For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಅದ್ಧೂರಿಯಾಗಿ ಉದ್ಘಾಟನೆಗೊಂಡ ಸಿನಿಮೋತ್ಸವ

  By Suneetha
  |

  ಈ ಬಾರಿಯ 8ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬಹಳ ಅದ್ಧೂರಿಯಾಗಿ ವಿಧಾನ ಸೌಧದ ಪೂರ್ವದ್ವಾರದಲ್ಲಿ ಉದ್ಘಾಟನೆಗೊಂಡಿದೆ.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಎಂ ಸಿದ್ಧರಾಮಯ್ಯ, 'ಬೆಂಗಳೂರು 8ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಐತಿಹಾಸಿಕ ಹೆಜ್ಜೆಯಾಗಿ ನಿಲ್ಲಲಿದೆ. 1984ರಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ವಿಧಾನ ಸೌಧದ ಮುಂದೆ ಕನ್ನಡ ರಾಜ್ಯೋತ್ಸವ ನಡೆಯಿತು'.[ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಯಲ್ಲಿರುವ ಕನ್ನಡ ಚಿತ್ರಗಳ ಲಿಸ್ಟ್]

  'ಆ ನಂತರ ವಿಧಾನ ಸೌಧದ ಮುಂದೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಅಷ್ಟು ವರ್ಷಗಳ ನಂತರ ಈಗ ಚಿತ್ರೋತ್ಸವ ನಡೆಯುತ್ತಿದೆ. ಈ ಕಾರಣಕ್ಕೆ ಈ ಚಿತ್ರೋತ್ಸವ ಚಾರಿತ್ರಿಕ ಪುಟಗಳಲ್ಲಿ ಉಳಿಯಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.[ಚಲನಚಿತ್ರೋತ್ಸವ ಕುರಿತಾಗಿ ಸಿ.ಎಂ ನೀಡಿದ ಮುಖ್ಯಾಂಶಗಳು]

  ಬೆಂಗಳೂರಿನಲ್ಲಿ ಆರಂಭಗೊಂಡಿರುವ 8 ದಿನಗಳ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಅರಮನೆ ಎದುರು 1985 ರಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯಿತು.

  ಆ ನಂತರ ದೊಡ್ಡ ಮಟ್ಟದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಈಗ ಅಲ್ಲಿ ಚಿತ್ರೋತ್ಸವ ನಡೆಯುತ್ತಿದೆ. ಜತೆಗೆ ಮೈಸೂರು ನಗರಿಯಲ್ಲೇ ಇದರ ಮುಕ್ತಾಯ ಸಮಾರಂಭ ಮಾಡುತ್ತಿದ್ದೇವೆ.[ತಿಥಿ ಸಿನಿಮಾ ಪ್ರದರ್ಶನ ಮೂಲಕ ಚಲನಚಿತ್ರೋತ್ಸವಕ್ಕೆ ಚಾಲನೆ]

  ಚಿತ್ರ ಪ್ರೇಮಿಗಳಿಗೆ ಈ ಸಿನಿಮೋತ್ಸವ ಒಂದು ಸುವರ್ಣ ಅವಕಾಶ. ಹತ್ತಾರು ದೇಶಗಳ ಹಲವು ಚಿತ್ರಗಳು ಒಂದೇ ಕಡೆ ಪ್ರರ್ದಶನಗೊಳ್ಳುತ್ತಿವೆ. ಇವುಗಳನ್ನು ವೀಕ್ಷಿಸುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮನವಿ ಮಾಡಿದರು. ಮುಂದೆ ಓದಿ..

  ಸಾಂಸ್ಕೃತಿಕ ವೈಭವ

  ಸಾಂಸ್ಕೃತಿಕ ವೈಭವ

  ನಾಟ್ಯರಾಣಿ ಶೋಭನಾ ಅವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ನೆರೆದಿದ್ದ ಕಲಾಭಿಮಾನಿಗಳಿಗೆ ತಮ್ಮ ಅದ್ಭುತ ಭರತನಾಟ್ಯ ನೃತ್ಯ ಪ್ರದರ್ಶನ ತೋರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.[ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016ರ ವಿಶೇಷತೆಗಳು]

  ಅಧ್ಯಕ್ಷೆ ಜಯಾ ಬಚ್ಚನ್

  ಅಧ್ಯಕ್ಷೆ ಜಯಾ ಬಚ್ಚನ್

  ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ ಮಾತನಾಡಿದ ಚಲನಚಿತ್ರರಂಗದ ಹಿರಿಯ ನಟಿ ಹಾಗೂ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್, ಕರ್ನಾಟಕ ಸರ್ಕಾರ ಚಿತ್ರೋದ್ಯಮಕ್ಕೆ ಸಾಕಷ್ಟು ನೆರವು ನೀಡಿದೆ. ಹತ್ತಾರು ಯೋಜನೆಗಳ ಜಾರಿಗೆ ಆರ್ಥಿಕ ಸಹಕಾರ ನೀಡಿದೆ. ಆದರೂ ಚಿತ್ರೋತ್ಸವಗಳು ಸರ್ಕಾರದ ನೆರಳಿನ ಆಚೆಗೆ ರೂಪುಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚಿತ್ರೋದ್ಯಮಿಗಳು, ಸಿನಿಮಾ ವಿದ್ಯಾರ್ಥಿಗಳು, ಪ್ರೇಕ್ಷಕರು ಯೋಚಿಸಿ ಎಂದು ನುಡಿದರು.

  ಸಾಕಷ್ಟು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದೆವು

  ಸಾಕಷ್ಟು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದೆವು

  ಕರ್ನಾಟಕದಲ್ಲಿ ಬೇರೆ ಬೇರೆ ಭಾಷೆಯವರು ತಮ್ಮ ಚಿತ್ರಗಳ ಶೂಟಿಂಗ್‌ಗೆ ಬರುತ್ತಿದ್ದಾರೆ. ಇಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ೧೪೦ ಎಕರೆ ಜಮೀನು ನೀಡಿರುವ ವಿಚಾರ ಕೇಳಿ ಸಂತೋಷವಾಯಿತು. ನಾನು ಮತ್ತು ಅಮಿತಾಬ್ ಬಚ್ಚನ್ ಸಾಕಷ್ಟು ಬಾರಿ ಬೆಂಗಳೂರಿಗೆ ಬಂದಿದ್ದೇವೆ. ಇನ್ನು ಮುಂದೆ ಕೂಡ ಸಿನಿಮಾ ಶೂಟಿಂಗ್ ಗೆ ಬರುತ್ತೇವೆ. ಮುಂದಿನ ದಿನಗಳಲ್ಲಿ ಅಮಿತಾಬ್ ಅವರಿಗೆ ತಮ್ಮ ಅಭಿನಯದ ಸಿನಿಮಾಗಳ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಿಸಿಕೊಳ್ಳುವಂತೆ ಸೂಚಿಸುತ್ತೇನೆ ಎಂದು ಜಯಾಬಚ್ಚನ್ ಹೇಳಿದರು.

  ಚಲನಚಿತ್ರಗಳಲ್ಲಿ ಅಶ್ಲೀಲತೆ ಮತ್ತು ಕ್ರೌರ್ಯಕ್ಕೆ ಕಡಿವಾಣ ಹಾಕಬೇಕು

  ಚಲನಚಿತ್ರಗಳಲ್ಲಿ ಅಶ್ಲೀಲತೆ ಮತ್ತು ಕ್ರೌರ್ಯಕ್ಕೆ ಕಡಿವಾಣ ಹಾಕಬೇಕು

  ಹಿಂದಿನಂತೆ ಸಂದೇಶಗಳನ್ನು ಹೊತ್ತ ಸಿನಿಮಾಗಳು ಕೊರತೆಯಾಗುತ್ತಿವೆ. ಇತ್ತೀಚೆಗೆ ನಾನು ಒಂದು ವರದಿ ಓದಿದೆ. ಅದರಲ್ಲಿ ಸಿನಿಮಾಗಳ ಪ್ರೇರಣೆಯಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬರೆಯಲಾಗಿತ್ತು. ಸಿನಿಮಾ ಒಂದು ಪ್ರಭಾವಿ ಮಾಧ್ಯಮ. ಹೀಗಾಗಿ ಇಂಥ ಮಾಧ್ಯಮಕ್ಕೆ ಸಾಮಾಜಿಕ ಜವಾಬ್ದಾರಿ ಅಗತ್ಯ. ಚಲನಚಿತ್ರಗಳಲ್ಲಿ ಅಶ್ಲೀಲತೆ ಹಾಗೂ ಕ್ರೌರ್ಯಕ್ಕೆ ಕಡಿವಾಣ ಹಾಕಬೇಕು ಎಂದು ಸಿ.ಎಂ ಸಿದ್ಧರಾಮಯ್ಯ ಅವರು ಖಡಕ್ ಆಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

  ಚಿತ್ರರಂಗದ ದಿಗ್ಗಜರು ವೇದಿಕೆಯಲ್ಲಿ

  ಚಿತ್ರರಂಗದ ದಿಗ್ಗಜರು ವೇದಿಕೆಯಲ್ಲಿ

  ಸಚಿವ ರೋಷನ್ ಬೇಗ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್. ವಿ. ರಾಜೇಂದ್ರಸಿಂಗ್ ಬಾಬು ಚಲನಚಿತ್ರೋತ್ಸವ ವೇದಿಕೆಯಲ್ಲಿ ಮಾತನಾಡಿದರು. ಸಚಿವ ಡಾ.ಜಿ ಪರಮೇಶ್ವರ್, ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮೇಯರ್ ಬಿ. ಎನ್. ಮಂಜುನಾಥ್ ರೆಡ್ಡಿ, ತೆಲುಗು ನಟ ವಿಕ್ಟರಿ ವೆಂಕಟೇಶ್, ಕನ್ನಡ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಹಾಲಿವುಡ್ ಚಿತ್ರಗಳ ನಿರ್ಮಾಪಕ ಡಾ. ಅಶೋಕ್ ಅಮೃತರಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  ಜಯಾ V/S ಜಯಾ

  ಜಯಾ V/S ಜಯಾ

  ಹಿರಿಯ ನಟಿ ಜಯಾಬಚ್ಚನ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ನಟಿ ಜಯಮಾಲಾ

  ಸಾಂಸ್ಕೃತಿಕ ವೈಭವದ ಝಲಕ್

  ಸಾಂಸ್ಕೃತಿಕ ವೈಭವದ ಝಲಕ್

  ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅದ್ಧೂರಿ ಸಮಾರಂಭದಲ್ಲಿ ಸಾಂಸ್ಕೃತಿಕ ಝಲಕ್ ನ ಒಂದು ಅಪೂರ್ವ ನೋಟ.

  English summary
  Rajyasabha MP & actress Jaya Bachchan lights the lamp as Karnataka CM Siddaramaiah,Telugu actor D Venkatesh, Minister & Kannada actor H M Ambareesh and others look on during the inauguration of the 8th Bengaluru International Film Festival at Vidhan Soudha in Bengaluru on Thursday January 28th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X