»   » ಕನ್ನಡ ಚಿತ್ರಕ್ಕಾಗಿ ಕಾಲಿವುಡ್ ನಿಂದ ಬಂದ ಸಾಕ್ಷಿ ಅಗರ್ವಾಲ್

ಕನ್ನಡ ಚಿತ್ರಕ್ಕಾಗಿ ಕಾಲಿವುಡ್ ನಿಂದ ಬಂದ ಸಾಕ್ಷಿ ಅಗರ್ವಾಲ್

Posted By:
Subscribe to Filmibeat Kannada

ಎರಡು ವರ್ಷಗಳ ಹಿಂದೆ ನವರಸ ನಾಯಕ ಜಗ್ಗೇಶ್ ಅಭಿನಯದ 'ಸಾಫ್ಟ್ ವೇರ್ ಗಂಡ' ಚಿತ್ರದಲ್ಲಿ ಅಭಿನಯಿಸಿದ್ದ ಕಾಲಿವುಡ್ ಬೆಡಗಿ ಸಾಕ್ಷಿ ಅಗರ್ವಾಲ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಅದು '19/11' ಎಂಬ ಚಿತ್ರದ ಮೂಲಕ.

'19/11' ಚಿತ್ರದ 'ನಾಜೂಕು ನಲ್ಲೆ... ನಾ ನಡೆಯ ಬಲ್ಲೆ' ಹಾಡಿಗೆ ಸಾಕ್ಷಿ ಅಗರ್ವಾಲ್ ಹೆಜ್ಜೆ ಹಾಕಿದ್ದಾರೆ. ರಾಘವೇಂದ್ರ ಕಾಮತ್ ಸಾಹಿತ್ಯ ಇರುವ 'ನಾಜೂಕು ನಲ್ಲೆ...' ಹಾಡಿನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ಧೂರಿ ಸೆಟ್ ನಲ್ಲಿ ನಡೆದಿದೆ.

In pics: Sakshi Agarwal in Kannada Movie 19/11

ಸಾಕ್ಷಿ ಅಗರ್ವಾಲ್ ಸೊಂಟ ಬಳುಕಿಸಿರುವ ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಭಿಲಾಶ್ ಮತ್ತು ಜೋಯಲ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಖ್ಯಾತ ಗಾಯಕಿ ವಸುಂಧರ ದಾಸ್ ದನಿಯಾಗಿದ್ದಾರೆ.

ಆರ್ಯನ್.ಎಂ.ಪ್ರತಾಪ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಶೇಕಡಾ ಐವತ್ತರಷ್ಟು ಚಿತ್ರೀಕರಣ ಮುಗಿದಿದೆ. ಮುಂದಿನ ಹಂತದ ಚಿತ್ರೀಕರಣ ಕುದುರೆಮುಖ, ಚಿಕ್ಕಮಗಳೂರು ಹಾಗೂ ಯೂರೋಪ್‍ನಲ್ಲಿ ನಡೆಯಲಿದೆ.

In pics: Sakshi Agarwal in Kannada Movie 19/11

ಈ ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಅಭಿಲಾಶ್ & ಜೋಯಲ್, ಲಯ ಕೋಕಿಲ ಹಾಗೂ ಲಿಜೊ ಜಸ್ ಸಂಗೀತ ನೀಡಿದ್ದಾರೆ. ರಾಘವೇಂದ್ರ ಕಾಮತ್, ಎ.ಆರ್.ಬಾಬು, ಆರ್ಯನ್ ಪ್ರತಾಪ್ '19/11' ಚಿತ್ರದ ಹಾಡುಗಳನ್ನು ಬರೆದಿದ್ದು, ಆಶಾ ಬೋಸ್ಲೆ, ವಸುಂಧರಾ ದಾಸ್, ಶಂಕರ್ ಮಹದೇವನ್, ಚಿತ್ರಾ, ವಿಜಯ ರಾಘವೇಂದ್ರ, ಚೇತನ್ ನಾಯಕ್, ಜೋಯಲ್ ಡುಬ್ಬಾ ಮತ್ತು ಆರ್ಯನ್ ಪ್ರತಾಪ್ ಹಾಡಿದ್ದಾರೆ.

In pics: Sakshi Agarwal in Kannada Movie 19/11

'19/11' ಚಿತ್ರದ ತಾರಾಬಳಗದಲ್ಲಿ ಪೂಜಾ ಲೋಕೇಶ್, ಸಾಕ್ಷಿ ಅಗರ್ವಾಲ್, ಕುಮಾರ್ ಗೋವಿಂದ್, ಲಯ ಕೋಕಿಲ, ಅಸ್ಮಯ್ ಶೆಟ್ಟಿ, ವಸಿಷ್ಟ, ಪಲ್ಲವಿ ನಾಯಕ್, ರಕ್ಷಕ್, ಟೆನ್ನಿಸ್ ಕೃಷ್ಣ, ಸಾಧುಕೋಕಿಲ, ಗಿರಿಜಾ ಲೋಕೇಶ್, ರವಿ ಕಾಳೆ, ಚಂದ್ರಶೇಖರ್, ಓಂ ತೇಜ್, ಮಂಜುನಾಥ್, ಸಂಜಯ್, ಮಾಸ್ಟರ್ ಅನುರಾಗ್ ಮುಂತಾದವರಿದ್ದಾರೆ.

English summary
Kollywood Actress Sakshi Agarwal in Kannada Movie 19/11. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada