು.

ಬರ್ತ್ ಡೇ ಗರ್ಲ್ ಜೊತೆ ಅಂಬಿ

ಬರ್ತ್ ಡೇ ಗರ್ಲ್ ಪ್ರಿಯಾಂಕ ಅವರ ಜೊತೆ, ಹಿರಿಯ ನಟ ಅಂಬರೀಶ್ ಹಾಗೂ ಉಪೇಂದ್ರ ಅವರು ಮಾತನಾಡುತ್ತಿದ್ದ ಸಂತಸದ ಕ್ಷಣ ನೋಡಲು ಖುಷಿ ಕೊಡುತ್ತೆ.

ಉಪೇಂದ್ರ ದಂಪತಿ ಜೊತೆ ರೆಬಲ್ ಸ್ಟಾರ್

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರೊಡನೆ, ಅಂಬರೀಶ್ ಅವರು ತಬ್ಬಿಕೊಂಡು ಪ್ರೀತಿಯನ್ನ ವ್ಯಕ್ತಪಡಿಸಿದ ಸಂಭ್ರಮ ನೋಡೋದಕ್ಕೆ ಚೆಂದವಾಗಿದೆ.

ಸೃಜನ್-ಅಂಬಿ-ಗಣಿ

ರೆಬಲ್ ಸ್ಟಾರ್ ಅಂಬರೀಶ್ ಅವರು, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸೃಜನ್ ಲೋಕೇಶ್ ಅವರ ಜೊತೆ ಕಾಣಿಸಿಕೊಂಡ ಕ್ಷಣ. ಗಣೇಶ್ ಮತ್ತು ಸೃಜನ್ ಲೋಕೇಶ್ ಇಬ್ಬರ ಕೆನ್ನೆಗೂ ಪ್ರೀತಿಯಿಂದ ಮುತ್ತಿಡುವಾಗ ಸೆರೆಯಾದ ಚಿತ್ರ.

ಸ್ನೇಹಿತರ ಬಳಗದಲ್ಲಿ ಅಂಬಿ

ಅಂಬರೀಶ್ ಅವರ ಜೊತೆ ಫೋಟೋ ತೆಗೆಸಿಕೊಂಡಿರುವ ಸ್ನೇಹಿತರ ಬಳಗ.

500 ರೂ. ನೋಟಿನ ಹಾರ

ಪ್ರಿಯಾಂಕ ಅವರ ಹುಟ್ಟುಹಬ್ಬದ ವಿಶೇಷವಾಗಿ, ಅವರಿಗೆ 500 ರೂಪಾಯಿಯ ಹಾರ ಹಾಕಲಾಗಿದೆ. ಈ ವೇಳೆ ಉಪೇಂದ್ರ, ನಿರ್ಮಾಪಕ ಸೌಂದರ್ಯ ಜಗದೀಶ್ ಪ್ರಿಯಾಂಕ ಜೊತೆ ಕಾಣಿಸಿಕೊಂಡಿದ್ದಾರೆ.

ಪ್ರಿಯಾಂಕ ಜೊತೆ ಅಮೂಲ್ಯ

ಬರ್ತ್ ಡೇ ಪಾರ್ಟಿಯಲ್ಲಿ ಪ್ರಿಯಾಂಕ ಜೊತೆ ಗೋಲ್ಡನ್ ಕ್ವೀನ್ ಅಮೂಲ್ಯ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು.

ಸೆಲ್ಫಿ ವಿತ್ ಗಣೇಶ್ ಫ್ಯಾಮಿಲಿ

ಪ್ರಿಯಾಂಕ ಅವರ ಜೊತೆ ಗಣೇಶ್ ಫ್ಯಾಮಿಲಿಯ ಸೆಲ್ಫಿ ಮುದ್ದಾಗಿದೆ. ಗಣೇಶ್, ಶಿಲ್ಪ ಗಣೇಶ ಹಾಗೂ ನಟಿ ಹರ್ಷಿಕಾ ಪೂಣಚ್ಚ ಈ ಸೆಲ್ಫಿಯಲ್ಲಿ ಸೆರೆಯಾದರು.

ಸ್ಟಾರ್ಸ್ ನಟರ ಸೆಲ್ಫಿ

ಬರ್ತ್ ಡೇ ಪಾರ್ಟಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ನಟರು ಒಂದು ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಗಣೇಶ್, ಸೈಜನ್ ಲೋಕೇಶ್, ಶ್ರೀಮುರುಳಿ, ಉಪೇಂದ್ರ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಈ ಫೋಟೋದಲ್ಲಿದ್ದಾರೆ.

ಕೇಕ್ ಕಟ್ಟಿಂಗ್

ಪ್ರಿಯಾಂಕ ಅವರ ಹುಟ್ಟುಹಬ್ಬಕ್ಕೆ ವಿಶೇಷವಾದ ಚಾಕೋಲೆಟ್ ಕೇಕ್ ತಯಾರಿಸಲಾಗಿತ್ತು. ಜನುಮದಿನ ವಿಶೇಷವಾಗಿ ಕೇಕ್ ಕತ್ತರಿಸಿದ ಪ್ರಿಯಾಂಕ ಉಪೇಂದ್ರ ಸಖತ್ ಖುಷಿಯಾಗಿದ್ದರು.

ಉಪ್ಪಿ ಜೊತೆ ಕೇಕ್ ಕಟ್ಟಿಂಗ್

ಪ್ರಿಯಾಂಕ ಅವರು ಸ್ಪೆಷಲ್ ಬರ್ತ್ ಡೆಯನ್ನ ಪತಿ ಉಪೇಂದ್ರ ಅವರು ಸಖತ್ ಗ್ರ್ಯಾಂಡ್ ಆಗಿ ಆಚರಿಸಿದರು. ಬರ್ತ್ ಡೇ ಯಲ್ಲಿ ಉಪ್ಪಿ ಹಾಗೂ ಪ್ರಿಯಾಂಕ ಕಾಣಿಸಿಕೊಂಡಿದ್ದು ಹೀಗೆ.

ಸಿಂಗಲ್ ಫೋಟೋ

ಸ್ಟಾರ್ ಗಳ ಜೊತೆಯಲ್ಲಿ ಹುಟ್ಟುಹಬ್ಬವನ್ನ ಸೆಲೆಬ್ರೆಟ್ ಮಾಡಿದ ಪ್ರಿಯಾಂಕ, ಒಬ್ಬರೇ ಸೆಲ್ಫಿಗೆ ಫೋಸ್ ಕೊಟ್ಟು ಎಂಜಾಯ್ ರಿಲ್ಯಾಕ್ಸ್ ಆದರು.

ಶ್ರೀಮುರುಳಿ ವಿತ್ ಪ್ರಿಯಾಂಕ

ಹುಟ್ಟುಹಬ್ಬದ ಸಂತೋಷದಲ್ಲಿದ್ದ ಪ್ರಿಯಾಂಕ ಜೊತೆ ರೋರಿಂಗ್ ಸ್ಟಾರ್ ಶ್ರೀಮುರುಳಿ ದಂಪತಿ ಪ್ರತ್ಯಕ್ಷವಾದರು.

ಸ್ಟಾರ್ಸ್ ವೈಫ್

ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ, ಗುರುಕಿರಣ್ ಅವರ ಪತ್ನಿ, ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್, ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಮತ್ತು ತಂಗಿ ನಂದಿನಿ, ಶ್ರೀಮುರುಳಿ ಅವರ ಪತ್ನಿ ಹಾಗೂ ನಟಿ ಹರ್ಷಿಕಾ ಪೂಣಚ್ಚ ಈ ಗ್ಯಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಉಪ್ಪಿ ಫ್ಯಾಮಿಲಿ ಜೊತೆ ಅಂಬಿ

ಉಪೇಂದ್ರ ಅವರ ತಂದೆ-ತಾಯಿ, ಪತ್ನಿ ಪ್ರಿಯಾಂಕ ಜೊತೆ ಅಂಬರೀಶ್ ಅವರು ಕಾಣಿಸಿಕೊಂಡರು.

ರಾಕಿಂಗ್ ಸ್ಟಾರ್ ಕುಟುಂಬ

ಈ ಅದ್ದೂರಿ ಹುಟ್ಟುಹಬ್ಬಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಹಾಗೂ ತಂಗಿ ನಂದಿನಿ ಕೂಡ ಅತಿಥಿಯಾಗಿದ್ದರು.

ಬಿಗ್ ಪಾರ್ಟಿ

ಪ್ರಿಯಾಂಕ ಅವರ ಈ ಬರ್ತ್ ಡೇ ಯಲ್ಲಿ ಪ್ರಿಯಾಂಕ ಉಪೇಂದ್ರ ಅವರ, ಇಂಡಸ್ಟ್ರಿ ಫ್ರೆಂಡ್ಸ್, ಫಾರೀನ್ ಫ್ರೆಂಡ್ಸ್, ಫ್ಯಾಮಿಲಿ ಫ್ರೆಂಡ್ಸ್ ಸೇರಿಂದತೆ ದೊಡ್ಡ ಸಂಖ್ಯೆಯ ಸ್ನೇಹಿತರ ಬಳಗ ಕಾಣಿಸಿಕೊಂಡಿತ್ತು.

ಸ್ನೇಹಿತರ ಸಂಭ್ರಮ

ಕನ್ನಡ, ಬೆಂಗಾಳಿ, ತಮಿಳು, ಹಿಂದಿ ಸೇರಿಂದತೆ ಸುಮಾರು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ, ಪ್ರಿಯಾಂಕ ಇಂಡಸ್ಟ್ರಿಗೆ ಬಂದು ಸುಮಾರು 15 ವರ್ಷಗಳಾಗಿವೆ. ಕೋಟಿಗೊಬ್ಬ, ಮಲ್ಲ, ಎಚ್2ಓ, ರೌಡಿ ಅಳಿಯ, ಶ್ರೀಮತಿ, ಪ್ರಿಯಾಂಕ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

English summary
Priyanka Upendra celebrated her 39th Birthday on November 9th with Family and Kannada Film Industry Friends. Check out the pictures

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada