»   » ಗಾಂಧಿನಗರದ ಅಚ್ಚರಿ.! ಲೀಲಾವತಿ ಮನೆಯಲ್ಲಿ ಶಿವರಾಜ್ ಕುಮಾರ್

ಗಾಂಧಿನಗರದ ಅಚ್ಚರಿ.! ಲೀಲಾವತಿ ಮನೆಯಲ್ಲಿ ಶಿವರಾಜ್ ಕುಮಾರ್

By: ಹರಾ
Subscribe to Filmibeat Kannada

ಗಾಂಧಿನಗರದಲ್ಲಿ ಅಂತೆ-ಕಂತೆಗಳಿಗೇನು ಕಮ್ಮಿಯಿಲ್ಲ. 'ಅವರಿಗೆ ಇವರನ್ನ ಕಂಡರೆ ಆಗೋಲ್ಲ, ಇವರಿಗೆ ಮತ್ತೊಬ್ಬರನ್ನ ಕಂಡರೆ ಆಗೋಲ್ಲ' ಅಂತ ಒಬ್ಬರ ಕಾಲನ್ನ ಇನ್ನೊಬ್ಬರು ಎಳೆಯುವವರೇ ಹೆಚ್ಚು.

ಸುದೀಪ್ ಮತ್ತು ಶಿವರಾಜ್ ಕುಮಾರ್ ನಡುವೆ ಯಾರು ಕಿಚ್ಚು ಹಚ್ಚಿದರೋ, ಅದು ಹತ್ತಿ ಉರಿಯಿತೋ ಇಲ್ವೋ, ಅಣ್ಣಾವ್ರ ಮಗ ಶಿವಣ್ಣ ಮತ್ತು ಸುದೀಪ್ ಮಾತ್ರ ಒಂದಾಗಿದ್ದಾರೆ. ಎಲ್ಲೇ ಮುಖಾಮುಖಿ ಆದರೂ ಖುಷಿಯಿಂದ ಮಾತನಾಡುತ್ತಾರೆ. [ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ]

ಹಾಗೇ, ಲೀಲಾವತಿ ಮತ್ತು ಡಾ.ರಾಜ್ ಕುಮಾರ್ ಕುಟುಂಬದ ನಡುವೆ ಇರುವ ಒಡಕು-ಒಗ್ಗಟ್ಟಿನ ಬಗ್ಗೆ ಗಾಂಧಿನಗರದಲ್ಲಿ ತಲೆಗೊಂದು ಮಾತನಾಡುವವರಿದ್ದಾರೆ.

ಆದ್ರೆ, ಸ್ನೇಹಜೀವಿ ಆಗಿರುವ ಶಿವರಾಜ್ ಕುಮಾರ್ ಮಾತ್ರ ಇದುವರೆಗೂ ಯಾರೊಂದಿಗೂ ದ್ವೇಷ ಕಟ್ಟಿಕೊಂಡಿಲ್ಲ. ಅದಕ್ಕೆ ಸಾಕ್ಷಿ ಇಲ್ಲಿದೆ. ಮುಂದೆ ಓದಿ....

ಲೀಲಾವತಿ ಮನೆಗೆ ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಲೀಲಾವತಿ ಪುತ್ರ ವಿನೋದ್ ರಾಜ್ ಜೊತೆ ಕೆಲ ಸಮಯ ಖುಷಿಯಿಂದ ಕಳೆದಿದ್ದಾರೆ.

ಪುತ್ರಿ ಮದುವೆಗೆ ಆಹ್ವಾನ

ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ರನ್ನ ತಮ್ಮ ಮಗಳ ಮದುವೆಗೆ ಶಿವರಾಜ್ ಕುಮಾರ್ ಮತ್ತು ದಂಪತಿ ಆಹ್ವಾನಿಸಿದ್ದಾರೆ.

ಸಂತಸ ಪಟ್ಟ ವಿನೋದ್ ರಾಜ್-ಲೀಲಾವತಿ

ಶಿವರಾಜ್ ಕುಮಾರ್ ಮತ್ತು ಕುಟುಂಬ ತಮ್ಮ ಮನೆಗೆ ಭೇಟಿ ಕೊಟ್ಟು, ಕೆಲ ಕಾಲ ಹರಟಿದಕ್ಕೆ ಲೀಲಾವತಿ ಮತ್ತು ವಿನೋದ್ ರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಬರ್ತಾರೆ ಲೀಲಾವತಿ

ಶಿವರಾಜ್ ಕುಮಾರ್ ಅವರ ಪುತ್ರಿಯ ಮದುವೆಗೆ ಖಂಡಿತ ಬರುವುದಾಗಿ ಲೀಲಾವತಿ ತಿಳಿಸಿದ್ದಾರೆ. [ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ!]

ಆಗಸ್ಟ್ 30-31 ರಂದು ಮದುವೆ

ಆಗಸ್ಟ್ 30 ಮತ್ತು 31 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುದ್ದಿನ ಮಗಳು ಡಾ.ನಿರುಪಮಾ ಅವರ ವಿವಾಹ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಮದುವೆಗೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನ ದಿಗ್ಗಜರೆಲ್ಲರಿಗೆ ಶಿವಣ್ಣ ಆಮಂತ್ರಣ ನೀಡುತ್ತಿದ್ದಾರೆ.

ಎಲ್ಲಾ ವಿವಾದಗಳಿಗೂ ಬ್ರೇಕ್

ಇವರು-ಅವರು ಅಂತ ಭೇದಭಾವ ಮಾಡದೆ, ತಮ್ಮ ಮಗಳ ಮದುವೆಗೆ ಚಿತ್ರರಂಗದ ಎಲ್ಲಾ ಗಣ್ಯರನ್ನೂ ಶಿವಣ್ಣ ಆಹ್ವಾನಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸುದೀಪ್ ಮನೆಗೂ ಭೇಟಿ ಕೊಟ್ಟಿದ್ದ ಶಿವಣ್ಣ ದಂಪತಿ, ತಮ್ಮ ಹಾಗು ಸುದೀಪ್ ನಡುವೆ ಎದ್ದಿದ್ದ ಎಲ್ಲಾ ಅಂತೆ-ಕಂತೆಗಳ ಪುರಾಣಕ್ಕೆ ಫುಲ್ ಸ್ಟಾಪ್ ಇಟ್ಟಿತ್ತು.

English summary
Kannada Actor Shivarajkumar, Veteran Actress Leelavathi and Vinod Raj snapped together in Leelavathi's house recently. Shivarajkumar was in Leelavathi's house to invite for his Daughter Nirupama's marriage.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada