»   » ಉಪೇಂದ್ರ ಮತ್ತು ನಟಿ ಪ್ರೇಮ ಕುರಿತ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ.!

ಉಪೇಂದ್ರ ಮತ್ತು ನಟಿ ಪ್ರೇಮ ಕುರಿತ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ.!

Posted By:
Subscribe to Filmibeat Kannada

ಚಂದನವನದ 'ಚೆಲ್ವಿ', ಕೊಡಗಿನ ಕುವರಿ, ನಟಿ ಪ್ರೇಮ ದಾಂಪತ್ಯ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ವರದಿ ಆಗಿತ್ತು.

ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ನೊಂದಿದ್ದ ನಟಿ ಪ್ರೇಮ, ಬಣ್ಣದ ಬದುಕಿಗೆ ವಾಪಸ್ ಬರಲು ತಯಾರಿ ನಡೆಸುತ್ತಿರುವ ಬಗ್ಗೆ ಕೂಡ ನಾವೇ ನಿಮಗೆ ತಿಳಿಸಿದ್ವಿ. [ನಟಿ 'ಪ್ರೇಮ' ಸಂಸಾರ 'ಜೀವನ'ದಲ್ಲಿ ಬಿರುಕು! ಅಸಲಿ ಕಾರಣವೇನು?]

ಕಂಪ್ಲೀಟ್ ಮೇಕ್ ಓವರ್ ಮಾಡಿಕೊಂಡು ಚೆಲುವಾದ ಫೋಟೋ ಶೂಟ್ ಮಾಡಿಸಿದ್ದ ನಟಿ ಪ್ರೇಮ, ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಕೂಡ ಇಂಗಿತ ವ್ಯಕ್ತಪಡಿಸಿದ್ದರು.

ನಟಿ ಪ್ರೇಮ ಆಸೆ ಇದೀಗ ಈಡೇರಿದೆ. ನಟಿ ಪ್ರೇಮ ಬಣ್ಣ ಹಚ್ಚಿ ಹಳೇ ಟ್ರ್ಯಾಕ್ ಗೆ ಮರಳಿದ್ದಾರೆ. ಅದರ ಎಕ್ಸ್ ಕ್ಲೂಸಿವ್ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಮುಂದೆ ಓದಿ.....

ಅಭಿನಯ ಆರಂಭಿಸಿದ ನಟಿ ಪ್ರೇಮ.!

2009 ರಲ್ಲಿ ತೆರೆಕಂಡ 'ಶಿಶಿರ' ಚಿತ್ರದಲ್ಲಿ ನಟಿ ಪ್ರೇಮ ಅಭಿನಯಿಸಿದ್ದರು. ಅದಾದ ಬಳಿಕ ಗಾಂಧಿನಗರದ ಕಡೆ ನಟಿ ಪ್ರೇಮ ಮುಖ ಮಾಡಿರ್ಲಿಲ್ಲ. ಕೆಲ ತಿಂಗಳುಗಳ ಹಿಂದೆಯಷ್ಟೇ ಫೋಟೋಶೂಟ್ ಒಂದರಲ್ಲಿ ಮಿಂಚಿದ್ದ ನಟಿ ಪ್ರೇಮ ಈಗ ಉಪೇಂದ್ರ ಜೊತೆ ಅಭಿನಯಿಸುತ್ತಿದ್ದಾರೆ. ಆ ಎಕ್ಸ್ ಕ್ಲೂಸಿವ್ ಫೋಟೋ ನೋಡಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿ ಪ್ರೇಮ.!

ಉಪೇಂದ್ರ ಅಭಿನಯಿಸುತ್ತಿರುವ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದಲ್ಲಿ ನಟಿ ಪ್ರೇಮ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಅಡ್ಡದಲ್ಲಿ ಕ್ಲಿಕ್ ಆಗಿರುವ ಫೋಟೋ ಇದು. [ಉಪೇಂದ್ರಗೆ 'H2O' ಕುಡಿಸಿದವರು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟರೆ.?]

ಲಕಲಕ ಹೊಳೆಯುತ್ತಿರುವ ನಟಿ ಪ್ರೇಮ

'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಶೂಟಿಂಗ್ ಸ್ಪಾಟ್ ನಲ್ಲಿ ಗೋಲ್ಡನ್ ಮತ್ತು ಹಸಿರು ಬಣ್ಣದ ಸೀರೆ ತೊಟ್ಟು ನಟಿ ಪ್ರೇಮ ಲಕಲಕ ಹೊಳೆಯುತ್ತಿದ್ದರು. [ಉಪ್ಪಿಗೆ ಮತ್ತೆ ಹುಟ್ಟಿ ಬಾ ಅಂತ ಪತ್ರ ಬರೆದಿದ್ದು ಪ್ರೇಮಾ ಅವರಾ?]

17 ವರ್ಷಗಳ ಬಳಿಕ ಉಪ್ಪಿ ಜೊತೆ ಪ್ರೇಮ

1999 ರಲ್ಲಿ ತೆರೆಕಂಡ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ 'ಉಪೇಂದ್ರ' ಸಿನಿಮಾದಲ್ಲಿ ಉಪ್ಪಿ ಜೊತೆ 'ಏನಿಲ್ಲ, ಏನಿಲ್ಲ' ಅಂತ ಹಾಡಿದ್ದ ನಟಿ ಪ್ರೇಮ ಈಗ ಬರೋಬ್ಬರಿ 17 ವರ್ಷಗಳ ನಂತರ ಅದೇ ಉಪ್ಪಿ ಜೊತೆ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ['ಉಪೇಂದ್ರ' ಮತ್ತೆ ಹುಟ್ಟಿ ಬರ್ಬೇಕಂತೆ.! ಇದು 'ಪ್ರೇಮ' ಬಯಕೆ.!]

ಪ್ರೇಮಗೆ ಬ್ರೇಕ್ ಕೊಟ್ಟಿದ್ದು ಇದೇ ಉಪ್ಪಿ.!

ಸ್ಯಾಂಡಲ್ ವುಡ್ ನಲ್ಲಿ ನಟಿ ಪ್ರೇಮ ಭದ್ರವಾಗಿ ನೆಲೆಯೂರಲು ಕಾರಣವಾಗಿದ್ದು ಇದೇ ಉಪೇಂದ್ರ ನಿರ್ದೇಶನದ 'ಓಂ' ಸಿನಿಮಾ.

ಒಂದು ದಶಕ ಸ್ಯಾಂಡಲ್ ವುಡ್ ಆಳಿದ ಚೆಲುವೆ

ಉಪೇಂದ್ರ ಆಕ್ಷನ್ ಕಟ್ ಹೇಳಿದ್ದ 'ಓಂ' ಸಿನಿಮಾ ಸೂಪರ್ ಹಿಟ್ ಆದ್ಮೇಲೆ ನಟಿ ಪ್ರೇಮ ಹಿಂದಿರುಗಿ ನೋಡಲೇ ಇಲ್ಲ. ಬರೋಬ್ಬರಿ ಒಂದು ದಶಕದ ಕಾಲ ಕನ್ನಡ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮೆರೆದ ನಟಿ ಪ್ರೇಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.

ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಏಳು ವರ್ಷಗಳ ಲಾಂಗ್ ಗ್ಯಾಪ್ ನಂತರ ನಟಿ ಪ್ರೇಮ ಈಗ ಕನ್ನಡ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಪ್ರೇಮಗೆ ಮತ್ತೊಂದು ಬಾರಿ ಬ್ರೇಕ್ ನೀಡ್ತಾರಾ ಉಪ್ಪಿ.?

ಕಾಕತಾಳೀಯ ಎನ್ನುವಂತೆ, ಕನ್ನಡ ಚಿತ್ರರಂಗದಲ್ಲಿ ನಟಿ ಪ್ರೇಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವುದು ಉಪೇಂದ್ರ ರವರ ಚಿತ್ರದ ಮೂಲಕವೇ.

'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದ ಕುರಿತು...

ತೆಲುಗಿನಲ್ಲಿ ನಾಗಾರ್ಜುನ ಅಭಿನಯದ 'ಸೊಗ್ಗಾಡೆ ಚಿನ್ನಿ ನಾಯನ' ಚಿತ್ರದ ರೀಮೇಕ್ ಈ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ'. ದ್ವಿಪಾತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದರೆ, ಸಿನಿಮಾದಲ್ಲಿ ಉಪೇಂದ್ರ ಪತ್ನಿಯಾಗಿ (ತೆಲುಗಿನಲ್ಲಿ ರಮ್ಯಾಕೃಷ್ಣ ಪೋಷಿಸಿದ ಪಾತ್ರ) ಪ್ರೇಮ ಕಾಣಿಸಿಕೊಳ್ಳುತ್ತಿದ್ದಾರೆ.

ಹರ್ಷಿಕಾ ಪೂಣಚ್ಚ ಕೂಡ ಇದ್ದಾರೆ.!

'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದ ವಿಶೇಷ ಪಾತ್ರವೊಂದರಲ್ಲಿ ನಟಿ ಹರ್ಷಿಕಾ ಪೂಣಚ್ಚ ಕೂಡ ಇದ್ದಾರೆ. [ಉಪ್ಪಿ ಕೈಯಿಂದ ಗೋರಂಟಿ ಹಾಕಿಸಿಕೊಳ್ಳಲಿರುವ ಹರ್ಷಿಕಾ ಪೂಣಚ್ಚ]

ಶೃತಿ ಹರಿಹರನ್ ಗೂ ಪ್ರಮುಖ ಪಾತ್ರ

ನಟಿ ಶೃತಿ ಹರಿಹರನ್ ಕೂಡ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಉಪೇಂದ್ರ ರವರ 'H20' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಎನ್.ಲೋಕನಾಥ್ ಈಗ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಸಿನಿಮಾದ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.

English summary
Kannada Actress Prema is back into acting with Real Star Upendra starrer 'Upendra Matte Hutti Baa, Inti Prema'. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada