For Quick Alerts
  ALLOW NOTIFICATIONS  
  For Daily Alerts

  ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ, ಹೆಚ್ಚು ಸಿನಿಮಾ ನೋಡಬೇಡಿ: ಜಗ್ಗೇಶ್

  |

  ನಟ ಜಗ್ಗೇಶ್ ಸದಾ ಕನ್ನಡ ಸಿನಿಮಾಗಳನ್ನು ಬೆಂಬಲಿಸಿಕೊಂಡು ಬಂದವರು. ಡಬ್ಬಿಂಗ್ ಅನ್ನು ಸಹ ಬಹುವಾಗಿ ವಿರೋಧಿಸಿದ್ದವರು ಜಗ್ಗೇಶ್. ಆದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ 'ಹೆಚ್ಚು ಸಿನಿಮಾಗಳನ್ನು ನೋಡಬೇಡಿ' ಎಂದು ಯುವಕರಿಗೆ ಸಲಹೆ ನೀಡಿದ್ದಾರೆ ಈ ಹಿರಿಯ ನಟ.

  ಯಾವ ಹೀರೋನು ನಂಬಬೇಡಿ ಎಲ್ಲರೂ ಸ್ವಾರ್ಥಿಗಳು | Filmibeat Kannada

  ನಿನ್ನೆ (ಮಾರ್ಚ್ 28) ರಂದು ಬಿಜೆಪಿ ಆಯೋಜಿಸಿದ್ದ 'ಮಾಧ್ಯಮ-ಮಂಥನ' ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಜಗ್ಗೇಶ್, 'ಹೆಚ್ಚಾಗಿ ಸಿನಿಮಾಗಳನ್ನು ನೋಡಬೇಡಿ' ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.

  'ಇಂದು ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಸಿನಿಮಾಗಳನ್ನಷ್ಟೆ ನೋಡಿ, ಹೆಚ್ಚಾಗಿ ಸಿನಿಮಾ ನೋಡಲು ಹೋಗಬೇಡಿ' ಎಂದಿದ್ದಾರೆ ಜಗ್ಗೇಶ್.

  'ನಿಮ್ಮ ಭವಿಷ್ಯವನ್ನು ಯಾವ ನಟರೂ ರೂಪಿಸುವುದಿಲ್ಲ. ನಿಮ್ಮ ಊರಿಗೆ ಬೇಕಾದ ರಸ್ತೆ, ಚರಂಡಿ, ನೀರು ಇನ್ನಿತರೆ ಮೂಲಸೌಕರ್ಯಗಳನ್ನು ಯಾವ ನಟರೂ ತಂದುಕೊಡುವುದಿಲ್ಲ. ಎರಡು ಮೂರು ಗಂಟೆ ನಿಮಗೆ ಮನರಂಜನೆ ಕೊಡಬಲ್ಲೆವಷ್ಟೆ ಹೊರತು ಯಾವ ನಟ-ನಟಿಯರೂ ನಿಮ್ಮ ಪಾಲಿಗೆ ದೇವರಾಗಬೇಕಿಲ್ಲ. ನಾನೂ ಸೇರಿ ಸಿನಿಮಾ ರಂಗದ ಹಲವರು ಸ್ವಾರ್ಥಿಗಳೇ ಎಂದಿದ್ದಾರೆ ಜಗ್ಗೇಶ್.

  ನಮ್ಮನ್ನು ನಂಬಿ ಫೂಲ್ ಆಗಬೇಡಿ: ಜಗ್ಗೇಶ್

  ನಮ್ಮನ್ನು ನಂಬಿ ಫೂಲ್ ಆಗಬೇಡಿ: ಜಗ್ಗೇಶ್

  ನಾವು ಎರಡು ಮೂರು ಗಂಟೆ ನಿಮ್ಮ ಮನರಂಜನೆ ಮಾಡುತ್ತೇವೆ ಅಷ್ಟೆ. ನಾವ್ಯಾರೂ ನಿಮ್ಮ ಪಾಲಿಗೆ ದೇವರಲ್ಲ. ನಿಮ್ಮನ್ನು ತಲೆ ಮೇಲೆ ಹೊರೆಸಿಕೊಂಡು ಓಡಾಡುವವರು ನಾವಲ್ಲ. ನಾವು ಸ್ವಾರ್ಥಿಗಳು ಬದುಕಲಿಕ್ಕೆ ಬಂದವರು. ನಮ್ಮನ್ನು ನಂಬಿ ಫೂಲ್ ಆಗಬೇಡಿ. ನಮ್ಮನ್ನು ಎಲ್ಲಿಡಬೇಕೋ ಅಲ್ಲಿಡಿ' ಎಂದರು ನಟ ಜಗ್ಗೇಶ್.

  'ಹಾರ, ಕಟೌಟ್ ಹಾಕುವುದು ಬಿಟ್ಟು, ಅಪ್ಪ-ಅಮ್ಮನನ್ನು ನೋಡಿಕೊಳ್ಳಿ'

  'ಹಾರ, ಕಟೌಟ್ ಹಾಕುವುದು ಬಿಟ್ಟು, ಅಪ್ಪ-ಅಮ್ಮನನ್ನು ನೋಡಿಕೊಳ್ಳಿ'

  'ಸಿನಿಮಾ ಮಂದಿಯಿಂದ ನಿಮಗೆ ಏನೂ ಸಿಗೋದಿಲ್ಲ. ಯಾರೋ ಹೀರೋಗೆ ಹೋಗಿ‌ ಕಟೌಟ್, ಹಾರ, ಹಾಲಿನ ಅಭಿಷೇಕ ಮಾಡುವ ಬದಲು, ನೀವು‌ ನಿಮ್ಮ ತಂದೆ ತಾಯಿ ಬಗ್ಗೆ ಯೋಚಿಸಿ. ನಿಮ್ಮ ಮನೆಯಲ್ಲಿ ನೊಂದಿರೋ ಪೋಷಕರ ಯೋಗಕ್ಷೇಮ ನೋಡಿಕೊಳ್ಳಿ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಅವರನ್ನ ನಡೆಸಿ, ಅವರಿಗೆ ಪ್ರೀತಿ ಕೊಡಿ, ನಮಸ್ಕರಿಸಿ, ಆಗ ನೀವು ಜೀವನದಲ್ಲಿ ನಿಜವಾದ ಹೀರೋ ಹಾಕ್ತಿರಿ' ಎಂದರು ಜಗ್ಗೇಶ್.

  'ಸಿನಿಮಾ ನೋಡಿ ಬದುಕ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಯುವಕರು'

  'ಸಿನಿಮಾ ನೋಡಿ ಬದುಕ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಯುವಕರು'

  'ಯುವ ಜನರು ದೇಶದ ಬಗ್ಗೆ ಯೋಚಿಸೋದನ್ನ ಬಿಟ್ಟು, ಯಾವ ನಟ ಯಾವ ಕಟಿಂಗ್ ಹೊಡ್ಕಂಡ, ಡೈಲಾಗ್ ಹೊಡೆದ ಅಂತ ತಲೆ ಕೆಡಿಸಿಕೊಳ್ಳುತ್ತಾರೆ. ಆ ಹೀರೋ ತರ ಕಲಿಬೇಕು, ಡ್ರೆಸ್ ಹಾಕಬೇಕು, ಲವ್ ಮಾಡ್ಬೇಕು ಅಂತ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಕಷ್ಟ ಸುಖಕ್ಕೆ ಯಾವ ಹೀರೋನೂ ಬರೋದಿಲ್ಲ, ನಾವೆಲ್ಲ ಎಸಿ ರೂಂನಲ್ಲಿ ಕೂತಿರುತ್ತೇವೆ ಅಷ್ಟೆ' ಎಂದರು ಜಗ್ಗೇಶ್.

  ಹೇಳಿಕೆಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದ ಜಗ್ಗೇಶ್

  ಹೇಳಿಕೆಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದ ಜಗ್ಗೇಶ್

  ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಕೆಲವು ತಿಂಗಳಿನಿಂದ ಸುದ್ದಿಯಲ್ಲಿದ್ದರು. ದರ್ಶನ್ ಅಭಿಮಾನಿಗಳು ಜಗ್ಗೇಶ್‌ಗೆ ಮುತ್ತಿಗೆ ಹಾಕಿದ್ದರು ಹಾಗೂ ಅದಕ್ಕೂ ಮುನ್ನಾ ಡಬ್ಬಿಂಗ್ ಸಿನಿಮಾ ವಿರೋಧಿಸಿದ್ದರ ಬಗ್ಗೆ ಜಗ್ಗೇಶ್ ವಿರುದ್ಧ ಕೆಲವು ಸ್ಟಾರ್ ನಟರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಅವರ ಮೇಲಿನ ಹೇಳಿಕೆಯನ್ನು ಗಮನಿಸಿದರೆ ಬೇರೆಯದ್ದೇ ಅರ್ಥ ಮೂಡುತ್ತದೆ.

  English summary
  Jaggesh said 'including me most of the movie industry people are selfish. He also said do not worship hero, heroines as god'.
  -->

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X