»   » ಚಿತ್ರಗಳು: ಅದ್ದೂರಿಯಾಗಿ ನೆರವೇರಿದ 'ಶಿವಲಿಂಗ' ಶತಕ ಸಂಭ್ರಮಾಚರಣೆ

ಚಿತ್ರಗಳು: ಅದ್ದೂರಿಯಾಗಿ ನೆರವೇರಿದ 'ಶಿವಲಿಂಗ' ಶತಕ ಸಂಭ್ರಮಾಚರಣೆ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ.ವಾಸು ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಶಿವಲಿಂಗ' ಸಿನಿಮಾ 100 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಿನ್ನೆ (ಜೂನ್ 19) ಅದ್ದೂರಿ ಸಮಾರಂಭವನ್ನು ಏರ್ಪಾಡು ಮಾಡಲಾಗಿತ್ತು.

ಈ ಸಂಭ್ರಮದ ಸಮಾರಂಭಕ್ಕೆ ಟಾಲಿವುಡ್ ನ ಖ್ಯಾತ ನಟ ಬಾಲಕೃಷ್ಣ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು ವಿಶೇಷವಾಗಿತ್ತು. ತೆಲುಗು ನಟ ಬಾಲಕೃಷ್ಣ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಎಲ್ಲರೂ ಶಿಳ್ಳೆ ಚಪ್ಪಾಳೆ ತಟ್ಟುವ ಮೂಲಕ ಬಹಳ ಸಂಭ್ರಮದಿಂದಲೇ ಸ್ವಾಗತಿಸಿದರು.[ಜಗ್ಗೇಶ್, ಕಿಚ್ಚ, ಶಿವಣ್ಣಗೆ ಯಾರನ್ನ ಕಂಡ್ರೆ 'ಆಗಲ್ಲಾಂತ' ನಿಮಗ್ಗೊತ್ತಾ?]


In Pics: Shiva Rajkumar's 'Shivalinga' 100 days celebrations

ಇನ್ನು ಒಂದೇ ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತೆಲುಗು ನಟ ಬಾಲಕೃಷ್ಣ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಗಮ ಇಡೀ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ತಂದಿತ್ತು.


ಟಾಲಿವುಡ್ ನಟ ಬಾಲಕೃಷ್ಣ ಅವರು ಈ ಮೊದಲು ರೆಬೆಲ್ ಸ್ಟಾರ್ ಅಂಬರೀಶ್ ಅವರ 60ನೇ ಹುಟ್ಟುಹಬ್ಬ ಸಮಾರಂಭಕ್ಕೆ ಆಗಮಿಸಿದ ಬಳಿಕ ಸ್ಯಾಂಡಲ್ ವುಡ್ ನ ಯಾವುದೇ ಸಭೆ-ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.[ಅದ್ದೂರಿಯಾಗಿ ಜರುಗಲಿದೆ 'ಶಿವಲಿಂಗ' ಶತದಿನೋತ್ಸವ ಸಮಾರಂಭ]


ಇದೀಗ ಶಿವಣ್ಣ ಅವರ 'ಶಿವಲಿಂಗ' 100ರ ಸಂಭ್ರಮದ ಸಮಾರಂಭಕ್ಕೆ ಬಾಲಕೃಷ್ಣ ಅವರು ತಮ್ಮ 100ನೇ ಸಿನಿಮಾ 'ಗೌತಮಿಪುತ್ರ ಶಾತಕರ್ಣಿ'ಯ ಗೆಟಪ್ ನಲ್ಲಿಯೇ ಆಗಮಿಸಿ ಎಲ್ಲರ ಗಮನ ಸೆಳೆದರು.


In Pics: Shiva Rajkumar's 'Shivalinga' 100 days celebrations

ಈ ಸುಂದರ ಸಮಾರಂಭದಲ್ಲಿ 'ಶಿವಲಿಂಗ' ಚಿತ್ರಕ್ಕೆ ದುಡಿದ ಸಹ ಕಲಾವಿದರು ಮತ್ತು ತಂತ್ರಜ್ಞರನ್ನು ಸನ್ಮಾನ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ನಟ ಬಾಲಕೃಷ್ಣ ಮತ್ತು ಅಂಬರೀಶ್ ಅವರು ಎಲ್ಲರಿಗೂ ಗೌರವ ಸಲ್ಲಿಸಿದರು.


ತದನಂತರ ವಿಶೇಷವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಭರ್ತಿ 30 ವರ್ಷ ಆದ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ದಂಪತಿಗಳಿಗೆ ಕಿರೀಟ ತೊಡಿಸಿ, ಶಾಲು ಹೊದೆಸಿ, ಹಾರ ಹಾಕಿ, ಫಲಪುಷ್ಪದೊಂದಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನ ಮಾಡಲಾಯಿತು.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]


ಈ ವಿಶೇಷ ಕಾರ್ಯಕ್ರಮಕ್ಕೆ ನಿರ್ದೇಶಕ ಪಿ.ವಾಸು ಹಾಗೂ ಅವರ ಮಗ ನಟ ಶಕ್ತಿ, ನಟಿ ವೇದಿಕಾ, ನಿರ್ಮಾಪಕ ಕೆ.ಎ ಸುರೇಶ್, ವಿಜಯ ರಾಘವೇಂದ್ರ, ನಟಿ ವಿನಯ ಪ್ರಸಾದ್, ವೈಶಾಲಿ ಕಾಸರವಳ್ಳಿ ಮುಂತಾದವರು ಹಾಜರಿರುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದರು. (ಸಮಾರಂಭದ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ)..


-ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ನಟ ಬಾಲಕೃಷ್ಣ

-ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ನಟ ಬಾಲಕೃಷ್ಣ

-ಸೆಂಚುರಿ ಸ್ಟಾರ್ ಶಿವಣ್ಣ, ನಟ ಬಾಲಕೃಷ್ಣ ರೆಬೆಲ್ ಸ್ಟಾರ್ ಅಂಬರೀಶ್

-ಸೆಂಚುರಿ ಸ್ಟಾರ್ ಶಿವಣ್ಣ, ನಟ ಬಾಲಕೃಷ್ಣ ರೆಬೆಲ್ ಸ್ಟಾರ್ ಅಂಬರೀಶ್

-
-
-
-
-
-
-
-
-
-
-
English summary
Kannada Actor Shivarajakumar starrer 'Shivalinga' has completed 100 days. Now team 'Shivalinga' celebrated the success on the 19th June at Town hall Bangalore. The movie is produced by Suresh and directed P Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada