»   » ಸ್ವಿಜರ್ ಲ್ಯಾಂಡ್ ನಲ್ಲಿ ರವಿತೇಜಾ, ಹರ್ಷ, ತಮನ್ನಾ ತಕಧಿಮಿತ

ಸ್ವಿಜರ್ ಲ್ಯಾಂಡ್ ನಲ್ಲಿ ರವಿತೇಜಾ, ಹರ್ಷ, ತಮನ್ನಾ ತಕಧಿಮಿತ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸ್ಟೈಲಿಶ್ ಕೊರಿಯೋಗ್ರಫರ್ ಕಮ್ ನಿರ್ದೇಶಕ ಹರ್ಷ ಟಾಲಿವುಡ್ ಗೆ ಹಾರಿರುವ ಬಗ್ಗೆ ನಾವೇ ನಿಮಗೆ ಹೇಳಿದ್ವಿ.

ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ ಮತ್ತು ತಮನ್ನಾ ನಟಿಸುತ್ತಿರುವ 'ಬೆಂಗಾಲ್ ಟೈಗರ್' ಚಿತ್ರದ ಹಾಡುಗಳಿಗೆ ಕನ್ನಡದ ಹರ್ಷ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. [ಟಾಲಿವುಡ್ಡಿಗೆ ಹಾರಿದ 'ಭಜರಂಗಿ' ನಿರ್ದೇಶಕ ಹರ್ಷ]

ಮಾಸ್ ಹಾಡೊಂದನ್ನ ಹೈದರಾಬಾದ್ ನಲ್ಲೇ ಚಿತ್ರೀಕರಿಸಿರುವ ಹರ್ಷ, ಇದೀಗ 'ಬೆಂಗಾಲ್ ಟೈಗರ್' ಚಿತ್ರತಂಡದ ಜೊತೆ ಸ್ವಿಜರ್ ಲ್ಯಾಂಡ್ ಗೆ ಹಾರಿದ್ದಾರೆ. ಸ್ವಿಜರ್ ಲ್ಯಾಂಡ್ ನಲ್ಲಿ ರವಿತೇಜಾ, ತಮನ್ನಾ ಮತ್ತು ಹರ್ಷ ಆಡಿರುವ ತಕಧಿಮಿತ ಚಿತ್ರಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ.

'ಬೆಂಗಾಲ್ ಟೈಗರ್' ಮೇಕಿಂಗ್ ಫೋಟೋಗಳಿಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಸ್ವಿಜರ್ ಲ್ಯಾಂಡ್ ನಲ್ಲಿ 'ಬೆಂಗಾಲ್ ಟೈಗರ್'

ಮಾಸ್ ಮಹಾರಾಜ ರವಿತೇಜಾ ಮತ್ತು ಮಿಲ್ಕಿ ಬ್ಯೂಟಿ ತಮನ್ನಾ ಜೋಡಿಯಾಗಿ ನಟಿಸುತ್ತಿರುವ ಸಿನಿಮಾ 'ಬೆಂಗಾಲ್ ಟೈಗರ್'. ಸಂಪತ್ ನಂದಿ ನಿರ್ದೇಶಿಸುತ್ತಿರುವ ಆಕ್ಷನ್ ಕಮ್ ಕಾಮಿಡಿ ಮಿಕ್ಸ್ ಆಗಿರುವ ಅಪ್ಪಟ ಮಿರ್ಚಿ ಮಸಾಲ ಇರುವ 'ಬೆಂಗಾಲ್ ಟೈಗರ್' ಚಿತ್ರತಂಡ ಇದೀಗ ಹಾಡಿನ ಚಿತ್ರೀಕರಣಕ್ಕಾಗಿ ಸ್ವಿಜರ್ ಲ್ಯಾಂಡ್ ಗೆ ಫ್ಲೈಟ್ ಹತ್ತಿದೆ. [ರವಿತೇಜಾ ಜೊತೆ 'ವಜ್ರಕಾಯ' ಹರ್ಷ ಆಟ ನೋಡಿ...]

ಸ್ವಿಜರ್ ಲ್ಯಾಂಡ್ ನಲ್ಲಿ ರೋಮ್ಯಾನ್ಸ್

ಸ್ವಿಜರ್ ಲ್ಯಾಂಡ್ ನ ಬೀದಿ ಬೀದಿಗಳಲ್ಲಿ ರವಿತೇಜಾ ಮತ್ತು ತಮನ್ನಾ ಡ್ಯುಯೆಟ್ ಹಾಡುತ್ತಿದ್ದಾರೆ. ಇಬ್ಬರ ಪ್ರೇಮ ಗೀತೆಗೆ ನೃತ್ಯಕ್ಕೆ ಸಂಯೋಜನೆ ಮಾಡಿರುವುದು ಹರ್ಷ.

ಟಾಲಿವುಡ್ ನಲ್ಲಿ ಮೊದಲ ಹೆಜ್ಜೆ.!

ಸ್ಯಾಂಡಲ್ ವುಡ್ ನ ಅನೇಕ ಸೂಪರ್ ಹಿಟ್ ಗೀತೆಗಳಿಗೆ ಕೋರಿಯೋಗ್ರಫಿ ಮಾಡಿರುವ ಹರ್ಷ, ಮೊಟ್ಟ ಮೊದಲ ಬಾರಿಗೆ 'ಬೆಂಗಾಲ್ ಟೈಗರ್' ಮೂಲಕ ಟಾಲಿವುಡ್ ಗೆ ಹಾರಿದ್ದಾರೆ.

ರವಿತೇಜಾ ಹಾಕಿದ ರೆಡ್ ಕಾರ್ಪೆಟ್

ನಿಜ ಹೇಳ್ಬೇಕಂದ್ರೆ, ಕನ್ನಡ ನಿರ್ದೇಶಕ ಕಮ್ ಕೊರಿಯೋಗ್ರಫರ್ ಹರ್ಷ ರವರನ್ನ ಟಾಲಿವುಡ್ ಗೆ ಬರಮಾಡಿಕೊಂಡಿದ್ದು ರವಿತೇಜಾ.

'ವಜ್ರಕಾಯ'ದಲ್ಲಿ ಹರ್ಷ-ರವಿತೇಜಾ

ಹರ್ಷ ನಿರ್ದೇಶನ ಮತ್ತು ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ 'ವಜ್ರಕಾಯ' ಚಿತ್ರದ ಟೈಟಲ್ ಹಾಡಿಗೆ ರವಿತೇಜಾ ಹೆಜ್ಜೆ ಹಾಕಿದ್ದರು. ಅದಾದ ನಂತರವೇ ರವಿತೇಜಾ, ಹರ್ಷರವರಿಗೆ ಬುಲಾವ್ ನೀಡಿದ್ದು.

English summary
Kannada Director cum Choreographer Harsha is choreographing songs for Ravi Teja and Tamannaah starrer Telugu Movie 'Bengal Tiger'. Check out the making pictures of 'Bengal Tiger'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada