»   » ಚಿತ್ರಗಳು: ಆರ್ಮಿ ಲುಕ್ ನಲ್ಲಿ 'ಹೆಬ್ಬುಲಿ' ಸುದೀಪ್ ಗತ್ತು

ಚಿತ್ರಗಳು: ಆರ್ಮಿ ಲುಕ್ ನಲ್ಲಿ 'ಹೆಬ್ಬುಲಿ' ಸುದೀಪ್ ಗತ್ತು

Posted By:
Subscribe to Filmibeat Kannada

ಎಲ್ಲರ ಮೆಚ್ಚಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 2' ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ ಮತ್ತೊಂದು ಸಿನಿಮಾ ದಾಖಲೆ ಮಾಡಲು ತಯಾರಾಗಿದೆ.

ಸುದೀಪ್ ಅವರು ಖಡಕ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಹೆಬ್ಬುಲಿ' ಚಿತ್ರ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಗಳಿಂದ ನಿರೀಕ್ಷೆ ಮೂಡಿಸುತ್ತಿರುವ ಈ ಚಿತ್ರ ಮೇಕಿಂಗ್ ನಿಂದಲೂ ಕುತೂಹಲ ಕೆರಳಿಸುತ್ತಿದೆ.[ಟೀಸರ್: ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ಕ ಸ್ಪೆಷಲ್ ಗಿಫ್ಟ್ ಇದು]


'ಹೆಬ್ಬುಲಿ' ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಬಹುತೇಕ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಇದೀಗ 'ಹೆಬ್ಬುಲಿ' ಶೂಟಿಂಗ್ ಸೆಟ್ ನಿಂದ ಕೆಲವು ಫೋಟೋಗಳು ಲಭ್ಯವಾಗಿದ್ದು, ಸುದೀಪ್ ಅವರು ಆರ್ಮಿ ಆಫೀಸರ್ ಆಗಿ ಖಡಕ್ ಲುಕ್ ನಲ್ಲಿ ಯಾವ ರೀತಿ ಕಾಣಿಸುತ್ತಿದ್ದಾರೆ, ನೋಡಲು ಮುಂದೆ ಓದಿ...


ಆರ್ಮಿ ಅಧಿಕಾರಿ ಲುಕ್ ನಲ್ಲಿ ಸುದೀಪ್

ಗತ್ತಿನಿಂದ ಮೀಸೆ ತಿರುವಿ ಲುಕ್ ಕೊಟ್ಟಿರುವ 'ಹೆಬ್ಬುಲಿ' ಕಿಚ್ಚ ಸುದೀಪ್ ಅವರು. ಸದಾ ಹೊಸತನದ ಪಾತ್ರಗಳಿಗೆ ಮಣೆ ಹಾಕುವ ಸುದೀಪ್. ಈ ಚಿತ್ರದಲ್ಲೂ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.['ಹೆಬ್ಬುಲಿ' ಸ್ಟೈಲ್ ಮಾಡಿಕೊಂಡ 'ಈ' ಪೋರ ಖ್ಯಾತ ನಟರೊಬ್ಬರ ಮಗ]


ಕಾಶ್ಮೀರದಲ್ಲಿ 10 ದಿನಗಳ ಶೂಟಿಂಗ್

ಈಗಾಗಲೇ ಕಾಶ್ಮೀರದಲ್ಲಿ ಸುಮಾರು 10 ದಿನಗಳ ಕಾಲ ಶೂಟಿಂಗ್ ನಡೆಸಿ ವಾಪಸಾಗಿರುವ ಚಿತ್ರತಂಡ, ಅಲ್ಲಿ ಯುದ್ಧದ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ.[ಕಿಚ್ಚನ 'ಹೆಬ್ಬುಲಿ' ಶೂಟಿಂಗ್ ಗೆ ಮೈಸೂರಿನಲ್ಲಿ ತಡೆ]


ನಟಿ ಅಮಲಾ ಪೌಲ್

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರು ಇದೇ ಮೊದಲ ಬಾರಿಗೆ ನಟ ಸುದೀಪ್ ಅವರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. 'ಹೆಬ್ಬುಲಿ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ, ಅಮಲಾ ಪೌಲ್ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳ ಬಂದಿದ್ದಾರೆ.[ಶೂಟಿಂಗ್ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡಿದ ಕಿಚ್ಚನ 'ಹೆಬ್ಬುಲಿ']


ಸುದೀಪ್ ಸ್ಟೈಲಿಷ್ ಹೇರ್ ಸ್ಟೈಲ್

ವಿಶೇಷವಾಗಿ ಈ ಚಿತ್ರಕ್ಕೆ ನಟ ಸುದೀಪ್ ಅವರು ತಮ್ಮ ಕೇಶ ವಿನ್ಯಾಸವನ್ನು ಬದಲಾಯಿಸಿಕೊಂಡಿದ್ದು, ಸಖತ್ ಟ್ರೆಂಡಿಯಾಗಿದೆ. ['ಹೆಬ್ಬುಲಿ' ಕಿಚ್ಚನ ಮತ್ತೊಂದು ಶಿಕಾರಿ ಕಬೀರ್ ದುಹಾನ್]


ಕುದುರೆ ಸವಾರಿ ಮಾಡಿದ ಸುದೀಪ್

ನಟ ಸುದೀಪ್ ಅವರು ಈ ಚಿತ್ರದಲ್ಲಿ ಕುದುರೆ ಸವಾರಿ ಮಾಡಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.


ಅಸಲಿ ಆರ್ಮಿ ಆಫೀಸರ್ ಜೊತೆ ನಕಲಿ ಆಫೀಸರ್

ಕಾಶ್ಮೀರದಲ್ಲಿ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಟ ಸುದೀಪ್ ಅವರು, ನಮ್ಮ ಗಡಿ ಕಾಯುತ್ತಿರುವ ಅಸಲಿ ಮಿಲಿಟರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ನಿರ್ದೇಶಕ ಕೃಷ್ಣ ಮತ್ತು ಕಾಮಿಡಿ ನಟ ಚಿಕ್ಕಣ್ಣ ಅವರು ಹಾಜರಿದ್ದರು.


ಕಿಚನ್ ನಲ್ಲಿ ಕಿಚ್ಚನ ಕಮಾಲ್

ಕಾಶ್ಮೀರದಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ನಟ ಸುದೀಪ್ ಅವರು, ಇಡೀ ಚಿತ್ರತಂಡದವರಿಗೆ ತಾವೇ ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ.


English summary
Check out the shooting pics of Kannada Actor Sudeep and Actress Amala Paul starrer 'Hebbuli'. The movie is directed by S.Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada