»   » ಯುಗಾದಿ ಹಬ್ಬದ ಶುಭ ಸಂದರ್ಭದಂದು ನೆರವೇರಿತು 'ಪೈಲ್ವಾನ್' ಮುಹೂರ್ತ

ಯುಗಾದಿ ಹಬ್ಬದ ಶುಭ ಸಂದರ್ಭದಂದು ನೆರವೇರಿತು 'ಪೈಲ್ವಾನ್' ಮುಹೂರ್ತ

Posted By:
Subscribe to Filmibeat Kannada
ಯುಗಾದಿ ಹಬ್ಬದ ದಿನ ನೆರವೇರಿತು 'ಪೈಲ್ವಾನ್' ಮುಹೂರ್ತ | Filmibeat Kannada

ಕಿಚ್ಚ ಸುದೀಪ್ ಅಭಿನಯದ ಹೊಸ ಚಿತ್ರಕ್ಕೆ ಯುಗಾದಿ ಹಬ್ಬದಂದೇ ಓಂಕಾರ ಬಿದ್ದಿದೆ. 'ಹೆಬ್ಬುಲಿ' ಬಳಿಕ ಸುದೀಪ್ ಹಾಗೂ ಕೃಷ್ಣ ಒಂದಾಗಿರುವುದು 'ಪೈಲ್ವಾನ್'ಗಾಗಿ. 'ಪೈಲ್ವಾನ್' ಚಿತ್ರದ ಮುಹೂರ್ತ ನಿನ್ನೆ ಅಂದ್ರೆ ಯುಗಾದಿ ಹಬ್ಬದ ಶುಭ ಸಂದರ್ಭದಂದು ನೆರವೇರಿತು.

ಬೆಂಗಳೂರಿನ ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 'ಪೈಲ್ವಾನ್' ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. 'ಪೈಲ್ವಾನ್' ಚಿತ್ರದ ಮುಹೂರ್ತದ ಶಾಟ್ ಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಕ್ಲಾಪ್ ಮಾಡಿದರು. ನಿರ್ಮಾಪಕಿ ಸ್ವಪ್ನ ಕೃಷ್ಣ ಕ್ಯಾಮರಾ ಸ್ವಿಚ್ ಆನ್ ಮಾಡಿದರು.

'ಪೈಲ್ವಾನ್' ಚಿತ್ರದ ಮುಹೂರ್ತ ನಿನ್ನೆ ಮುಗಿದಿದೆ. ಆದ್ರೆ, ಚಿತ್ರೀಕರಣ ಶುರುವಾಗುವುದು ಏಪ್ರಿಲ್ ತಿಂಗಳಿನಲ್ಲಿ. ಸಿನಿಮಾದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿರುವ ಸುದೀಪ್, ಬಾಕ್ಸಿಂಗ್ ಟ್ರೇನಿಂಗ್ ಪಡೆದುಕೊಳ್ಳುತ್ತಿದ್ದಾರೆ.

In pics: Sudeep starrer Phailwan muhoortha

ಕಿಚ್ಚ ಸುದೀಪ್ ಈಗ ಕಟ್ಟು ಮಸ್ತಾದ ಪೈಲ್ವಾನ್

ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಚಿತ್ರಕ್ಕಾಗಿ ಸುದೀಪ್ ಮೇಕ್ ಓವರ್ ಮಾಡಿಕೊಂಡಿದ್ದರು. ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದರು. ಈಗ 'ಪೈಲ್ವಾನ್' ಆಗಲು ಸುದೀಪ್ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ.

In pics: Sudeep starrer Phailwan muhoortha

ಈಗಾಗಲೇ ಥೈಲ್ಯಾಂಡ್ ಗೂ ಹೋಗಿ ಬಾಕ್ಸಿಂಗ್ ಕಲಿತು ಬಂದಿರುವ ಸುದೀಪ್, ಏಪ್ರಿಲ್ ನಿಂದ 'ಪೈಲ್ವಾನ್' ಸೆಟ್ ಗೆ ಹಾಜರ್ ಆಗಲಿದ್ದಾರೆ. 'ಗಜಕೇಸರಿ', 'ಹೆಬ್ಬುಲಿ' ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣ, 'ಪೈಲ್ವಾನ್'ಗೆ ಡೈರೆಕ್ಟರ್. ಕೃಷ್ಣ ಪತ್ನಿ ಸ್ವಪ್ನ ಕೃಷ್ಣ ಈ ಚಿತ್ರದ ನಿರ್ಮಾಪಕಿ. 'ಹೆಬ್ಬುಲಿ' ಚಿತ್ರದಲ್ಲಿದ ತಂಡವೇ 'ಪೈಲ್ವಾನ್' ಚಿತ್ರದಲ್ಲೂ ಕೆಲಸ ಮಾಡಲಿದೆ.

English summary
Kannada Actor Kiccha Sudeep starrer 'Phailwan' muhoortha was held at Sri Ramanjaneyaswamy Temple, Bengaluru on March 18th, 2018.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X