»   » ಡಾ.ದಿಲೀಪ್, ನಿರುಪಮಾ ಸಪ್ತಪದಿ ತುಳಿದ ಚಿತ್ರಗಳು

ಡಾ.ದಿಲೀಪ್, ನಿರುಪಮಾ ಸಪ್ತಪದಿ ತುಳಿದ ಚಿತ್ರಗಳು

Posted By:
Subscribe to Filmibeat Kannada

ಡಾ.ರಾಜ್ ಮುದ್ದಿನ ಮೊಮ್ಮಗಳು ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಜೇಷ್ಠ ಪುತ್ರಿ ಡಾ.ನಿರುಪಮಾ ಅವರ ವಿವಾಹವು ಅವರ ಗೆಳೆಯ ಡಾ.ದಿಲೀಪ್ ಅವರೊಂದಿಗೆ ನಿನ್ನೆ (ಆಗಸ್ಟ್ 31) ಬೆಳಗ್ಗೆ 9.30ರ ಶುಭ ಮುಹೂರ್ತದಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನೆರವೇರಿದೆ.

ಇನ್ನೂ ವರ ಡಾ.ದಿಲೀಪ್ ಅವರು ಮುತ್ತಣ್ಣನ ಪುತ್ರಿ ನಿರುಪಮಾ ಅವರಿಗೆ ತಾಳಿ ಕಟ್ಟುವ ಮೂಲಕ ನಿರುಪಮಾ ಅವರನ್ನು ಏಳೇಳು ಜನ್ಮದಲ್ಲೂ ನಿನ್ನ ಹೆಜ್ಜೆಗೆ ಸೇರಿಸಿ ನಾನೂ ನಡೆಯುವೆ ಎಂದು ಸಪ್ತಪದಿ ತುಳಿದು ಶಾಸ್ತ್ರ ಸಂಪ್ರದಾಯ ಬದ್ಧವಾಗಿ ಎಲ್ಲಾ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ.[ಮುತ್ತಣ್ಣನ ಮಗಳ ಆರತಕ್ಷತೆಯ ಅದ್ಧೂರಿ ಸಮಾರಂಭ]

ಸುಮಾರು ಲಕ್ಷಕ್ಕೂ ಮಿಕ್ಕಿ ಹಾಜರಿದ್ದ ಅಭಿಮಾನಿಗಳು ಹಾಗೂ ಚಿತ್ರರಂಗದ ದಿಗ್ಗಜರು, ರಾಜಕೀಯ ನಾಯಕರು ಸೇರಿದಂತೆ ಅನೇಕ ಗಣ್ಯಾತೀತರ ದಂಡು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗು ಗೀತಾ ದಂಪತಿಗಳ ಪುತ್ರಿ ಡಾ.ನಿರುಪಮಾ ಅವರ ಮದುವೆಗೆ ಸಾಕ್ಷಿಯಾದರು.[ದೊಡ್ಮನೆ ಮದುವೆ ಸಂಭ್ರಮದ ಚಿತ್ರಗಳು]

ಇನ್ನೂ ಮದುವೆ ಸಮಾರಂಭದಲ್ಲಿ ಡಾ.ರಾಜ್ ಕುಟುಂಬದವರ ಸಡಗರ ಸಂಭ್ರಮದ ಝಲಕ್ ಕಣ್ತುಂಬಿಕೊಳ್ಳಲು ಹಾಗೂ ನಿರುಪಮಾ ಅವರು ದಿಲೀಪ್ ಅವರ ಕೈ ಹಿಡಿದು ಸಪ್ತಪದಿ ತುಳಿದ ಪರಿಯ ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

ತಾಳಿ ಕಟ್ಟುವ ಶುಭ ವೇಳೆ

ವರ ಡಾ.ದಿಲೀಪ್ ಅವರು ಶುಭ ಗಳಿಗೆಯಲ್ಲಿ ಮುತ್ತಣ್ಣನ ಜೇಷ್ಠ ಪುತ್ರಿ ಡಾ.ನಿರುಪಮಾ ಅವರ ಕತ್ತಿಗೆ ತಾಳಿ ಕಟ್ಟುವ ಮೂಲಕ ತಮ್ಮ ಪತ್ನಿಯಾಗಿ ಸ್ವೀಕರಿಸಿದರು. (ಚಿತ್ರ ಕೃಪೆ: shivannamagalamaduve.com)[ಶಿವರಾಜ್ ಕುಮಾರ್ ಮಗಳ ಅದ್ದೂರಿ ರಿಸೆಪ್ಷನ್ ನೋಡಿ]

ಸಪ್ತಪದಿ ಇದು ಸಪ್ತಪದಿ

ತಾಳಿ ಕಟ್ಟಿದ ನಂತರ ನೂತನ ವಧು-ವರರು ಸಪ್ತಪದಿ ತುಳಿಯುವ ಮೂಲಕ ಏಳು ಹೆಜ್ಜೆಗಳ ಸಂಬಂಧ ಬೆಸೆಯುವುದು ಅನುಬಂಧ (ಚಿತ್ರ ಕೃಪೆ: shivannamagalamaduve.com)

ಸಪ್ತಪದಿ ತುಳಿದ ಮದುಮಗಳು ನಿರುಪಮಾ ಮದುಮಗ ದಿಲೀಪ್

ಏಳೇಳು ಜನ್ಮದ ಸಂಬಂಧ ಬೆಸೆಯುವ ಸಪ್ತಪದಿ ತುಳಿದ ವಧು-ವರರು ಏಳೇಳು ಜನ್ಮದಲ್ಲೂ ಒಂದಾಗಿ ನಡೆಯುವೆವು ಎಂದು ಶಾಸ್ತ್ರೋಕ್ತವಾಗಿ ಕಾರ್ಯಗಳನ್ನು ನೆರವೇರಿಸಿದರು. (ಚಿತ್ರ ಕೃಪೆ: shivannamagalamaduve.com)

ಸುಂದರ ಮೊಗದ ಚೆಲುವೆ

ಮದು ಮಗಳು ನಿರುಪಮಾ ಅವರ ಮುದ್ದು ಮುಖದಲ್ಲಿ ನಾಚಿಕೆಯಿಂದ ಕೂಡಿದ ಸುಂದರವಾದ ನಗು ನೋಡಿರೋ (ಚಿತ್ರ ಕೃಪೆ: shivannamagalamaduve.com)

ವಧು ಡಾ.ನಿರುಪಮಾ-ವರ ಡಾ.ದಿಲೀಪ್

ವಧು-ವರರು ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯ ಹಾಗೂ ಶಾಸ್ತ್ರಕ್ಕೆ ಅನುಗುಣವಾಗಿ ಸಪ್ತಪದಿ ತುಳಿದು ಮದುವೆಯ ಕಾರ್ಯ ಪೂರ್ಣಗೊಳಿಸಿದರು. (ಚಿತ್ರ ಕೃಪೆ: shivannamagalamaduve.com)

ನಮ್ಮ ಸಂಸಾರ ಆನಂದ ಸಾಗರ

ದೊಡ್ಮನೆಯ ಮುದ್ದಿನ ಮೊಮ್ಮಗಳ ಮದುವೆಯ ಸಂಭ್ರಮದಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ತುಂಬಿದ ಕೂಡು ಕುಟಂಬದ ಅಂದ ಚೆಂದ ನೋಡಿ. (ಚಿತ್ರ ಕೃಪೆ: shivannamagalamaduve.com)

ದೊಡ್ಮನೆ ಹುಡುಗರು

ದೊಡ್ಮನೆ ಮೊಮ್ಮಗಳ ಮದುವೆಯ ಸಡಗರದಲ್ಲಿ ನಮ್ಮ ದೊಡ್ಮನೆ ಹುಡುಗರ ಸಂಭ್ರಮ. ಬಿಳಿ ಪಂಚೆ, ಬಿಳಿ ಶರಟು, ಬಿಳಿ ಶಾಲಿನಲ್ಲಿ ಹುಡುಗರು ಕಂಗೊಳಿಸಿದ ಪರಿ (ಚಿತ್ರ ಕೃಪೆ: ಚಂದನ್ ಗೌಡ)

    English summary
    Kannada Actor Shivarajkumar Daughter Dr.Nirupama has tied knot with Dr.Dileep yesterday (August 31st) in Palace Grounds, Bengaluru. In Pics.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada