»   » ಚಿತ್ರಗಳು: ನಟ ವಿಕ್ರಮ್ ಪುತ್ರಿ ಅಕ್ಷಿತಾ ಗೆ ಚೆನ್ನೈನಲ್ಲಿ ಅದ್ದೂರಿ ನಿಶ್ಚಿತಾರ್ಥ

ಚಿತ್ರಗಳು: ನಟ ವಿಕ್ರಮ್ ಪುತ್ರಿ ಅಕ್ಷಿತಾ ಗೆ ಚೆನ್ನೈನಲ್ಲಿ ಅದ್ದೂರಿ ನಿಶ್ಚಿತಾರ್ಥ

Posted By:
Subscribe to Filmibeat Kannada

ತಮಿಳು ಸಿನಿ ಅಂಗಳದ ಬೆಳ್ಳಿ ಪರದೆ ಮೇಲೆ ಇನ್ನೂ ನಟಿಯರ ಜೊತೆ ಡ್ಯುಯೆಟ್ ಹಾಡುವ ಹ್ಯಾಂಡ್ಸಮ್ ನಟ ವಿಕ್ರಮ್, ವೈಯುಕ್ತಿಕ ಬದುಕಿನಲ್ಲಿ 'ಮಾವ'ನ ಪೋಸ್ಟ್ ಗೆ ಪ್ರಮೋಟ್ ಆಗಲಿದ್ದಾರೆ.

ಹೌದು, ವಿಕ್ರಮ್ ಗೆ ಮದುವೆ ವಯಸ್ಸಿಗೆ ಬಂದಿರುವ ಮಗಳಿದ್ದಾಳೆ. ಅದಾಗಲೇ, ಮಗಳ ನಿಶ್ಚಿತಾರ್ಥ ಕಾರ್ಯವನ್ನೂ ಸದ್ದಿಲ್ಲದೇ ವಿಕ್ರಮ್ ನೆರವೇರಿಸಿಕೊಟ್ಟಿದ್ದಾರೆ.

in-pics-vikram-s-daughter-akshita-gets-engaged-022015

ಡಿ.ಎಂ.ಕೆ ನಾಯಕ ಕರುಣಾನಿಧಿ ರವರ ಮರಿ ಮೊಮ್ಮಗ, 'ಕೆವಿನ್ ಕೇರ್' ಮಾಲೀಕ ರಂಗನಾಥನ್ ರವರ ಪುತ್ರ ಮನು ರಂಜಿತ್ ಜೊತೆ ನಟ ವಿಕ್ರಮ್ ಪುತ್ರಿ ಅಕ್ಷಿತಾ ನಿಶ್ಚಿತಾರ್ಥ ಕಳೆದ ಭಾನುವಾರ ಚೆನ್ನೈನಲ್ಲಿ ನಡೆದಿದೆ. [ವಿಕ್ರಮ್ ಸಂಭಾವನೆಯ ಅರ್ಧ ಮೊತ್ತ ಸೇರಿದ್ದು ಯಾರಿಗೆ?]

ಹಾಗ್ನೋಡಿದ್ರೆ, ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವರ್ಷಗಳಿಂದ ಪ್ರೀತಿಸುತ್ತಿದ್ದ ಅಕ್ಷಿತಾ ಹಾಗೂ ಮನು ರಂಜಿತ್ ಇದೀಗ ಹಿರಿಯರ ಸಮ್ಮತಿ ಮೇರೆಗೆ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ. [ಬೆಂಗಳೂರಲ್ಲಿ 'ಐ' ಅಚ್ಚರಿ ಸಂಗತಿಗಳನ್ನು ಬಿಚ್ಚಿಟ್ಟ ವಿಕ್ರಮ್]

1992 ರಲ್ಲಿ ಶೈಲಜಾ ಬಾಲಕೃಷ್ಣನ್ ರವರನ್ನ ವಿವಾಹವಾಗಿದ್ದ ವಿಕ್ರಮ್ ಗೆ ಅಕ್ಷಿತಾ ಜೊತೆ ಧ್ರುವ್ ಎಂಬ ಮಗನಿದ್ದಾನೆ.

-
-
-
-
-
-
-
-
-
English summary
Tamil Actor Vikram's daughter Akshita has got engaged to Manu Ranjith, son of entrepreneur Ranganathan of Cavin Kare.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada