»   » ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು

ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಅತ್ಯಂತ ಸುಂದರವಾದ ಜೋಡಿ (ತೆರೆಯ ಮೇಲೂ, ತೆರೆಯ ಹಿಂದೆ ಕೂಡ) ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಿನ್ಸಸ್ ರಾಧಿಕಾ ಪಂಡಿತ್, ಕೊನೆಗೂ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಮಾಡಿಕೊಂಡು ಅನಗತ್ಯವಾಗಿ ವಟಗುಟ್ಟುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

ಯಶ್ ಮತ್ತು ರಾಧಿಕಾ ಪಂಡಿತ್ ನಡುವೆ ಸುಮಾರು 5 ವರ್ಷಗಳಿಂದ ತೆರೆಯ ಹಿಂದೆ ನಡೆಯುತ್ತಿದ್ದ ಕುಛ್-ಕುಛ್ ಗೆ ನಿಶ್ಚಿತಾರ್ಥದ ಮೂಲಕ ಪೂರ್ತಿ ಬ್ರೇಕ್ ಬಿದ್ದಿದೆ. ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಇಡೀ ಅಭಿಮಾನಿಗಳ ಎದುರು ಯಶ್-ರಾಧಿಕಾ ಪಂಡಿತ್ ಸಪ್ತಪದಿ ತುಳಿಯಲಿದ್ದಾರೆ.[ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

ಅಂದಹಾಗೆ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಮಾತು ಕೊಟ್ಟಂತೆ, ನಿಶ್ಚಿತಾರ್ಥ ಮುಗಿಸಿದ ಮೂರೇ ದಿನಗಳಲ್ಲಿ ಬೆಂಗಳೂರಿಗೆ ವಾಪಸ್ ಬಂದು ಸುದ್ದಿಗೋಷ್ಠಿ ಮಾಡುವ ಮೂಲಕ ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ನಿಶ್ಚಿತಾರ್ಥದ ಫೋಟೋ ಆಲ್ಬಂಗಳನ್ನು ನೀಡಿದ್ದಾರೆ.

ಜೊತೆಗೆ ಗೋವಾದಲ್ಲಿ ಎಲ್ಲರನ್ನೂ ಬಿಟ್ಟು ನಿಶ್ಚಿತಾರ್ಥ ಮಾಡಿಕೊಂಡ ಕಾರಣವನ್ನು ಯಶ್ ಅವರು ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ.

ಇದೀಗ ಬರೀ ಸಿನಿಮಾದಲ್ಲಿ ಮಾತ್ರವಲ್ಲದೇ, ನಿಜ ಜೀವನದಲ್ಲೂ, ಸದ್ಯದಲ್ಲೇ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಆಗಲಿರುವ ಯಶ್ ಮತ್ತು ರಾಧಿಕಾ ಪಂಡಿತ್ ಅವರ, ನಿಶ್ಚಿತಾರ್ಥದ ಕಲರ್ ಫುಲ್ ಫೋಟೋ ಆಲ್ಬಂ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

ರಾಕಿಂಗ್ ಸ್ಟಾರ್ ಯಶ್

ತಮ್ಮ ಅತ್ತೆ-ಮಾವನ (ರಾಧಿಕಾ ಪಂಡಿತ್ ತಂದೆ-ತಾಯಿ) ಜೊತೆ ನಡೆದು ಬಂದ ಯಶ್.[ನಿಶ್ಚಿತಾರ್ಥ ಮಾಡಿಕೊಳ್ಳುವುದೇ ಉಂಟಂತೆ: ಕಾಗೆ ಹಾರಿಸಿದ್ದು ಯಾಕೆ?]

ಪ್ರಿನ್ಸಸ್ ರಾಧಿಕಾ ಪಂಡಿತ್

ಮೂಗುತಿ ಕೈಯಲ್ಲಿ ಹಿಡಿದು ಪೋಸ್ ಕೊಟ್ಟ ಚೆಂದುಳ್ಳಿ ಚೆಲುವೆ ರಾಧಿಕಾ ಪಂಡಿತ್.[ಮದುವೆ ನಂತರ ನಟಿ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಗುಡ್ ಬೈ.?]

ನವಜೋಡಿ

ಸುತ್ತಮುತ್ತಲಿನ ಪ್ರಪಂಚದ ಪರಿವೇ ಇಲ್ಲದೆ ಮುಖ-ಮುಖ ನೋಡುವುದರಲ್ಲೇ ಬಿಜಿಯಾದ ನವಜೋಡಿ ಯಶ್ ಮತ್ತು ರಾಧಿಕಾ ಪಂಡಿತ್.[ಮಾಧ್ಯಮಗಳ ಮುಂದೆ ಪ್ರೇಮ ಪುರಾಣ ಬಾಯ್ಬಿಟ್ಟ ಯಶ್-ರಾಧಿಕಾ]

ಅತ್ತೆ-ನಾದಿನಿ ಜೊತೆ ರಾಧಿಕಾ

ಅತ್ತೆ ಮತ್ತು ನಾದಿನಿ ಜೊತೆ ನಿಶ್ಚಿತಾರ್ಥದ ಮಂಟಪಕ್ಕೆ ಆಗಮಿಸಿಸುತ್ತಿರುವ ರಾಧಿಕಾ ಪಂಡಿತ್. ಸೊಸೆಯನ್ನು ಕೈ ಹಿಡಿದು ಕರೆತಂದ ಯಶ್ ತಾಯಿ.[ಗೋವಾದಲ್ಲಿ ನಿಶ್ಚಿತಾರ್ಥ: ಯಶ್ ಬಿಚ್ಚಿಟ್ಟ ರಹಸ್ಯ]

ಭಲೇ ಜೋಡಿ

ಸುಂದರ-ಸುಂದರಿ ಕೊಟ್ಟ ಪೋಸ್ ನೋಡಿದ್ರೆ, ಹೇಗಿದೆ ನಮ್ ಜೋಡಿ ಅಂತ ಕೇಳಿದ ಹಾಗೆ ಇಲ್ವಾ.[ಇನ್ಮುಂದೆ ಯಶ್ ಗೆ ಏನಾದ್ರೂ ಹೇಳ್ಬೊದು-ಕೇಳ್ಬೊದು, ಹೀಗಂತ ನಾವ್ ಹೇಳ್ತಿಲ್ಲ]

ಉಂಗುರ ತೊಡಿಸಿದ ಯಶ್

ತಮ್ಮ ಮುದ್ದು ಅರಗಿಣಿ 'ಮಾರ್ಗಿ'ಗೆ (ರಾಧಿಕಾ ಪಂಡಿತ್) ರಾಮಾಚಾರಿ (ಯಶ್) ಉಂಗುರ ತೊಡಿಸಿದ ಅದ್ಭುತ ಕ್ಷಣ.

ಉಂಗುರ ತೊಡಿಸಿದ ರಾಧಿಕಾ

ತನ್ನ ರಾಜಕುಮಾರ ಯಶ್ ಗೆ ಉಂಗುರ ತೊಡಿಸಿದ ರಾಜಕುಮಾರಿ ರಾಧಿಕಾ ಪಂಡಿತ್.

ಜೊತೆ-ಜೊತೆಯಲಿ

'ಜೊತೆಯಲಿ, ಜೊತೆ-ಜೊತೆಯಲಿ ಇರುವೆವು ಹೀಗೆ ಎಂದು' ಎನ್ನುವಂತಿದೆ ಈ ಪೋಸ್.

ರೆಬೆಲ್ ಸ್ಟಾರ್ ದಂಪತಿಗಳ ಜೊತೆ

ರೆಬೆಲ್ ಸ್ಟಾರ್ ಅಂಬರೀಶ್ ದಂಪತಿಗಳ ಜೊತೆ ಪೋಸ್ ಕೊಟ್ಟ ರಾಜ-ರಾಣಿ ಯಶ್ ಮತ್ತು ರಾಧಿಕಾ ಪಂಡಿತ್.

ಮೂಗುತ್ತಿ ಸುಂದರಿ

ಮೂಗುತ್ತಿ ಧರಿಸಿ ಮಿರಮಿರ ಮಿಂಚುತ್ತಿರುವ ನಟಿ ರಾಧಿಕಾ ಪಂಡಿತ್.

ಆರತಿ ಎತ್ತಿರೇ

ಹಿಂದು ಸಂಪ್ರದಾಯದಂತೆ ಮದುಮಗ ಯಶ್ ಗೆ ಆರತಿ ಎತ್ತಿ ಬರಮಾಡಿಕೊಂಡ ಮುತ್ತೈದೆಯರು.

'ನೀನು' ಮುತ್ತು ಕೊಟ್ಟಾಗ

ತನ್ನ ಮುದ್ದು ರಾಜಕುಮಾರಿಯ ಹಣೆಗೆ ತುಟಿಯೊತ್ತಿದ ರಾಕಿಂಗ್ ಸ್ಟಾರ್ ಯಶ್.

ಯಶ್ ತೋಳಲ್ಲಿ ಅರಗಿಣಿ ರಾಧಿಕಾ

ಯಶ್ ತೋಳಲ್ಲಿ ಬಂಧಿಯಾದ ಅರಗಿಣಿ ರಾಧಿಕಾ ಪಂಡಿತ್.

ಹಣೆಗೆ ತಿಲಕ

ಆರತಿ ಬೆಳಗಿದ ನಂತರ ಮುತ್ತೈದೆಯರು ಎಡಗೈನ ಹೆಬ್ಬೆರಳಲ್ಲಿ ಹುಡುಗನ ಹಣೆಗೆ ತಿಲಕ ಇಡುತ್ತಾರೆ. ಅದರಂತೆ ಯಶ್ ಹಣೆಯಲ್ಲಿ ಅರಿಶಿನ ತಿಲಕ.

ಸಂಭ್ರಮದ ಕ್ಷಣ

ಯಶ್ ಅವರು ರಾಧಿಕಾ ಅವರ ಕೈಗೆ ಉಂಗುರ ತೊಡಿಸಿದಾಗ, ರಾಧಿಕಾ ಮುಖದಲ್ಲಿ ಸಂಭ್ರಮ ತುಳುಕುತ್ತಿರುವ ಅದ್ಭುತ ಕ್ಷಣ.

ಕುಟುಂಬದ ಸಂಭ್ರಮ

ಪ್ರೇಮಿಗಳಿಬ್ಬರು ಒಂದಾದಾಗ ಕುಟುಂಬದವರ ಮುಖದಲ್ಲಿ ಸಂಭ್ರಮದ ಕಳೆ. ಚಪ್ಪಾಳೆ ತಟ್ಟಿ ಸಂತಸವನ್ನು ಆಚರಿಸಿದರು.

ಬುಕ್ ಆದ್ವಿ

ಇಬ್ಬರು ಉಂಗುರ ತೊಡಿಸಿ ಆದ ಮೇಲೆ ಬುಕ್ ಆದ್ವಿ ಅಂತ ಖುಷಿಯಲ್ಲಿ, ಉಂಗುರ ತೋರಿಸಿದ ಪರಿ.

ಪುನೀತ್ ರಾಜ್ ಕುಮಾರ್

ರಾಕಿಂಗ್ ಸ್ಟಾರ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ನಿಶ್ಚಿತಾರ್ಥದ ಸಂಭ್ರಮದ ಕ್ಷಣದಲ್ಲಿ ಭಾಗಿಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

ಕ್ರೇಜಿಸ್ಟಾರ್ ರವಿಚಂದ್ರನ್

ಎಂಗೇಜ್ ಆದ ಜೋಡಿಗಳ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಟಿ ಮಾಳವಿಕಾ ಅವಿನಾಶ್ ಪೋಸ್ ಕೊಟ್ಟ ಕ್ಷಣ.

ಆಶೀರ್ವದಿಸಿದ ರೆಬೆಲ್ ಸ್ಟಾರ್ ದಂಪತಿ

ನವ ಜೋಡಿಗೆ ಆಶೀರ್ವದಿಸಿ ಶುಭ ಹಾರೈಸಿದ ರೆಬೆಲ್ ಸ್ಟಾರ್ ಅಂಬರೀಶ್ ದಂಪತಿ.

ಫ್ಯಾಮಿಲಿ ಫೋಟೋ

ಎಲ್ಲಾ ಕ್ರಮಗಳು ಮುಗಿದ ನಂತರ ಹುಡುಗ-ಹುಡುಗಿ ಕುಟುಂಬದವರು ಫ್ಯಾಮಿಲಿ ಫೋಟೋಗೆ ಪೋಸ್ ಕೊಟ್ಟ ಪರಿ.

ಹೆತ್ತವರ ಜೊತೆ

ಹೆತ್ತವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ನವ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್.

ಕೇಕ್ ರೆಡಿ ಇದೆ

ಅಂದಹಾಗೆ ಇವರಿಬ್ಬರ ನಿಶ್ಚಿತಾರ್ಥ ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನೆರವೇರಿದೆ. ಮೊದಲು ಹಿಂದು ಸಂಪ್ರದಾಯ ನಂತರ ಕೇಕ್ ಕಟ್ ಮಾಡಿ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮಾಡಲಾಗಿದೆ.

ರಾಜ-ರಾಣಿ

ಕ್ಯಾಮೆರಾಮೆನ್ ಭುವನ್ ಗೌಡ ಅವರ ಕ್ಯಾಮೆರಾ ಕಣ್ಣಲ್ಲಿ ರಾಜ-ರಾಣಿ ಈ ರೀತಿ ಕ್ಯೂಟ್ ಆಗಿ ಸೆರೆ ಸಿಕ್ಕಾಗ.

ಉಂಗುರಗಳು

ಯಶ್-ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥದ ಉಂಗುರವನ್ನು ಇನ್ನೂ ಸರಿಯಾಗಿ ನೋಡದಿದ್ದರೆ, ಇನ್ನೊಂದು ಬಾರಿ ಸ್ಪಷ್ಟವಾಗಿ ನೋಡಿಬಿಡಿ.

ಈಡು ಜೋಡಿ

ಎಷ್ಟು ಸುಂದರವಾಗಿ ಇವರಿಬ್ಬರ ಜೋಡಿ. ಹೇಳಿ ಮಾಡಿಸಿದಂತಿದೆ. ಬರೀ ತೆರೆ ಮೇಲೆ ಮಾತ್ರವಲ್ಲದೇ, ತೆರೆ ಹಿಂದೆ ಕೂಡ ಈ ಜೋಡಿ ತುಂಬಾ ಅನ್ಯೋನ್ಯವಾಗಿದ್ದಾರೆ.

ಎಲ್ಲರಿಗೂ ಇಷ್ಟವಾದ ಜೋಡಿ

ಈ ಜೋಡಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಸ್ಯಾಂಡಲ್ ವುಡ್ ನ ಹಲವು ಮಂದಿಗೆ ಇವರಿಬ್ಬರೆಂದರೆ ತುಂಬಾ ಪ್ರೀತಿ.

ಸ್ಮೈಲ್ ಪ್ಲೀಸ್

ಮುದ್ದಾದ ಜೋಡಿ ನಗುಮುಖದೊಂದಿಗೆ ಪೋಸ್ ಕೊಟ್ಟ ಪರಿ. ಇದಕ್ಕೊಂದು ಕ್ಯಾಪ್ಶನ್ ಕೊಡಿ.

ನಾವಿಬ್ಬರು ಒಂದೇ

ಒಂದೇ ಒಂದೇ ಇನ್ನುಮುಂದೆ ನಾವಿಬ್ಬರು ಒಂದೇ ದೇಹ ಎರಡು ಜೀವ, ಎನ್ನುವಂತಿದೆ ಇವರಿಬ್ಬರ ಭಾವ-ಭಂಗಿ.

ಚೆಂದುಳ್ಳಿ ಚೆಲುವೆ

ಚೆಂದುಳ್ಳಿ ಚೆಲುವೆ ರಾಧಿಕಾ ಪಂಡಿತ್ ಅವರನ್ನು 'ಜೂಮ್' ಮಾಡಿ ನೋಡಿ.

English summary
In Pics: Actor Yash and Actress Radhika Pandit engagement photo album. Engagement grand ceremony held at vivanta by taj holiday village Goa. After 5 long years of Dating, Kannada Actor Yash and Kannada Actress Radhika Pandit are finally getting engaged On August 12th, 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada