»   » ಪ್ರಿಯಾಂಕ ಮನೆಯಲ್ಲಿ ಹೌರಾ ಬ್ರಿಡ್ಜ್: ನೋಡಲು ಬಂದ ಸೆಲೆಬ್ರಿಟಿಗಳ ದಂಡು

ಪ್ರಿಯಾಂಕ ಮನೆಯಲ್ಲಿ ಹೌರಾ ಬ್ರಿಡ್ಜ್: ನೋಡಲು ಬಂದ ಸೆಲೆಬ್ರಿಟಿಗಳ ದಂಡು

Posted By:
Subscribe to Filmibeat Kannada

ನಟಿ ಪ್ರಿಯಾಂಕಾ ಉಪೇಂದ್ರರ ಮನೆಗೆ ಹೌರಾ ಬ್ರಿಡ್ಜ್ ಬಂದಿದ್ಯಂತೆ. ಅರೆ.... ಕೋಲ್ಕತ್ತದಲ್ಲಿ ಇರುವ ಹೌರಾ ಬ್ರಿಡ್ಜ್ ಇಲ್ಲಿ ಹೇಗೆ ಬರುತ್ತೆ ಅಂತೀರಾ? ಬ್ರಿಡ್ಜ್ ನಿಜಕ್ಕೂ ಬಂದಿತ್ತು ಅದು ಕೇಕ್ ರೂಪದಲ್ಲಿ.

ಹೌದು, ನಟಿ ಪ್ರಿಯಾಂಕಾ ಉಪೇಂದ್ರ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ. ಅದ್ದೂರಿಯಾಗಿ ನಡೆದ ಬರ್ತಡೇ ಪಾರ್ಟಿಯಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಬಂದವರೆಲ್ಲಾ ಈ ಕೇಕ್ ನೋಡಿ ಇಂಪ್ರೆಸ್ ಆಗಿದ್ದಾರೆ

ಪ್ರಿಯಾಂಕಾ ಅಭಿನಯದ ಮುಂದಿನ ಸಿನಿಮಾ 'ಹೌರಾ ಬ್ರಿಡ್ಜ್'. ಚಿತ್ರದ ನಿರ್ದೇಶಕ ಲೋಹಿತ್, ಪ್ರಿಯಾಂಕಾ ಹುಟ್ಟುಹಬ್ಬದ ವಿಶೇಷವಾಗಿ 'ಹೌರಾ ಬ್ರಿಡ್ಜ್' ಕೇಕ್ ಮಾಡಿಸಿದ್ರು. ಇದನ್ನ ನೋಡಿ ಸೆಲೆಬ್ರಿಟಿಗಳೆಲ್ಲ ತುಂಬಾ ಇಷ್ಟ ಪಟ್ಟಿದ್ದಾರೆ. ಮುಂದೆ ಓದಿರಿ....

ಯಾರೆಲ್ಲಾ ಇದ್ದರು ಬರ್ತಡೇ ಪಾರ್ಟಿಯಲ್ಲಿ.?

ಪ್ರಿಯಾಂಕಾ ಉಪೇಂದ್ರ ಅವರ ಹುಟ್ಟುಹಬ್ಬ ಈ ಬಾರಿ ಸಖತ್ ಗ್ರಾಂಡ್ ಆಗಿಯೇ ಇತ್ತು. ಸ್ಯಾಂಡಲ್ ವುಡ್ ನ ಬಹುತೇಕ ಕಲಾವಿದರೆಲ್ಲಾ ಬರ್ತಡೇ ಸೆಲಬ್ರೇಷನ್ ನಲ್ಲಿ ಭಾಗಿಯಾಗಿದ್ರು. ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಸುಮಲತಾ ಕೂಡ ಹಾಜರ್ ಆಗಿದ್ರು.

ಪ್ರಿಯಾಂಕಾ ಮನೆಯಲ್ಲಿ ಯಶ್ ಫ್ಯಾಮಿಲಿ

ರಾಕಿಂಗ್ ಯಶ್ ಅವ್ರ ತಾಯಿ ಪುಷ್ಪ ಹಾಗೂ ತಂಗಿ ನಂದಿನಿ ಕೂಡ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡ್ರು. ಇವ್ರ ಜೊತೆಯಲ್ಲಿ ವಿಜಯ ರಾಘವೇಂದ್ರ ಹಾಗೂ ಗುರುಕಿರಣ್ ಕುಟುಂಬವೂ ಮನೆಗೆ ಬಂದು ವಿಷ್ ಮಾಡಿದ್ರು.

ಸೆಲಬ್ರಿಟೀಸ್ ಗ್ರೂಪ್ ನಿಂದ ಬರ್ತಡೇ ಸೆಲಬ್ರೇಷನ್

ಸಾಮಾನ್ಯವಾಗಿ ಸಾದಾ ಸೀದಾ ಲುಕ್ ನಲ್ಲಿ ಕಾಣಿಸಿಕೊಳ್ಳುವ ನಟಿ ಪ್ರಿಯಾಂಕ ಈ ಬಾರಿ ಓಲ್ಡ್ ಇಸ್ ಗೋಲ್ಡ್ ಅಂತ ವಿಂಟೇಜ್ ಸ್ಟೈಲ್ ನಲ್ಲಿ ರೆಡಿಯಾಗಿದ್ರು. ಬರ್ತಡೇ ಪಾರ್ಟಿ ಯಲ್ಲಿ ನಟಿ ಅಮೂಲ್ಯ, ನಿರ್ಮಾಪಕಿ ರೇಖಾ ಜಗದೀಶ್, ಆರ್ ಜೆ ರಶ್ಮಿ, ಅನುಪಮಾ ಭಟ್, ಸೌಂದರ್ಯ ಜಗದೀಶ್ ಹೀಗೆ ಇನ್ನೂ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ರು.

ಮಕ್ಕಳ ಜೊತೆ ಸೇರಿ ಹುಟ್ಟುಹಬ್ಬ

ಹುಟ್ಟುಹಬ್ಬದ ವೀಶೇಷವಾಗಿ ಉಪೇಂದ್ರ ಅಭಿಮಾನಿಗಳು ಬಾಸ್ಕೋ ಮಕ್ಕಳ ಮನೆಯಲ್ಲಿ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ರು. ಪ್ರಿಯಾಂಕ ಉಪೇಂದ್ರ ಬಾಸ್ಕೋ ಮಕ್ಕಳಿಗೆ ಬಿರಿಯಾನಿ ತಿನ್ನಿಸಿದ್ರು.

English summary
Priyanka Upendra's 40th birthday celebration. Take a look at pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X