»   » ನಟಿಯರ ಕಾರ್ ಕ್ರೇಜ್: ದಸರಾ ವಿಶೇಷ ಮನೆಗೆ ಬಂತು ಕಾಸ್ಟ್ಲೀ ಕಾರ್ ಗಳು

ನಟಿಯರ ಕಾರ್ ಕ್ರೇಜ್: ದಸರಾ ವಿಶೇಷ ಮನೆಗೆ ಬಂತು ಕಾಸ್ಟ್ಲೀ ಕಾರ್ ಗಳು

Posted By:
Subscribe to Filmibeat Kannada

ದಸರಾ ಹಬ್ಬದ ತಯಾರಿಯಲ್ಲಿರುವ ಸಿನಿಮಾ ನಟಿಯರು ತಮ್ಮ ಮನೆಗೆ ಹೊಸ ಹೊಸ ಅತಿಥಿಗಳನ್ನ ಬರಮಾಡಿಕೊಂಡಿದ್ದಾರೆ. ತಾವು ಕನಸು ಕಂಡಂತೆ, ತಾವು ಇಷ್ಟ ಪಟ್ಟಂತ ವಸ್ತುಗಳನ್ನ ಖರೀದಿ ಮಾಡುತ್ತಿದ್ದಾರೆ.

ಅದರಲ್ಲೂ, ಸೆಂಪ್ಟೆಂಬರ್ ತಿಂಗಳಲ್ಲಿ ಕನ್ನಡ, ತೆಲುಗು ಹಾಗೂ ಹಿಂದಿಯ ಬಹುತೇಕ ನಟಿಯರು ಕಾಸ್ಟ್ಲೀ ಕಾರ್ ಗಳನ್ನ ಖರೀದಿಸಿದ್ದಾರೆ.

ಅಮೂಲ್ಯ, ಕೃತಿ ಕರಬಂಧ, ಪ್ರಣೀತಾ, ರಕುಲ್ ಪ್ರೀತ್ ಸಿಂಗ್, ಪೂಜಾ ಹೆಗಡೆ ಸೇರಿದಂತೆ ಹಲವು ನಟಿಯರು ಹೊಸ ಕಾರ್ ನ್ನ ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ. ಹಾಗಿದ್ರೆ, ಯಾವ ನಟಿಯ ಬಳಿ ಯಾವ ಕಾರ್ ಇದೆ ಅಂತ ಮುಂದೆ ನೋಡಿ.....

ಕೃತಿ ಕರಬಂಧ

'ಚಿರು' ಚಿತ್ರದ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ 'ಗೂಗ್ಲಿ' ಹಾಕಿ, ಈಗ ಬಾಲಿವುಡ್ ಸೇರಿದಂತೆ ಬಹುಭಾಷಾ ನಟಿಯಾಗಿರುವ ಕೃತಿ ಕರಬಂಧ ಇತ್ತೀಚೆಗಷ್ಟೇ 'ಹುಂಡಾಯ್ ಕಂಪನಿ'ಯ ಬಿಳಿ ಬಣ್ಣದ ಹೊಸ ಕಾರ್ ಖರೀದಿಸಿದ್ದಾರೆ.

ಊರ್ವಶಿ ರೌಟೇಲಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ ಐರಾವತ ಚಿತ್ರದಲ್ಲಿ ನಾಯಕಿಯಾಗಿದ್ದ ಊರ್ವಶಿ ರೌಟೇಲಾ ಅವರ ಮನೆಗೆ ರೇಂಜ್ ರೋವರ್ (range rover) ಬಂದಿದೆ. ಹೊಸ ಕಾರಿಗೆ ಅವರ ತಾಯಿ ಪೂಜೆ ಮಾಡಿಸುತ್ತಿರುವ ಫೋಟೋವನ್ನ ನಟಿ ಊರ್ವಶಿ ಹಂಚಿಕೊಂಡಿದ್ದಾರೆ.

ದರ್ಶನ್ ಜೊತೆ ಕಾಣಿಸಿಕೊಂಡಿದ್ದ ಈ ನಟಿ ಹಾಲಿವುಡ್ ಚಿತ್ರವನ್ನೇ ರಿಜೆಕ್ಟ್ ಮಾಡಿದ್ದಾರೆ!

ಪೂಜಾ ಹೆಗಡೆ

'ಮೊಹೆಂಜೊದಾರೋ' ಚಿತ್ರದ ಮೂಲಕ ಹೃತಿಕ್ ಜೋಡಿಯಾಗಿ, ತಮಿಳು ಮತ್ತು ತೆಲುಗಿನಲ್ಲಿ ಖ್ಯಾತಿ ಗಳಿಸಿಕೊಂಡಿರು ಪೂಜಾ ಹೆಗಡೆ ತಮ್ಮ ಕನಸಿನ 'BMW' ಕಾರ್ ಖರೀದಿಸಿ ಸಂಭ್ರಮಿಸಿದ್ದಾರೆ.

ರಕುಲ್ ಪ್ರೀತ್ ಸಿಂಗ್

ಕನ್ನಡದ 'ಗಿಲ್ಲಿ' ಮೂಲಕ ಸಿನಿವೃತ್ತಿ ಆರಂಭಿಸಿದ್ದ ರಕುಲ್ ಪ್ರೀತ್ ಸಿಂಗ್ ಈಗ ದಕ್ಷಿಣದ ಬಹುಬೇಡಿಕೆಯ ನಟಿ. ಯಶಸ್ಸಿನ ಉತ್ತುಂಗದಲ್ಲಿರುವ ರಕುಲ್ 'ಮರ್ಸಿಡಿಸ್ ಬೆಂಜ್' ಕಾರ್ ನ್ನ ಖರೀದಿಸಿ ಖುಷಿ ಹಂಚಿಕೊಂಡಿದ್ದಾರೆ.

ಪ್ರಣೀತಾ ಸುಭಾಷ್

ಪೊರ್ಕಿ', 'ಬ್ರಹ್ಮ', 'ಜಗ್ಗು ದಾದಾ', 'ಮಾಸ್ ಲೀಡರ್' ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಪ್ರಣೀತಾ ಸುಭಾಸ್ ಮನೆಗೆ ಹೊಸ ಕಾರು ಬಂದು ನಿಂತಿದೆ. ಕನ್ನಡ ಮಾತ್ರವಲ್ಲದೇ ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ ನಲ್ಲಿಯೂ ಜನಪ್ರಿಯತೆ ಗಳಿಸಿರುವ ನಟಿ ಪ್ರಣೀತಾ ಸುಭಾಷ್ ಕೆಂಪು ಹಾಗೂ ಕಪ್ಪು ಬಣ್ಣ ಮಿಶ್ರಿತ 'ಮಿನಿ ಕೂಪರ್' ಕಾರು ಖರೀದಿಸಿದ್ದಾರೆ.

ಅಮೂಲ್ಯ

ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ 'ಚೆಲುವಿನ ಚಿತ್ತಾರ'ದ ಹುಡುಗಿ ಅಮೂಲ್ಯ ಅವರಿಗೆ ಪತಿ ಜಗದೀಶ್ ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಕಾರನ್ನ (Mercedes Benz) ಗಿಫ್ಟ್ ಕೊಟ್ಟಿದ್ದಾರೆ.

ಅಮೂಲ್ಯ ಹುಟ್ಟುಹಬ್ಬಕ್ಕೆ ಪತಿ ಜಗದೀಶ್ ಕೊಟ್ಟ ದುಬಾರಿ ಗಿಫ್ಟ್!

English summary
We all know about how actors love for luxurious cars. Here’s a look at actresses and the expensive cars they own

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada