»   »  ಸಿ.ಎಂ, ಮಾಜಿ ಸಿ.ಎಂ, ಮಾಜಿ ಪ್ರಧಾನಿಗೆ ಯಶ್ ಆತ್ಮೀಯ ಆಮಂತ್ರಣ

ಸಿ.ಎಂ, ಮಾಜಿ ಸಿ.ಎಂ, ಮಾಜಿ ಪ್ರಧಾನಿಗೆ ಯಶ್ ಆತ್ಮೀಯ ಆಮಂತ್ರಣ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ವಿವಾಹ ಮಹೋತ್ಸವಕ್ಕೆ ಇನ್ನೊಂದೇ ದಿನ ಬಾಕಿ. ನಾಳೆ (ಡಿಸೆಂಬರ್ 9) ಯಶ್ ಹಾಗೂ ರಾಧಿಕಾ ಪಂಡಿತ್ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.

ಈಗಾಗಲೇ ವಿವಾಹ ಪೂರ್ವ ಶಾಸ್ತ್ರಗಳಿಗೆ ಚಾಲನೆ ನೀಡಲಾಗಿದ್ದು, ಚಪ್ಪರ ಪೂಜೆ, ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ಮುಗಿದಿದೆ. ['ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು]

ಈ ನಡುವೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ರವರಿಗೆ ಯಶ್ ತಮ್ಮ ಮದುವೆಯ ಮಮತೆಯ ಕರೆಯೋಲೆ ನೀಡಿ ಬಂದಿದ್ದಾರೆ.

ಮುಖ್ಯಮಂತ್ರಿಗಳಿಗೆ ಆತ್ಮೀಯ ಆಹ್ವಾನ

ಮದುವೆ ಪೂರ್ವ ಶಾಸ್ತ್ರಗಳಲ್ಲಿ ಬಿಜಿಯಿದ್ದರೂ, ಅಪಾಯಿಟ್ಮೆಂಟ್ ಸಿಕ್ಕ ಕೂಡಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಕಛೇರಿಗೆ ತೆರಳಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ಬಂದಿದ್ದಾರೆ ಯಶ್. ['ಯಶ್-ರಾಧಿಕಾ' ಮದುವೆಗೆ ರಾಜಕೀಯ ನಾಯಕರಿಗೆ ಆಮಂತ್ರಣ]

ಎಚ್.ಡಿ.ಕುಮಾರಸ್ವಾಮಿ ರವರಿಗೆ ಕರೆಯೋಲೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರಿಗೂ ನಟ ಯಶ್ ತಮ್ಮ ಮದುವೆಗೆ ಆತ್ಮೀಯ ಆಹ್ವಾನ ನೀಡಿದ್ದಾರೆ. ['ಯಶ್-ರಾಧಿಕಾ' ಮದುವೆ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಿಂಚು]

ಮಾಜಿ ಪ್ರಧಾನಿಗಳಿಗೆ ಆಮಂತ್ರಣ ಪತ್ರಿಕೆ

ತಮ್ಮ ಮದುವೆಗೆ ತಪ್ಪದೇ ಬಂದು ಹರಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರಿಗೆ ಆಮಂತ್ರಣ ಪತ್ರಿಕೆ ನೀಡಿ ಯಶ್ ಕೇಳಿಕೊಂಡಿದ್ದಾರೆ.

ಮೆಹಂದಿ ಸಂಭ್ರಮ

ಖಾಸಗಿ ಹೋಟೆಲ್ ವೊಂದರಲ್ಲಿ ಯಶ್-ರಾಧಿಕಾ ಪಂಡಿತ್ ರವರ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ಮೊನ್ನೆ ನಡೆದಿತ್ತು.

ಸ್ಟಾರ್ ಗಳು ಭಾಗಿ

ಪ್ರಿಯಾಂಕಾ ಉಪೇಂದ್ರ, ಪ್ರಜ್ವಲ್ ದೇವರಾಜ್, ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಯಶ್-ರಾಧಿಕಾ ರವರ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

English summary
Rocking Star Yash has invited Karnataka CM Siddaramaiah, EX CM H.D.Kumaraswamy, EX PM H.D.Devegowda for his marriage with Kannada Actress Radhika Pandit. The wedding is scheduled on December 9th, 10th and 11th at Tripura Vasini, Bengaluru Palace Ground.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada