For Quick Alerts
  ALLOW NOTIFICATIONS  
  For Daily Alerts

  ಎಕ್ಸ್ ಕ್ಲೂಸಿವ್: 'ಕೋಟಿಗೊಬ್ಬ-2' ಚಿತ್ರದ ಬೊಂಬಾಟ್ ಫೋಟೋಗಳು

  By Harshitha
  |

  'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರದ ಬಗ್ಗೆ ಖಾಸ್ ಖಬರ್ ನೀಡುವಲ್ಲಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಸದಾ ಮುಂದು.

  ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆದಿರುವ 'ಕೋಟಿಗೊಬ್ಬ-2' ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ ಅಂತ ಮೊನ್ನೆಯಷ್ಟೇ ನಾವೇ ವರದಿ ಮಾಡಿದ್ವಿ. ಈಗ 'ಕೋಟಿಗೊಬ್ಬ-2' ಅಡ್ಡದಿಂದ 'ಫ್ರೆಶ್' ಫೋಟೋಗಳನ್ನ ನಿಮಗಾಗಿ ಹೊತ್ತು ತಂದಿದ್ದೀವಿ, ನೋಡಿ....

  ಇತ್ತೀಚೆಗಷ್ಟೇ 'ಕೋಟಿಗೊಬ್ಬ-2' ಚಿತ್ರದ ರೋಮ್ಯಾಂಟಿಕ್ ಹಾಡಿನ ಚಿತ್ರೀಕರಣ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದಿತ್ತು. ಆ ಹಾಡು ಎಷ್ಟು ಕಲರ್ ಫುಲ್ ಆಗಿ ಮೂಡಿಬಂದಿದೆ ಎಂಬುದಕ್ಕೆ ಈ ಫೋಟೋಗಳೇ ಸಾಕ್ಷಿ.

  ಮುದ್ದು ಮುದ್ದಾಗಿರುವ ನಿತ್ಯಾ ಮೆನನ್, ಕಿಚ್ಚ ಸುದೀಪ್ ಗೆ ಬೆಸ್ಟ್ ಜೋಡಿ ಎನ್ನುವುದಕ್ಕೆ ಈ ಫೋಟೋಗಳಿಗಿಂತ ಉತ್ತಮ ಉದಾಹರಣೆ ಬೇಕಾ.?

  ನಿರ್ದೇಶಕ ಕಮ್ ನೃತ್ಯ ಸಂಯೋಜಕ ಎ.ಹರ್ಷ ಕೊರಿಯೋಗ್ರಫಿಯಲ್ಲಿ ಈ ಡ್ಯುಯೆಟ್ ಹಾಡು ಮೂಡಿಬಂದಿದೆ. ಡಾ.ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯಕ್ಕೆ ಡಿ.ಇಮಾಮ್ ಟ್ಯೂನ್ ಮಾಡಿದ್ದಾರೆ. [ಸುದೀಪ್ ಜೊತೆ ರೋಮ್ಯಾಂಟಿಕ್ ಗುಂಗಿನಲ್ಲಿ ನಿತ್ಯಾ ಮೆನನ್]

  ಹಾಗ್ನೋಡಿದ್ರೆ, 'ಕೋಟಿಗೊಬ್ಬ-2' ಚಿತ್ರದಲ್ಲಿ ಒಮ್ಮೆ ಡಾನ್ ಆಗಿ, ಇನ್ನೊಮ್ಮೆ ಸೀದಾ ಸಾದಾ ಹುಡುಗನಾಗಿ, ಮತ್ತೊಮ್ಮೆ ಸ್ಟೈಲಿಶ್ ಆಗಿ ಕಿಚ್ಚ ಸುದೀಪ್ ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ದ್ವಿಭಾಷೆಯಲ್ಲಿ ತಯಾರಾಗಿರುವ ಈ ಚಿತ್ರ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಹೆಸರಲ್ಲಿ ತೆರೆಗೆ ಬರಲಿದೆ. [ಜುಲೈನಲ್ಲಿ 'ಕೋಟಿಗೊಬ್ಬ 2' ನೋಡೋಕೆ ನೀವ್ ರೆಡಿನಾ?]

  ಸೂಪರ್ ಸ್ಟಾರ್ ರಜನಿಕಾಂತ್ ಗೆ ಅನೇಕ್ ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕ ಕೆ.ಎಸ್.ರವಿಕುಮಾರ್ 'ಕೋಟಿಗೊಬ್ಬ-2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡಿಗ ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ.

  'ಕೋಟಿಗೊಬ್ಬ-2' ಚಿತ್ರದ ಬಗ್ಗೆ ಇನ್ನೂ ಇಂಟ್ರೆಸ್ಟಿಂಗ್ ಸಂಗತಿಗಳನ್ನ ನಿಮಗೆ ಹೇಳುವುದು ಬಾಕಿ ಇದೆ. ಎಲ್ಲವನ್ನ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನಿರೀಕ್ಷಿಸಿ....

  English summary
  Kiccha Sudeep and Nithya Menon has shot romantic duet number for 'Kotigobba-2', directed by K.S.Ravikumar. Check out the colourful pictures of the song shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X