»   » ವೋಟ್ ಹಾಕಿ ಕರ್ತವ್ಯ ನಿರ್ವಹಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

ವೋಟ್ ಹಾಕಿ ಕರ್ತವ್ಯ ನಿರ್ವಹಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

Posted By:
Subscribe to Filmibeat Kannada

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಇಂದು ನಡೆದಿದೆ. ಬೆಂಗಳೂರಿನ 197 ವಾರ್ಡ್ ಗಳಲ್ಲಿ ಇಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಬೆಂಗಳೂರಿನ ವಿವಿಧ ವಾರ್ಡ್ ಗಳಲ್ಲಿ ಸ್ಯಾಂಡಲ್ ವುಡ್ ನ ತಾರೆಯರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಮತದಾನ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು, ಎಲ್ಲರಿಗೂ ತಪ್ಪದೇ ವೋಟ್ ಮಾಡುವಂತೆ ಕರೆ ನೀಡಿದರು. [ಚಿತ್ರಗಳು : ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದ ಗಣ್ಯರು]

ಎಡಗೈ ಹೆಬ್ಬೆರಳಿನ ಮೇಲೆ ನೀಲಿ ಶಾಹಿ ಹಾಕಿಸಿಕೊಂಡ ಸ್ಯಾಂಡಲ್ ವುಡ್ ಸ್ಟಾರ್ಸ್ ಹೆಮ್ಮೆಯಿಂದ ನೀಡಿರುವ ಪೋಸ್ ಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪತ್ನಿ ಪ್ರಿಯಾಂಕಾ ಜೊತೆ ಇಂದು ಮತದಾನ ಮಾಡಿದರು.

ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬೆಳ್ಳಂಬೆಳಗ್ಗೆಯೇ ಸದಾಶಿವನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ವೋಟ್ ಮಾಡಿದರು.

ರವಿಚಂದ್ರನ್

ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಇಂದು ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು. ಪ್ರಕಾಶ್ ನಗರ ವಾರ್ಡ್ ನ ಠಾಗೋರ್ ಇಂಗ್ಲೀಷ್ ಶಾಲೆಯಲ್ಲಿ ರವಿಚಂದ್ರನ್ ಮತದಾನ ಮಾಡಿದರು.

ಶ್ವೇತಾ ಶ್ರೀವಾತ್ವವ್

ಸ್ಯಾಂಡಲ್ ವುಡ್ ನ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಇಂದು ಎಲಚೇನಹಳ್ಳಿ ವಾರ್ಡ್ ನಲ್ಲಿ ಮತ ಹಾಕಿದರು.

ರಕ್ಷಿತಾ - ಪ್ರೇಮ್

ಬೆಂಗಳೂರಿನ ವಿಜಯನಗರದಲ್ಲಿ ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ತಮ್ಮ ಹಕ್ಕು ಚಲಾವಣೆ ಮಾಡಿದರು.

ಮೇಘನಾ ರಾಜ್

ತಾಯಿ ಪ್ರಮೀಳಾ ಜೋಷಾಯಿ ಜೊತೆ ನಟಿ ಮೇಘನಾ ರಾಜ್ ಬೆಂಗಳೂರಿನ ಸಾರಕ್ಕಿ ವಾರ್ಡ್ ನಲ್ಲಿ ಮತ ಹಾಕಿದರು.

ಚೇತನ್ ಚಂದ್ರ

ರಾಜರಾಜೇಶ್ವರಿ ನಗರ ವಾರ್ಡ್ ನಂ 160 ರಲ್ಲಿ ಚೇತನ್ ಚಂದ್ರ ಮತ್ತು ಕುಟುಂಬ ತಮ್ಮ ಹಕ್ಕು ಚಲಾವಣೆ ಮಾಡಿದರು.

ಹರಿಪ್ರಿಯಾ

ರಾಜರಾಜೇಶ್ವರಿ ನಗರದ ವಾರ್ಡ್ ನಂ 38 ರಲ್ಲಿ ನಟಿ ಹರಿಪ್ರಿಯಾ ಮತದಾನ ಮಾಡಿದರು.

ತಾರಾ

ನಟಿ ಹಾಗು ಎಂ.ಎಲ್.ಸಿ ತಾರಾ ಕೂಡ ಇಂದು ಮತದಾನ ಮಾಡಿದರು.

ಮಾಳವಿಕ - ಅವಿನಾಶ್

ರಾಜರಾಜೇಶ್ವರಿ ನಗರದ ಮತಗಟ್ಟೆಯಲ್ಲಿ ನಟಿ ಮಾಳವಿಕಾ ಮತ್ತು ಅವರ ಪತಿ ನಟ ಅವಿನಾಶ್ ತಮ್ಮ ಹಕ್ಕು ಚಲಾವಣೆ ಮಾಡಿದರು.

ಸಂಯುಕ್ತ ಹೊರನಾಡು

ನಟಿ ಸಂಯುಕ್ತ ಹೊರನಾಡು ಅವರು ಬಿಬಿಎಂಪಿ ಚುನಾವಣೆಯಲ್ಲಿ ವೋಟ್ ಮಾಡಿದ್ದಾರೆ.

English summary
Kannada Actor Puneeth Rajkumar, Upendra, V.Ravichandran and other stars of Sandalwood casted their vote for BBMP Election 2015 today (Aug 22nd). Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada