»   » ಚಿತ್ರಗಳು ; ನಿಖಿಲ್ ಗ್ರ್ಯಾಂಡ್ ಎಂಟ್ರಿಗೆ ಸಾಕ್ಷಿಯಾದ ಗಣ್ಯರು

ಚಿತ್ರಗಳು ; ನಿಖಿಲ್ ಗ್ರ್ಯಾಂಡ್ ಎಂಟ್ರಿಗೆ ಸಾಕ್ಷಿಯಾದ ಗಣ್ಯರು

Posted By:
Subscribe to Filmibeat Kannada

ಬಹುಶಃ ಯಾವೊಬ್ಬ ಸ್ಟಾರ್ ಗಾಗಲಿ, ಸ್ಟಾರ್ ಪುತ್ರನಿಗಾಗಲಿ ಸಿಗದ ಗ್ರ್ಯಾಂಡ್ ಎಂಟ್ರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ ಸುಪುತ್ರ ನಿಖಿಲ್ ಕುಮಾರ್ ಗೆ ಸಿಕ್ಕಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.[ವಿಡಿಯೋ ; 'ಜಾಗ್ವಾರ್' ನಿಖಿಲ್ ತಯಾರಿ ಸೂಪರ್ರೋ ಸೂಪರ್.!]

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಜಾಗ್ವಾರ್' ಮುಹೂರ್ತ ನಿನ್ನೆ (ಡಿಸೆಂಬರ್ 16) ಅದ್ದೂರಿಯಾಗಿ ನೆರವೇರಿತು. [ಸ್ಯಾಂಡಲ್ ವುಡ್ ನ ಭರವಸೆಯ 'ಸ್ಟಾರ್' ನಿಖಿಲ್ ಕುಮಾರ್!]

ಯುವ ಪ್ರತಿಭೆ ನಿಖಿಲ್ ಕುಮಾರ್ ಗೆ ಶುಭ ಹಾರೈಸುವುದಕ್ಕೆ ಸ್ಯಾಂಡಲ್ ವುಡ್ ನ ಗಣ್ಯಾತಿಗಣ್ಯರೇ ಆಗಮಿಸಿದ್ದು ಕಾರ್ಯಕ್ರಮದ ವಿಶೇಷ. ಮುಂದೆ ಓದಿ....

ಸಂಭ್ರಮದಲ್ಲಿರುವ ಗೌಡರ ಕುಟುಂಬ

'ಜಾಗ್ವಾರ್' ಮುಹೂರ್ತ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರ್ ಸಂಭ್ರಮದಲ್ಲಿರುವ ಕ್ಷಣ.[ಹೀರೋ ಆದ ನಿಖಿಲ್; ಗೌಡರ ಮನೆಯಲ್ಲಿ ಭಿನ್ನಮತ!?]

ದಿಗ್ಗಜರ ಸಮ್ಮಿಲನ

ನಿಖಿಲ್ ಕುಮಾರ್ ರವರ ಚೊಚ್ಚಲ ಸಿನಿಮಾ 'ಜಾಗ್ವಾರ್' ಮುಹೂರ್ತ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟಿ ಜಯಮಾಲ, ಬಿ.ಸರೋಜ ದೇವಿ ಮತ್ತು ಜಯಂತಿ ಭಾಗಿಯಾದರು.[ಮಗನಿಗೆ ಮರುನಾಮಕರಣ ಮಾಡಿದ ಕುಮಾರಸ್ವಾಮಿ..!]

ಶಿವರಾಜ್ ಕುಮಾರ್ ಗೆ ಸನ್ಮಾನ

'ಜಾಗ್ವಾರ್' ಸಿನಿಮಾದ ಮುಹೂರ್ತ ಸಮಾರಂಭದ ಜೊತೆ ಜೊತೆಗೆ ಕನ್ನಡ ಚಿತ್ರರಂಗದ ದಿಗ್ಗಜರಿಗೆ ಸನ್ಮಾನ ಕೂಡ ಮಾಡಲಾಯ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಎಚ್.ಡಿ.ಕುಮಾರಸ್ವಾಮಿ ಸನ್ಮಾನ ಮಾಡಿದರು.['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

ರವಿಚಂದ್ರನ್ ಗೆ ಹಾಟ್ಸ್ ಆಫ್

ಕನ್ನಡ ಚಿತ್ರರಂಗದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಗೆ ಇದೇ ಸಂದರ್ಭದಲ್ಲಿ ಸನ್ಮಾನ ಮಾಡಲಾಯ್ತು.[ಯಾರ ಕೈಗೂ ಸಿಕ್ಕಲ್ಲವಂತೆ ಎಚ್.ಡಿ.ಕೆ ಪುತ್ರ ನಿಖಿಲ್!]

ಜಯಂತಿಗೆ ಸನ್ಮಾನ

ಹಿರಿಯ ನಟಿ ಜಯಂತಿಯವರಿಗೆ ಎಚ್.ಡಿ.ಕುಮಾರಸ್ವಾಮಿ ಕುಟುಂಬ ಸನ್ಮಾನಿಸಿತು.[ಡಾ.ರಾಜ್ ಕುಮಾರ್ ನನಗೆ ಸ್ಪೂರ್ತಿ - ನಿಖಿಲ್ ಗೌಡ]

'ಸೂರ್ಯವಂಶ' ನೆನೆದ ಭಾರತಿ ವಿಷ್ಣುವರ್ಧನ್

ಸನ್ಮಾನದ ಬಳಿಕ ''ಸೂರ್ಯವಂಶ' ಸಿನಿಮಾ ಮಾಡುವಾಗ ನಿಖಿಲ್ ಇನ್ನೂ ಚಿಕ್ಕ ಹುಡುಗ. ಈಗ ಹೀರೋ ಆಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ'' ಅಂತ ಭಾರತಿ ವಿಷ್ಣುವರ್ಧನ್ ಆಶೀರ್ವಾದ ಮಾಡಿದರು.

ಶ್ರೀನಾಥ್ ಗೆ ಸನ್ಮಾನ

ಹಿರಿಯ ನಟ ಶ್ರೀನಾಥ್ ರವರಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹಿರಿಯ ನಟಿ ಬಿ.ಸರೋಜ ದೇವಿ

ದಕ್ಷಿಣ ಭಾರತದ ಖ್ಯಾತ ನಟಿ ಬಿ.ಸರೋಜ ದೇವಿಯವರಿಗೆ ಎಚ್.ಡಿ.ಕುಮಾರಸ್ವಾಮಿ ಸನ್ಮಾನ ಮಾಡಿದರು.

ಸ್ಯಾಂಡಲ್ ವುಡ್ ನ ಹಲವರು ಭಾಗಿ

ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಮುನಿರತ್ನ, ಸಂಗೀತ ನಿರ್ದೇಶಕ ಗುರುಕಿರಣ್ 'ಜಾಗ್ವಾರ್' ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡರು.

ಅಂಬರೀಶ್ ಗೆ ಸನ್ಮಾನ

ರಾಜಕೀಯದಲ್ಲಿ ಬೇರೆ ಬೇರೆ ಪಕ್ಷದಲ್ಲಿದ್ದರೂ, ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಎಚ್.ಡಿ.ಕುಮಾರಸ್ವಾಮಿ ಆತ್ಮೀಯ ಗೆಳೆಯರು. ಬೆಸ್ಟ್ ಫ್ರೆಂಡ್ ಅಂಬಿಗೆ ನಿನ್ನೆ ಕುಮಾರಣ್ಣ ಸನ್ಮಾನ ಮಾಡಿದರು.

'ಹೀರೋ ಆಗು' ಅಂದಿದ್ದೆ!

''ನಮ್ಮ ಮನೆಗೆ ನಿಖಿಲ್ ಬಂದಿದ್ದಾಗ, ಹೀರೋ ಆಗು ಅಂತ ಹೇಳಿದ್ದೆ. ಇವತ್ತು ಯುವ ನಾಯಕ ನಿಖಿಲ್ ನೋಡಿ ಖುಷಿ ಆಗುತ್ತಿದೆ'' ಅಂತ 'ಜಾಗ್ವಾರ್' ಮುಹೂರ್ತ ಸಮಾರಂಭದಲ್ಲಿ ಅಂಬರೀಶ್ ಹೇಳಿದರು.

ಘಟಾನುಘಟಿಗಳ ಸಮ್ಮಿಲನ

'ಜಾಗ್ವಾರ್' ಮುಹೂರ್ತ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್, ಕನಸುಗಾರ ರವಿಚಂದ್ರನ್ ಮತ್ತು ಸಂಗೀತ ನಿರ್ದೇಶಕ ಹಂಸಲೇಖ.

ಅತ್ತೆ ಜೊತೆ ಸೊಸೆ

ನಿಖಿಲ್ ಕುಮಾರ್ ಭಾವಿ ಪತ್ನಿ ಸ್ವಾತಿ (ನಿರ್ಮಾಪಕ ಕೆ.ಸಿ.ಎನ್.ಮೋಹನ್ ಪುತ್ರಿ) ಜೊತೆ ಅತ್ತೆ ಅನಿತಾ ಕುಮಾರಸ್ವಾಮಿ ಮತ್ತು ಚೆನ್ನಮ್ಮ ದೇವೇಗೌಡ.

ಭಾವಿ ಅತ್ತೆ-ಮಾವ

'ಜಾಗ್ವಾರ್' ಮುಹೂರ್ತ ಸಮಾರಂಭದಲ್ಲಿ ನಿಖಿಲ್ ಕುಮಾರ್ ಭಾವಿ ಮಾವ ಕೆ.ಸಿ.ಎನ್.ಮೋಹನ್ ಮತ್ತು ಪತ್ನಿ.

ಆಲ್ ದಿ ಬೆಸ್ಟ್ ನಿಖಿಲ್!

ನವ ನಟ ನಿಖಿಲ್ ಕುಮಾರ್ ಗೆ ವಿಶ್ ಮಾಡುವುದಕ್ಕೆ ನಟಿ ಸುಧಾರಾಣಿ, ರಾಮಕೃಷ್ಣ ಮತ್ತು ಶ್ರೀನಾಥ್ ಆಗಮಿಸಿದ್ದರು.

ತಾರೆಯರ ದಂಡು

ನಿರ್ದೇಶಕ ಟಿ.ಎಸ್.ನಾಗಾಭರಣ, ಬರಗೂರು ರಾಮಚಂದ್ರಪ್ಪ, ಟಿ.ಎನ್.ಸೀತಾರಾಮ್, ನಿರ್ದೇಶಕ ಭಗವಾನ್ ಸೇರಿದಂತೆ ಹಲವು ತಾರೆಯರು 'ಜಾಗ್ವಾರ್' ಮುಹೂರ್ತಕ್ಕೆ ಸಾಕ್ಷಿಯಾದರು.

English summary
Nikhil Kumar, son of EX CM H.D.Kumaraswamy is making his debut in Sandalwood through 'Jaguar'. Kannada Actor Shiva Rajkumar, Ravichandran, Hamsalekha, Jayanthi, B.Saroja Devi and others witnessed the launch of Kannada Movie 'Jaguar'. Take a look at the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada