»   » 'ಕುರುಕ್ಷೇತ್ರ' ಚಿತ್ರಕ್ಕಾಗಿ ಮೀಸೆ ಬೋಳಿಸಿದ ರವಿಚಂದ್ರನ್ ಹೀಗೆ ಕಾಣ್ತಾರೆ ನೋಡಿ

'ಕುರುಕ್ಷೇತ್ರ' ಚಿತ್ರಕ್ಕಾಗಿ ಮೀಸೆ ಬೋಳಿಸಿದ ರವಿಚಂದ್ರನ್ ಹೀಗೆ ಕಾಣ್ತಾರೆ ನೋಡಿ

Posted By:
Subscribe to Filmibeat Kannada

ಎಲ್ಲರಿಗೂ ಗೊತ್ತಿರುವ ಹಾಗೆ, 'ಕುರುಕ್ಷೇತ್ರ' ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ 'ಶ್ರೀಕೃಷ್ಣ'ನ ಪಾತ್ರ ನಿರ್ವಹಿಸಲಿದ್ದಾರೆ. ಶ್ರೀಕೃಷ್ಣನ ಅವತಾರದಲ್ಲಿ ರವಿಚಂದ್ರನ್ ಹೇಗೆ ಕಾಣ್ಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಆ ಕುತೂಹಲ ತಣಿಸುವ ನೆಪದಲ್ಲಿ ನಿಮಗಾಗಿ 'ಕುರುಕ್ಷೇತ್ರ' ಅಡ್ಡದಿಂದ ಒಂದು ಫೋಟೋ ಹೊತ್ತು ತಂದಿದ್ದೀವಿ ನೋಡಿ...

'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ, ಶ್ರೀಕೃಷ್ಣನ ವೇಷ ಧರಿಸುವ ಮುನ್ನ, ಕ್ಯಾಮರಾ ಕಣ್ಣುಗಳಲ್ಲಿ ರವಿಚಂದ್ರನ್ ಸೆರೆ ಆಗಿರುವುದು ಹೀಗೆ...

In pics: Ravichandran in 'Kurukshetra'

'ಕುರುಕ್ಷೇತ್ರ' ಚಿತ್ರಕ್ಕಾಗಿ ರವಿಚಂದ್ರನ್ ಮೀಸೆ ಬೋಳಿಸಿಕೊಂಡಿದ್ದಾರೆ. ಎದೆ ಮೇಲಿನ ಕೂದಲನ್ನೂ ತೆಗೆಸಿಕೊಂಡಿದ್ದಾರೆ. ಜೊತೆಗೆ ತೂಕ ಕೂಡ ಇಳಿಸಿಕೊಂಡಿರುವ ರವಿಚಂದ್ರನ್ 'ಶ್ರೀಕೃಷ್ಣ'ನ ಅವತಾರವೆತ್ತಲು ಮಾಂಸಾಹಾರ ಸೇವನೆ ಹಾಗೂ ಕಾಫಿ ಕುಡಿಯುವ ಅಭ್ಯಾಸವನ್ನೂ ಕೈಬಿಟ್ಟಿದ್ದಾರೆ.

'ಕೃಷ್ಣ'ನ ಪಾತ್ರಕ್ಕಾಗಿ ರವಿಚಂದ್ರನ್ ಏನೆಲ್ಲಾ ಮಾಡಿದ್ದಾರೆ ನೋಡಿ?

ಮೊಟ್ಟ ಮೊದಲ ಬಾರಿಗೆ ಪೌರಾಣಿಕ ಚಿತ್ರದಲ್ಲಿ ಅಭಿನಯಿಸುತ್ತಿರುವ ರವಿಚಂದ್ರನ್, 'ಶ್ರೀಕೃಷ್ಣ'ನಾಗಲು ಸಕಲ ತಯಾರಿ ನಡೆಸಿದ್ದಾರೆ. ಸದ್ಯ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿರುವ ರವಿಚಂದ್ರನ್, ಪಾಂಡವರು-ಕೌರವರ ಸಂಧಾನ ಮಾಡುವಲ್ಲಿ ತಲ್ಲೀನರಾಗಿದ್ದಾರೆ.

English summary
Kannada Actor Ravichandran shaves his moustache to play Sri Krishna in Darshan starrer 'Kurukshetra'. Check out the photo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada