Just In
Don't Miss!
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- News
ಶಿವಮೊಗ್ಗದಲ್ಲಿ ಭಾರೀ ಸ್ಫೋಟ; ಸಿಬಿಐ ತನಿಖೆ ಇಲ್ಲ
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರಪುಟ; ಸ್ಯಾಂಡಲ್ ವುಡ್ ನಲ್ಲಿ ವಿಜಯಲಕ್ಷ್ಮಿ ಸಿಂಗ್ ಮಕ್ಕಳ 'ಯಾನ'
ನಟಿಯಾಗಿ, ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಸಿಂಗ್ ಇದೀಗ 'ಯಾನ' ಚಿತ್ರದ ಮೂಲಕ ತಮ್ಮ ಮೂವರು ಪುತ್ರಿಯರಿಗೆ ಆಕ್ಷನ್ ಕಟ್ ಹೇಳುವ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.
'ಯಾನ' ಚಿತ್ರದ ಮೂಲಕ ವಿಜಯಲಕ್ಷ್ಮಿ ಸಿಂಗ್ - ಜೈ ಜಗದೀಶ್ ದಂಪತಿಯ ಮೂವರು ಮುದ್ದಿನ ಹೆಣ್ಮಕ್ಕಳು ಕನ್ನಡ ಚಿತ್ರರಂಗಕ್ಕೆ 'ನಾಯಕಿ'ಯರಾಗಿ ಪರಿಚಯವಾಗುತ್ತಿದ್ದಾರೆ.
ಹಾಗ್ನೋಡಿದ್ರೆ, ವಿಜಯಲಕ್ಷ್ಮಿ ಸಿಂಗ್ - ಜೈ ಜಗದೀಶ್ ದಂಪತಿಯ ಮಕ್ಕಳಾದ ವೈಭವಿ, ವೈನಿಧಿ, ವೈಸಿರಿ ಬಣ್ಣ ಹಚ್ಚುತ್ತಿರುವುದು ಇದೇ ಮೊದಲೇನಲ್ಲ.
ನಿಮಗೆ ಗೊತ್ತಿದೆಯೋ, ಇಲ್ವೋ...ವಿಜಯಲಕ್ಷ್ಮಿ ಸಿಂಗ್ ಸಹೋದರ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಕೋತಿಗಳು ಸಾರ್ ಕೋತಿಗಳು' ಹಾಗೂ 'ಕತ್ತೆಗಳು ಸಾರ್ ಕತ್ತೆಗಳು' ಚಿತ್ರದಲ್ಲಿ ವೈಭವಿ, ವೈನಿಧಿ ಮತ್ತು ವೈಸಿರಿ ಅಭಿನಯಿಸಿದ್ದಾರೆ. [3 ಮಗಳಂದಿರ ಜೊತೆ ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಹೊಸ ಮ್ಯಾಜಿಕ್]
ಅಂದು ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಮೂವರು ಇದೀಗ 'ನಾಯಕಿ'ಯರಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 'ಕನ್ನಡ ನಾಯಕಿ'ಯರ ಕೊರತೆ ಇದೆ ಅಂತಾರೆ. ಹೀಗಿರುವಾಗ, ನಮ್ಮದೇ ನೆಲದ ಪ್ರತಿಭೆಗಳು ಈಗ ನಮ್ಮ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾ ಕುಟುಂಬದಲ್ಲೇ ಹುಟ್ಟಿ ಬೆಳೆದಿರುವ ವೈಭವಿ, ವೈನಿಧಿ ಮತ್ತು ವೈಸಿರಿಗೆ ನಟನೆ ಅಷ್ಟು ಕಷ್ಟದ ಕೆಲಸ ಅಲ್ಲವೇ ಅಲ್ಲ.
ಅದ್ರಲ್ಲೂ, ಅವರ 'ಯಾನ' ಚಿತ್ರಕ್ಕೆ ಅಮ್ಮ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವುದರಿಂದ ಪ್ರ'ಯಾನ' ಸುಖಕರವಾಗಿರುವುದರಲ್ಲಿ ಅನುಮಾನವೇ ಇಲ್ಲ.
'ಯಾನ' ಚಿತ್ರಕ್ಕಾಗಿ ವೈಭವಿ, ವೈನಿಧಿ ಮತ್ತು ವೈಸಿರಿ ಮಾಡಿಸಿರುವ ಹೊಸ ಫೋಟೋಶೂಟ್ ನ ಚಿತ್ರಗಳು ಇಲ್ಲಿವೆ. ಕೆಳಗಿರುವ ಗ್ಯಾಲರಿಯಲ್ಲಿ ನೋಡಿ.....