»   » ವರಮಹಾಲಕ್ಷ್ಮಿ ಪೂಜೆ ಸಂಭ್ರಮದಲ್ಲಿ ಸೆಲೆಬ್ರಿಟಿಗಳು

ವರಮಹಾಲಕ್ಷ್ಮಿ ಪೂಜೆ ಸಂಭ್ರಮದಲ್ಲಿ ಸೆಲೆಬ್ರಿಟಿಗಳು

Posted By:
Subscribe to Filmibeat Kannada

ಹಬ್ಬಗಳ ಮಾಸವಾದ ಶ್ರಾವಣ ಮಾಸದಲ್ಲಿ ಹೆಣ್ಣು ಮಕ್ಕಳಿಗೆ ಸಡಗರ ಸಂಭ್ರಮ. ಅದರಲ್ಲೂ ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಹೆಂಗಳೆಯರಿಗೆ ಅತ್ಯಂತ ಪ್ರಿಯವಾದುದು.

ಪ್ರತಿ ವರ್ಷ ಸಮೀಪದ ಶ್ರಾವಣ ಮಾಸದ ಎರಡನೇ ಶುಕ್ರವಾರ ಪೌರ್ಣಮಿಯ ದಿನದಂದು ಬರುವ ಈ ವರಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು, ಹೆಣ್ಣುಮಕ್ಕಳು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ

ಅಂದಹಾಗೆ ನಮ್ಮ ಸಿನಿಮಾ ರಂಗದ ಖ್ಯಾತ ತಾರೆಯರು ಕೂಡ ತಮ್ಮ ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವ ಮೂಲಕ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದಾರೆ.

ಸ್ಯಾಂಡಲ್ ವುಡ್ ತಾರೆಯರಾದ ತಾರಾ, ಮಯೂರಿ, ರೂಪಶ್ರೀ, ಬಹುಭಾಷಾ ತಾರೆ ಲಕ್ಷ್ಮಿ ರೈ, ನಟಿ ಹರಿಪ್ರಿಯ ಮುಂತಾದವರು ತಮ್ಮ ಅಭಿಮಾನಿಗಳಿಗೆ ಫೇಸ್ ಬುಕ್ಕ್ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.[ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ]

ವಿಷ್ಣುಪ್ರಿಯೆ ಲಕ್ಷ್ಮಿಯ ಆರಾಧನೆ ಮಾಡಿರುವ ಸಿನಿಮಾ ಲೋಕದ ತಾರೆಯರು ತಾವೂ ಹಬ್ಬ ಆಚರಿಸಿಕೊಂಡು ಅಭಿಮಾನಿಗಳಿಗೆ ಹಬ್ಬದ ಶುಭಕಾಮನೆಗಳನ್ನು ಕೋರಿದ್ದಾರೆ. ಮುಂದೆ ಓದಿ..

ಸ್ಯಾಂಡಲ್ ವುಡ್ ನಟಿ ತಾರಾ

ಸ್ಯಾಂಡಲ್ ವುಡ್ ಸ್ಟಾರ್ ತಾರಾ ಅವರು ತಮ್ಮ ನಿವಾಸದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಬಸವ ಪೂಜೆ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಿಕೊಂಡರು. ಜೊತೆಗೆ ಅಭಿಮಾನಿಗಳಿಗೂ ಶುಭಾಶಯ ಕೋರಿದ್ದಾರೆ.

ಚಂದನವನದ 'ಉಗ್ರಂ' ಖ್ಯಾತಿಯ ನಟಿ ಹರಿಪ್ರೀಯಾ

ನಟಿ ಹರಿಪ್ರೀಯಾ ಅವರು ಬೆಂಗಳೂರಿನ ಕೋಣನ ಕುಂಟೆಯ ಕ್ರಾಸ್ ಬಳಿ ಇರುವ 'ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ಟಾಲಿವುಡ್ ನಟಿ ಲಕ್ಷ್ಮಿ ರೈ

ಟಾಲಿವುಡ್ ಹಾಗೂ ಕಾಲಿವುಡ್ ಸ್ಟಾರ್ ಲಕ್ಷ್ಮಿ ರೈ ಅವರು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿ ಲಕ್ಷ್ಮಿದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಹಾಗೂ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ,ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ.

Special wishes to my Facebook family:) love u all❤️

Posted by Mayuri on Friday, August 28, 2015

ಅಶ್ವಿನಿ ಅಲಿಯಾಸ್ ಮಯೂರಿ

ಕಿರುತೆರೆ ನಟಿ ಈಗ ಚಂದನವನದಲ್ಲಿ ಲೀಲಾ ಡಾರ್ಲಿಂಗ್ ಅಂತಾನೇ ಖ್ಯಾತಿ ಗಳಿಸಿರುವ ಮಯೂರಿ ಅವರು ತಮ್ಮ ಫೇಸ್ ಬುಕ್ಕ್ ನಲ್ಲಿ ತಮ್ಮ ಅಭಿಮಾನಿಗಳಿಗೆ ವಿಡಿಯೋ ಮೂಲಕ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದ್ದಾರೆ.

ಸ್ಯಾಂಡಲ್ ವುಡ್ ಸ್ಟಾರ್ ರೂಪಶ್ರೀ

ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟಿ ರೂಪಶ್ರೀ ಅವರು ತಮ್ಮ ಮನೆಯಲ್ಲಿ ಪೂಜೆ ವ್ರತ ಕೈಗೊಂಡು ಹಬ್ಬ ಆಚರಿಸಿ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೇ ವಿಷ್ಣುಪ್ರೀಯೆ ಲಕ್ಷ್ಮಿ ದೇವಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

English summary
In Pictures: Check How Celebrities Worship Goddess aramahalakshmi.Sandalwood Actress Tara Anuradha, Mayuri, Roopashri, Haripriya, Laxmi Rai Celebrated Varamahalakshmi Pooja Today (August 28)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada